ಪುಣೆ: ಪುಣೆಯ 10 ಮಂದಿ ಪರ್ವತಾರೋಹಿಗಳ ತಂಡವೊಂದು ಬುಧವಾರ ವಿಶ್ವದ ಮೂರನೇ ಅತೀದೊಡ್ಡ ಶಿಖರ ಮೌಂಟ್ ಕಾಂಚನಜುಂಗವನ್ನು ಏರಿ ಸಾಧನೆಯನ್ನು ಮಾಡಿದೆ.
ಪರ್ವತಾರೋಹಿಗಳು ಅತ್ಯಂತ ಕಠಿಣ ಹವಮಾನವನ್ನು ಎದುರಿಸಿ, ಈ ಶಿಖರದ ತುತ್ತ ತುದಿಯನ್ನು ಏರಿದ್ದಾರೆ. ಪರ್ವತಾರೋಹಿ ಉಮೇಶ್ ಝಿರ್ಪೆ ಅವರ ನೇತೃತ್ವದಲ್ಲಿ ನಡೆಯುತ್ತಿರುವ 7ನೇ ಯಶಸ್ವಿ 8000 ಮೀಟರ್ ಪರ್ವತ ಯಾತ್ರೆ ಇದಾಗಿದೆ. ಇವರು ಮೌಂಟ್ ಕಾಂಜನಜುಂಗಕ್ಕೆ 30 ಅಂತಾರಾಷ್ಟ್ರೀಯ ಪರ್ವತಾರೋಹಿಗಳ ಯಾತ್ರೆಯನ್ನೂ ಮುನ್ನಡೆಸಿದ್ದಾರೆ ಎಂದು ಮೌಂಟೆನೆರಿಂಗ್ ಕ್ಲಬ್ ಗಿರಿಪ್ರೇಮಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಾಂಚನಜುಂಗ ಬೇಸ್ ಕ್ಯಾಂಪಿನಿಂದ ಝಿರ್ಪಿ ಅವರು ಗಿರಿಪ್ರೇಮಿ ಸದಸ್ಯರೊಂದಿಗೆ ಫೋನ್ ಮೂಲಕ ಸಂಭಾಷಣೆಯನ್ನು ನಡೆಸಿ ಮಾಹಿತಿಯನ್ನು ನೀಡಿದ್ದಾರೆ.
ಮೇ 14 ರ ಸಂಜೆ 5 ಕ್ಕೆ ಗಿರಿಪ್ರೇಮಿ ಕ್ಲಬಿನ ಎಲ್ಲಾ 10 ಮಂದಿ ಸದಸ್ಯರು ಯಶಸ್ವಿಯಾಗಿ ಮೌಂಟ್ ಕಾಂಚನಜುಂಗವನ್ನು ಏರಲು ಪ್ರಾರಂಭಿಸಿದ್ದಾರೆ. 12 ಗಂಟೆಗಳ ಸತತ ನಡಿಗೆಯೊಂದಿಗೆ ಮೇ 15 ರ ಬೆಳಿಗ್ಗೆ 5.30 ಕ್ಕೆ ಕಾಂಚನಜುಂಗವನ್ನು ತಲುಪಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸ್ವಲ್ಪ ಸಮಯದ ವಿಶ್ರಾಂತಿಯ ಬಳಿಕ ಮೇ 16 ರಂದು ಅವರು ವಾಪಾಸ್ಸಾಗಲಿದ್ದಾರೆ.
ಕಾಂಚನಜುಂಗ 28,169 ಅಡಿ ಎತ್ತರವಿದ್ದು, ವಿಶ್ವದ ಮೂರನೇ ಅತೀದೊಡ್ಡ ಶಿಖರವಾಗಿದೆ. ಇದು ನೇಪಾಳ ಮತ್ತು ಭಾರತದ ಸಿಕ್ಕಿಂನ ಮಧ್ಯ ಭಾಗದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.