ನವದೆಹಲಿ: ಇತ್ತೀಚಿಗೆ ಬಹಳಷ್ಟು ಸುದ್ದಿ ಮಾಡುತ್ತಿರುವ ‘ದಿ ತಾಷ್ಕೆಂಟ್ ಫೈಲ್ಸ್’ ಸಿನಿಮಾ ಮೇ 18 ರಂದು ರಾಷ್ಟ್ರಪತಿ ಭವನದಲ್ಲಿ ಸ್ಕ್ರೀನಿಂಗ್ ಆಗಲಿದೆ. ಮಾತ್ರವಲ್ಲದೇ, ಮೇ 19 ರಂದು ಫಿಲ್ಮ್ ಡಿವಿಶನಿನಲ್ಲಿ ಸಿನಿಮಾವನ್ನು ಸ್ಕ್ರೀನಿಂಗ್ ಮಾಡಲು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಆಹ್ವಾನವನ್ನು ನೀಡಿದೆ.
ಈ ಸಿನಿಮಾವನ್ನು ವಿವೇಕ್ ಅಗ್ನಿಹೋತ್ರಿ ನಿರ್ಮಾಣ ಮಾಡಿದ್ದು, ಕಾಂಗ್ರೆಸ್ ಮತ್ತು ಅದರ ಬೆಂಬಲಿಗರು ಈ ಸಿನಿಮಾಗೆ ಭಾರೀ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಸಾವು ಮತ್ತು ಅದರ ಸುತ್ತಲಿನ ಕಥೆಯನ್ನು ಈ ಸಿನಿಮಾ ಹೇಳುತ್ತದೆ. ತಾಷ್ಕೆಂಟ್ ಒಪ್ಪಂದದ ಎಳೆಯನ್ನು ಇಟ್ಟುಕೊಂಡು ಮಾಡಿದ ಸಿನಿಮಾ ಇದಾಗಿದೆ.
ರಾಷ್ಟ್ರಪತಿ ಭನವದಲ್ಲಿ ಸ್ಕ್ರೀನಿಂಗ್ ಆಗುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅಗ್ನಿಹೋತ್ರಿ, “ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತದೆ ಮತ್ತು ಅವುಗಳು ಬಿಡುಗಡೆಗೊಳ್ಳುತ್ತವೆ. ಆದರೆ ಕೆಲವೇ ಕೆಲವು ಸಿನಿಮಾಗಳು ಮಾತ್ರ ರಾಷ್ಟ್ರಪತಿ ಭವನದಲ್ಲಿ ಸ್ಕ್ರೀನಿಂಗ್ ಆಗುತ್ತವೆ. ಅದು ಜೀವಮಾನದಲ್ಲಿ ಸಿಗುವ ಒಂದು ಅವಕಾಶವಷ್ಟೇ. ನನ್ನ ಸಿನಿಮಾದಲ್ಲಿ ಭಾಗಿಯಾದ ಎಲ್ಲರಿಗೂ ಇದು ಸಂಭ್ರಮಿಸುವ ಸಮಯ, ಚಿತ್ರ ನಿರ್ಮಾಣಕಾರನಾಗಿ ನನಗೆ ಅಮೋಘ ಕ್ಷಣ” ಎಂದಿದ್ದಾರೆ.
ತಾಷ್ಕೆಂಟ್ ಫೈಲ್ಸ್ 2 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾದ ಸಣ್ಣ ಬಜೆಟ್ ಸಿನಿಮಾವಾಗಿದೆ. ಆದರೆ ಬಾಕ್ಸ್ ಆಫೀಸ್ನಲ್ಲಿ ಅದು ರೂ. 15 ಕೋಟಿ ಗಳಿಸಿದೆ. IMDB ಇದಕ್ಕೆ 8.5 ರೇಟಿಂಗ್ಸ್ ನೀಡಿದೆ. ಇದು ‘3 ಈಡಿಯಟ್ಸ್’ಗೆ ಸಿಕ್ಕ 8.4 ರೇಟಿಂಗ್ಸ್ ಗಿಂತಲೂ ಅಧಿಕ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.