ಲಕ್ನೋ: ಉತ್ತರಪ್ರದೇಶದಲ್ಲಿರುವ ಘಾಜಿಪುರ್ ಜಿಲ್ಲೆಯ ಪೂರ್ವಭಾಗದಲ್ಲಿರುವ ಗಹ್ಮರ್ ಗ್ರಾಮವನ್ನು ‘ಯೋಧರ ಗ್ರಾಮ’ ಎಂದು ಕರೆಯಲಾಗುತ್ತದೆ. ಈ ಗ್ರಾಮದ ಪ್ರತಿ ಮನೆಯಲ್ಲೂ ಓರ್ವ ಯೋಧನಿದ್ದಾನೆ. ಒಂದು ಲಕ್ಷ ಜನಸಂಖ್ಯೆ ಇರುವ ಈ ಗ್ರಾಮದ ಕೆಲವೊಂದು ಮನೆಗಳಲ್ಲಿ ನಿವೃತ್ತ ಯೋಧರು ಇದ್ದರೆ, ಕೆಲವೊಂದು ಮನೆಗಳಲ್ಲಿ ದೇಶಸೇವೆ ಮಾಡುತ್ತಿರುವ ಯುವ ಯೋಧರಿದ್ದಾರೆ. ಒಟ್ಟಿನಲ್ಲಿ ಈ ಗ್ರಾಮ ಸೇನೆಯೊಂದಿಗೆ ಅವಿನಾಭಾವವನ್ನು ಹೊಂದಿದೆ.
ಮೇ 19 ರಂದು ಕೊನೆಯ ಹಂತದ ಚುನಾವಣೆಯನ್ನು ಎದುರಿಸುತ್ತಿರುವ ಈ ಗ್ರಾಮದಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿರುವ ವಿಷಯವೆಂದರೆ ಅದು ರಾಷ್ಟ್ರೀಯ ಭದ್ರತೆ, ಭಾರತೀಯ ಸೇನೆಯ ಶೌರ್ಯ ಮತ್ತು ಸೈನಿಕರ ಸುರಕ್ಷತೆ.
“ಸರ್ಜಿಕಲ್ ಸ್ಟ್ರೈಕ್, ರಾಷ್ಟ್ರೀಯತೆ, ನವ ಭಾರತ ಮತ್ತು ರಾಷ್ಟ್ರೀಯ ಭದ್ರತೆಯ ವಿಷಯ ಜಾತಿ, ಜನಾಂಗವನ್ನು ಮೀರಿ ನಿಂತಿದೆ. ಎಲ್ಲರೂ ಭಾರತಕ್ಕಾಗಿ ಮತ ಹಾಕಲು ಸಜ್ಜಾಗಿದ್ದಾರೆ ಎಂಬುದು ಕಾಣಿಸುತ್ತಿದೆ” ಎಂಬುದಾಗಿ ಸಾಮಾಜಿಕ ಕಾರ್ಯಕರ್ತ ಸುರೇಂದ್ರ ಸಿಂಗ್ ಹೇಳಿದ್ದಾರೆ.
“ಗಹ್ಮರ್ ಸೈನಿಕರ ಗ್ರಾಮ. ನಾವು ರಾಷ್ಟ್ರೀಯತೆಯನ್ನು ಎಲ್ಲದಕ್ಕಿಂತಲೂ ಮಿಗಿಲಾಗಿ ಇಡುತ್ತೇವೆ” ಎಂದಿದ್ದಾರೆ.
ಅಲ್ಲದೇ, ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ವೈಮಾನಿಕ ದಾಳಿಗಳು ನಡೆಯುವುದಕ್ಕಿಂತ ಮುಂಚೆ ಈ ಗ್ರಾಮದಲ್ಲೂ ರಾಜಕೀಯ ಭಿನ್ನಾಭಿಪ್ರಾಯಗಳು ಇತ್ತು. ಆದರೆ ಈಗ ಎಲ್ಲರೂ ನಮ್ಮ ದೇಶ ಪ್ರಧಾನಿ ನರೇಂದ್ರ ಮೋದಿಯವರ ಕೈಯಲ್ಲಿ ಸುರಕ್ಷಿತವಾಗಿದೆ ಎಂಬುದನ್ನು ಮನಗಂಡಿದ್ದಾರೆ. ಅವರು ಭಾರತದ ಭದ್ರತೆಯನ್ನು ಬಲಗೊಳಿಸಿದ್ದಾರೆ ಮತ್ತು ಜಗತ್ತಿನ ಮುಂದೆ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಸುರೇಂದ್ರ ಸಿಂಗ್ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.