ನವದೆಹಲಿ: ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಗುಣಪಡಿಸುವುದು ಸಾಮಾನ್ಯ ಜನರಿಗೆ ಸಾಧ್ಯವಾಗಲಿ ಎಂಬ ಕಾರಣಕ್ಕೆ ಶ್ವಾಸಕೋಶ ಕ್ಯಾನ್ಸರ್ ಚಿಕಿತ್ಸೆಗೆ ಸಾಮಾನ್ಯವಾಗಿ ಬಳಸಲಾಗುವ ಕಿಮೋಥೆರಪಿ ಇಂಜೆಕ್ಷನ್ ಸೇರಿದಂತೆ ಹಲವಾರು ಕ್ಯಾನ್ಸರ್ ವಿರೋಧಿ ಔಷಧಿಗಳ ಬೆಲೆಯನ್ನು ನ್ಯಾಷನಲ್ ಫಾರ್ಮಸೆಟ್ಯುಕಲ್ ಪ್ರೈಸಿಂಗ್ ಅಥಾರಿಟಿ (NPPA) ಶೇ.90 ರಷ್ಟು ಕಡಿಮೆ ಮಾಡಿದೆ.
500 ಎಂಜಿ ಕಿಮೋಥೆರಪಿ ಇಂಜೆಕ್ಷನ್ pemetrexed ಬೆಲೆಯನ್ನು ರೂ. 22,000 ದಿಂದ ರೂ. 2,800 ಗೆ ಇಳಿಕೆ ಮಾಡಲಾಗಿದೆ. 100 ಎಂಜಿ ಬೆಲೆ ರೂ. 7,700 ರೂಪಾಯಿಗಳಿಂದ 800 ರೂಪಾಯಿಗೆ ಇಳಿಕೆಯಾಗಿದೆ. ಬೆಲೆ ಇಳಿಕೆಯ ನಿರ್ಧಾರದಿಂದಾಗಿ ದೇಶದಲ್ಲಿನ 22 ಲಕ್ಷ ಕ್ಯಾನ್ಸರ್ ರೋಗಿಗಳಿಗೆ ಸಹಾಯಕವಾಗಲಿದೆ ಮತ್ತು ಅವರ ಔಷಧಿ ಮೇಲಿನ ಖರ್ಚು ಭಾರೀ ಪ್ರಮಾಣದಲ್ಲಿ ಕಡಿಮೆಯಾಗಲಿದೆ.
Pemetrexed ಚುಚ್ಚುಮದ್ದು ಹೊರತುಪಡಿಸಿ, 8 ಇತರ ಕ್ಯಾನ್ಸರ್ ವಿರೋಧಿ ಔಷಧಿಗಳ ಬೆಲೆ ಕಡಿಮೆಯಾಗಿದೆ. ಎರಿರುಬಿಸ್ (ಬ್ರ್ಯಾಂಡ್ ಹೆಸರು ಎಪಿಕ್ಲೋರ್), ಎರ್ಲೋಟಾಜ್ ಮಾರಾಟ ಮಾಡುವ ಎರ್ಲೋಟಿನಿಬ್ ಮಾತ್ರೆಗಳು , ಎಯೋಡೋಲಿಮಸ್ (ಬ್ರ್ಯಾಂಡ್ ಹೆಸರು ಲ್ಯಾನೋಲಿಮಸ್), ಲೆಪರೊಲೈಡ್ ಆಸಿಟೇಟ್ ಹಾರ್ಮೋನ್ ಥೆರಪಿ ಇಂಜೆಕ್ಷನ್ (ಬ್ರ್ಯಾಂಡ್ ಹೆಸರು ಲಿಯುಪ್ರೊಗಾನ್ ಡಿಪೋಟ್) ಸೇರಿದಂತೆ ಇತರ ಔಷಧಗಳ ಬೆಲೆಗಳು ಕಡಿಮೆಯಾಗಿದೆ. ಈ ಎಲ್ಲಾ ಔಷಧಿಗಳನ್ನು ಕ್ಯಾನ್ಸರ್ ಚಿಕಿತ್ಸೆಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ವೆಚ್ಚ ಕಡಿತ ರೋಗಿಗಳಿಗೆ ವಿಶೇಷವಾಗಿಬಡ ರೋಗಿಗಳಿಗೆ ಹೆಚ್ಚು ಉಪಯುಕ್ತವಾಗಿದೆ.
ಮೋದಿ ಸರ್ಕಾರ ಬಂದ ಬಳಿಕ ಕ್ಯಾನ್ಸರ್ ಔಷಧಿ ಬೆಳೆ ಇಳಿಕೆಯಾಗುತ್ತಿರುವುದು ಇದು ಎರಡನೇಯ ಬಾರಿಯಾಗಿದೆ. ಈ ಹಿಂದೆ 390 ಕ್ಯಾನ್ಸರ್ ಔಷಧಿಗಳ ದರವನ್ನು ಶೇ. 87 ರಷ್ಟು ಮೋದಿ ಸರ್ಕಾರ ಕುಗ್ಗಿಸಿತ್ತು. ಈ ನಿರ್ಧಾರದಿಂದಾಗಿ ದೇಶದಲ್ಲಿನ ಒಟ್ಟು ಕ್ಯಾನ್ಸರ್ ರೋಗಿಗಳ ವಾರ್ಷಿಕ ಉಳಿತಾಯ ರೂ.800 ಕೋಟಿ ಎಂದು ಅಂದಾಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.