ನವದೆಹಲಿ: ವಿಶ್ವಕ್ಕೆ ಶಾಂತಿಯ ಸಂದೇಶ ನೀಡಿದ ಬುದ್ಧನನ್ನು ಬುದ್ಧ ಪೂರ್ಣಿಮೆಯ ಅಂಗವಾಗಿ ದೇಶ ಸ್ಮರಿಸಿಕೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ದೇಶದ ಜನತೆಗೆ ಬುದ್ಧ ಪೂರ್ಣಿಮೆಯ ಶುಭಾಶಯಗಳನ್ನು ಕೋರಿದ್ದಾರೆ.
“ಬುದ್ಧ ಪೂರ್ಣಿಮೆಯಾ ಶುಭ ಸಂದರ್ಭದಲ್ಲಿ, ಭಾರತದ ನನ್ನ ಎಲ್ಲಾ ದೇಶವಾಸಿಗಳಿಗೂ, ಜಗತ್ತಿನಾದ್ಯಂತ ಇರುವ ಬುದ್ಧನ ಅನುಯಾಯಿಗಳಿಗೆ ಶುಭ ಕಾಮನೆಗಳನ್ನು ಮತ್ತು ಶುಭ ಹಾರೈಕೆಯನ್ನು ತಿಳಿಸುತ್ತೇನೆ” ಎಂದು ರಾಷ್ಟ್ರಪತಿ ಕೋವಿಂದ್ ಟ್ವಿಟ್ ಮಾಡಿದ್ದಾರೆ.
“ಅಹಿಂಸೆ, ಕರುಣೆ, ಶಾಂತಿ ಮತ್ತು ಮನುಕುಲದ ಸೇವೆ ಬುದ್ಧ ತತ್ವಗಳ ಪ್ರಮುಖ ಸಾರವಾಗಿದ್ದು ಮಾನವ ಇತಿಹಾಸಕ್ಕೆ ಮತ್ತು ನಾಗರಿಕರಿಗೆ ದೊಡ್ಡ ಪ್ರೇರಣೆಯಾಗಿದೆ. ಆತನ ಬೋಧನೆ ಈಗಿನ ಕಾಲಕ್ಕೆ ಹೆಚ್ಚು ಪ್ರಸ್ತುತವಾಗಿದೆ” ಎಂದಿದ್ದಾರೆ.
Greetings and good wishes to fellow citizens and to the global Buddhist community on #BuddhaPurnima. Lord Buddha’s message of peace, non-violence and compassion hold even greater significance today. May his teachings guide us towards universal fraternity #PresidentKovind
— President of India (@rashtrapatibhvn) May 18, 2019
ಪ್ರಧಾನಿ ಮೋದಿ ಟ್ವಿಟ್ ಮಾಡಿ, “ಎಲ್ಲಾ ದೇಶವಾಸಿಗಳಿಗೂ ಬುದ್ಧ ಪೂರ್ಣಿಮೆಯಾ ಅಪಾರ ಶುಭ ಕಾಮನೆಗಳು. ಸತ್ಯ, ಅಹಿಂಸೆ, ದಯೆ, ಕರುಣೆ ಮತ್ತು ಶಾಂತಿಯ ದೂತನಾದ ಬುದ್ಧನ ಮಹಾನ್ ಸಂದೇಶಗಳು ದೇಶವಾಸಿಗಳನ್ನು ಸದಾ ಪ್ರೇರಿತಗೊಳಿಸುತ್ತಿರುತ್ತದೆ” ಎಂದಿದ್ದಾರೆ. ಮಾತ್ರವಲ್ಲದೇ, ಬುದ್ಧನಿಗೆ ನಮನ ಸಲ್ಲಿಸುವ ತನ್ನ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
सभी देशवासियों को बुद्ध पूर्णिमा की बहुत-बहुत शुभकामनाएं। सत्य, अहिंसा, दया, करुणा और शांति के दूत भगवान बुद्ध के महान संदेश देशवासियों को सदा प्रेरित करते रहेंगे। pic.twitter.com/X5fPmwpSML
— Chowkidar Narendra Modi (@narendramodi) May 18, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.