ನವದೆಹಲಿ: 2019ರ ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ, ಇನ್ನು ಫಲಿತಾಂಶವಷ್ಟೇ ಬರುವುದು ಬಾಕಿ ಇದೆ. ಆದರೆ ಈಗಾಗಲೇ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ತಮ್ಮ ಸಮೀಕ್ಷೆಗಳ ಫಲಿತಾಂಶವನ್ನು ಪ್ರಕಟಗೊಳಿಸಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವುದನ್ನು ಖಚಿತಪಡಿಸಿವೆ. ಅದರಲ್ಲೂ ಬಿಜೆಪಿ ಪಕ್ಷವೊಂದೇ ಸ್ಪಷ್ಟ ಬಹುಮತ ಪಡೆಯಲಿವೆ ಎಂಬುದನ್ನು ಬಹುತೇಕ ಸಮೀಕ್ಷೆಗಳು ತಿಳಿಸಿವೆ.
ನ್ಯೂಸ್ 18 IPSOS ಸಮೀಕ್ಷೆಯು ಎನ್ಡಿಎ 336 ಸ್ಥಾನಗಳನ್ನು ಪಡೆಯಲಿದೆ ಎಂದಿದೆ, ಬಿಜೆಪಿ ಒಂದೇ 276 ಸ್ಥಾನ ಪಡೆಯಲಿದೆ ಎಂಬುದಾಗಿ ತಿಳಿಸಿದೆ. ಟುಡೇಸ್ ಚಾಣಾಕ್ಯ ಎನ್ಡಿಎಗೆ 350 ಸ್ಥಾನಗಳನ್ನು ನೀಡಿದೆ. ಬಿಜೆಪಿ 300 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಎಲ್ಲಾ ಸಮೀಕ್ಷೆಗಳಿಗಿಂತಲೂ ಹೆಚ್ಚಿನ ಸ್ಥಾನವನ್ನು ಇದು ಎನ್ಡಿಎಗೆ ನೀಡಿದೆ. ಟುಡೇ-ಆಕ್ಸಿಸ್ 347 ಸ್ಥಾನಗಳನ್ನು ಎನ್ಡಿಎಗೆ ನೀಡಿದೆ ಮತ್ತು 93 ಸ್ಥಾನವನ್ನು ಯುಪಿಎಗೆ ನೀಡಿದೆ. ರಿಪಬ್ಲಿಕ್ ಟಿವಿ ಎರಡು ಏಜೆನ್ಸಿಗಳ ಸಮೀಕ್ಷೆಯನ್ನು ಆಧರಿಸಿ ವರದಿ ಮಾಡಿದ್ದು, ಸಿವೋಟರ್ ಮತ್ತು ಜನ್ ಕೀ ಬಾತ್ ಸಮೀಕ್ಷೆಯನ್ನು ಪ್ರಕಟಿಸಿದೆ. ಈ ಎರಡು ಏಜೆನ್ಸಿಗಳು ಕ್ರಮವಾಗಿ ಎನ್ಡಿಎಗೆ 287 ಮತ್ತು 305 ಸ್ಥಾನ ನೀಡಿದೆ.
ಟೈಮ್ಸ್ ನೌ-ವಿಎಂಆರ್ ಸಮೀಕ್ಷೆಯ ಪ್ರಕಾರ, ಬಿಜೆಪಿ ಮತ್ತು ಅದರ ಮೈತ್ರಿಗೆ 306 ಸ್ಥಾನ ನೀಡಿದೆ. ಬಿಜೆಪಿಯೊಂದೇ 262 ಸ್ಥಾನ ಗಳಿಸಲಿದೆ ಎಂದಿದೆ. ಈ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ 78 ಸ್ಥಾನ, ಯುಪಿಎ 132 ಸ್ಥಾನ ಗಳಿಸಲಿದೆ.
ಇಂಡಿಯಾ ಟಿವಿ-ಸಿಎನ್ಎಕ್ಸ್ ಪ್ರಕಾರ, ಎನ್ಡಿಎ 300 ಸ್ಥಾನ ಪಡೆಯಲಿದೆ, ನ್ಯೂಸ್ ನೇಷನ್ ಬಿಜೆಪಿ ಮತ್ತು ಅದರ ಮೈತ್ರಿಗೆ 286 ಸ್ಥಾನ ನೀಡಿದೆ. ಎಬಿಪಿ ನಿಲ್ಸೆನ್ ಎನ್ಡಿಎಗೆ 267 ಸ್ಥಾನ ನೀಡಿದೆ, ಬಹುಮತಕ್ಕಿಂತ ಇದು 5 ಸ್ಥಾನ ಕಡಿಮೆ. ನ್ಯೂಸ್ ಎಕ್ಸ್ ನೇತಾ ಬಿಜೆಪಿ ಮತ್ತು ಅದರ ಮೈತ್ರಿ 242 ಸ್ಥಾನವನ್ನು ಗೆಲ್ಲಲಿದೆ ಎಂದಿದೆ. ಎಲ್ಲದಕ್ಕಿಂತ ಇದುವೇ ಎನ್ಡಿಎಗೆ ಕಡಿಮೆ ಸ್ಥಾನಗಳನ್ನು ನೀಡಿದೆ.
ಚುನಾವಣೋತ್ತರ ಸಮೀಕ್ಷೆಗಳು ಎಲ್ಲವೂ ನಿಖರವಾಗಿರುವುದಿಲ್ಲ ಎಂಬುದು ಸತ್ಯ, ಆದರೆ ನಿಜವಾದ ಫಲಿತಾಂಶದ ಬಗೆಗಿನ ಒಂದು ಸ್ಪಷ್ಟವಾದ ಚಿತ್ರಣವನ್ನು ನೀಡುತ್ತದೆ. 11 ಸಮೀಕ್ಷೆಗಳ ಪ್ರಕಾರ 9 ಎನ್ಡಿಎಗೆ ಸ್ಪಷ್ಟ ಬಹುಮತವನ್ನು ನೀಡಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.