ಬೆಂಗಳೂರು : ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಬುಧವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ PSLV-C 46 ಸ್ಯಾಟಲೈಟ್ ಅನ್ನು ಉಡಾವಣೆಗೊಳಿಸುತ್ತಿದೆ. ಈ ಸ್ಯಾಟಲೈಟ್ ಗಡಿ ಪ್ರದೇಶಗಳಲ್ಲಿ ಭಯೋತ್ಪಾದಕರ ಚಲನವಲನಗಳನ್ನು ಪತ್ತೆ ಹಚ್ಚಲಿದೆ. ಗಡಿ ಸಮೀಪ ಇರುವ ಉಗ್ರರ ಶಿಬಿರಗಳನ್ನು ಇದು ಪತ್ತೆ ಮಾಡುವ ಮೂಲಕ ಮುಂಬರುವ ದಿನಗಳಲ್ಲಿ ದೇಶದಿಂದ ಭಯೋತ್ಪಾದನೆಯನ್ನು ನಿರ್ಮೂಲನೆಗೊಳಿಸಲು ಇದು ಸಹಾಯ ಮಾಡಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಸಿವನ್ ಹೇಳಿದ್ದಾರೆ.
PSLV-C 46 ಉಡಾವಣೆಯ ಮಹತ್ವದ ಕಾರ್ಯಾಚರಣೆ ನಾಳೆ ನಡೆಯುತ್ತಿರುವುದರಿಂದ, ಈ ಕಾರ್ಯಕ್ಕೆ ದೇವರ ಅನುಗ್ರಹವನ್ನು ಪಡೆಯುವ ಸಲುವಾಗಿ ಇಸ್ರೋ ಅಧ್ಯಕ್ಷ ಕೆ.ಸಿವನ್ ಅವರು ಮಂಗಳವಾರ ತಿರುಪತಿಗೆ ತೆರಳಿ ವೆಂಕಟೇಶ್ವರನ ದರ್ಶನ ಪಡೆದುಕೊಂಡಿದ್ದಾರೆ.
ತಿರುಪತಿಗೆ ತೆರಳುವಾಗ PSLV-C 46 ಸ್ಯಾಟಲೈಟಿನ ಮಾದರಿಯೊಂದನ್ನು ಅವರು ಕೊಂಡೊಯ್ದಿದ್ದು, ಕಾರ್ಯಾಚರಣೆಯ ಯಶಸ್ವಿಯಾಗಲಿ ಎಂದು ದೇಗುಲದಲ್ಲಿ ಅದನ್ನಿಟ್ಟು ವಿಶೇಷ ಪೂಜೆಯನ್ನು ನೆರವೇರಿಸಿದ್ದಾರೆ. ತಿರುಮಲ ದೇಗುಲ ಮಂಡಳಿ ಅವರ ಪೂಜಾ ಕಾರ್ಯವನ್ನು ಮುಂದೆ ನಿಂತು ನೆರವೇರಿಸಿದೆ.
PSLV-C 46 ಉಡಾವಣೆ ಬಗ್ಗೆ ಟ್ವಿಟ್ ಮಾಡಿರುವ ಇಸ್ರೋ, ” PSLV-C 46 ಮೇ 22 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 5.30ರ ಸುಮಾರಿಗೆ ಉಡಾವಣೆಗೊಳ್ಳಲಿದೆ. ರಿಸ್ಯಾಟ್-2ಬಿ ಅನ್ನು ಇದು ನಭಕ್ಕೆ ಚಿಮ್ಮಿಸಲಿದೆ” ಎಂದಿದೆ.
🇮🇳 #ISROMissions 🇮🇳
Countdown for launch of #PSLVC46 began at 04:30 am (IST) today from Satish Dhawan Space Centre, Sriharikota. Launch scheduled at 05:30 am (IST) tomorrow.Our updates will continue.
— ISRO (@isro) May 21, 2019
PSLV-C 46 ಪಿಎಸ್ಎಲ್ವಿಯ 48ನೇ ಮಿಶನ್ ಆಗಿದೆ. ಇದು ರಿಸ್ಯಾಟ್ ಅನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಲಾಂಚ್ ಪ್ಯಾಡಿನಿಂದ ಉಡಾವಣೆಗೊಳಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.