ವಾರಣಾಸಿ: ಅತ್ಯಮೂಲ್ಯ ನೀರನ್ನು ಸಂರಕ್ಷಣೆ ಮಾಡುವ ಸಲುವಾಗಿ ವಾರಣಾಸಿಯಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ಮತ್ತು ವಿಶಾಲ್ ಭಾರತ್ ಸಂಸ್ಥಾನ ಜಂಟಿಯಾಗಿ ವಾಟರ್ ಬ್ಯಾಂಕ್ ಅನ್ನು ಸ್ಥಾಪನೆ ಮಾಡಿದೆ.
ನೀರಿನ ಬ್ಯಾಂಕ್ ಅತ್ಯಂತ ನಾವಿನ್ಯ ಪ್ರಯೋಗವಾಗಿದ್ದು, ಆರ್ ಎಸ್ ಎಸ್ ಹಿರಿಯ ಮುಖಂಡ, ಚಿಂತಕ ಮತ್ತು ಸಾಮಾಜಿಕ ಕಾರ್ಯಕರ್ತ ಇಂದ್ರೇಶ್ ಕುಮಾರ್ ಮೇ 16ರಂದು ಮುಸ್ಲಿಂ ಸಮುದಾಯದ ಹುಡುಗನಿಗೆ ನೀರನ್ನು ನೀಡುವ ಮೂಲಕ ಇದನ್ನು ಉದ್ಘಾಟನೆಗೊಳಿಸಿದರು. ಮುಸ್ಲಿಂ ಪ್ರಾಬಲ್ಯವಿರುವ ಸಹಕ್ಕರ್ ತಲಬ್, ಶೈಲಪುತ್ರಿ ಚೌರಹ ಪ್ರದೇಶಗಳನ್ನು ಆಧರಿಸಿ ಈ ಯೋಜನೆಯನ್ನು ಆರಂಭಿಸಲಾಗಿದೆ.
ಈ ವೇಳೆ ಮಾತನಾಡಿದ ಇಂದ್ರೇಶ್, “ರಂಜಾನ್ ಪವಿತ್ರ ಮಾಸ ನಮಗೆ ನೀರಿನ ಸಂರಕ್ಷಣೆಯ ಸ್ಪಷ್ಟ ಸಂದೇಶವನ್ನು ರವಾನಿಸುತ್ತದೆ. ಇಸ್ಲಾಂ ಒಂದು ಹನಿ ನೀರಿನ ಮೌಲ್ಯ ಮತ್ತು ಅದನ್ನು ಸಂರಕ್ಷಿಸುವ ಅವಶ್ಯಕತೆಯನ್ನು ಪ್ರತಿಪಾದಿಸುತ್ತದೆ” ಎಂದಿದ್ದಾರೆ.
ವಾಟರ್ ಬ್ಯಾಂಕಿನ ಪ್ರಮುಖ ಅಂಶಗಳು
• ಪ್ರತಿ ಕುಟುಂಬಕ್ಕೆ ನೀರಿನ ಪಾಸ್ ಬುಕ್ ಅನ್ನು ಇದು ನೀಡುತ್ತದೆ.
• ಕುಟುಂಬದ ಗಾತ್ರಕ್ಕೆ ಅನುಗುಣವಾಗಿ ನೀರು ನೀಡುತ್ತದೆ.
• ಬಳಕೆದಾರರು ಒಂದು ಹನಿ ನೀರನ್ನು ಕೂಡ ವ್ಯರ್ಥ ಮಾಡುವುದಿಲ್ಲ ಎಂಬ ಭರವಸೆಯನ್ನು ನೀಡಬೇಕು.
• ಬ್ಯಾಂಕ್ ಕುಟುಂಬದ ಮಹಿಳೆಯನ್ನು ಮುಖ್ಯಸ್ಥೆಯಾಗಿ ಪರಿಗಣಿಸುತ್ತದೆ ಮತ್ತು ಆಕೆಯ ಹೆಸರಿನಲ್ಲಿ ಪಾಸ್ ಪುಸ್ತಕವನ್ನು ವಿತರಿಸುತ್ತದೆ.
• ಇಂತಹ ಪಾಸ್ ಪುಸ್ತಕಗಳನ್ನು ಮೊದಲ 20 ಖಾತೆದಾರರಿಗೆ ವಿತರಣೆ ಮಾಡಲಾಗಿದೆ.
• ಖಾತೆ ತೆರೆಯಲು ವ್ಯಕ್ತಿಗಳು ಆಧಾರ್ ಕಾರ್ಡ್ ಮತ್ತು ಎರಡು ಭಾವಚಿತ್ರಗಳನ್ನು ನೀಡಬೇಕಾಗುತ್ತದೆ.
• ನೀರಿನ ಅಭಾವ ಎದುರಿಸುತ್ತಿರುವ ಕುಟುಂಬಗಳಿಗೆ ಮಾತ್ರ ಪಾಸ್ ಪುಸ್ತಕ ನೀಡಲಾಗುತ್ತದೆ.
• ಖಾತೆದಾರರ ಕುಟುಂಬಗಳಿಗೆ ನೀರು ಸಂರಕ್ಷಣೆ ತಂತ್ರಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.