ನವದೆಹಲಿ: ನೇಪಾಳದಿಂದ ಜಮ್ಮು ಕಾಶ್ಮೀರದ ಬಂಡೀಪೋರಾಗೆ ಉಗ್ರರು ಅಕ್ರಮವಾಗಿ ನುಸುಳಿದ್ದು, ಬೃಹತ್ ಮಟ್ಟದ ದುಷ್ಕೃತ್ಯವನ್ನು ನಡೆಸಲು ಸಂಚು ರೂಪಿಸಿದ್ದಾರೆ ಎಂಬುದಾಗಿ ಗುಪ್ತಚರ ಇಲಾಖೆಯು ಎಚ್ಚರಿಕೆ ರವಾನಿಸಿದೆ. ಈ ಹಿನ್ನಲೆಯಲ್ಲಿ ಭದ್ರತಾ ಪಡೆಗಳು ಹೈ ಅಲರ್ಟ್ನಲ್ಲಿವೆ.
ಸಾಜಿದ್ ಮಿರ್ ಎಂಬ ಭಯೋತ್ಪಾದಕ ನೇಪಾಳದ ಕಠ್ಮಂಡುವಿನಿಂದ ಬಂಡಿಪೋರಾಗೆ ಮೂವರು ವಿದೇಶಿ ಭಯೋತ್ಪಾದಕರನ್ನು ಕರೆ ತಂದಿದ್ದಾನೆ ಎಂದು ಗುಪ್ತಚರ ವರದಿ ಹೇಳಿದೆ.
ಬಂಡೀಪೋರಾವು ವಿದೇಶದ ಭಯೋತ್ಪಾದಕರಿಂದ ಹಿಡಿದು ಜೈಶೇ, ಲಷ್ಕರ್ ಉಗ್ರರಿಗೂ ಸುರಕ್ಷಿತವಾದ ತಾಣ ಎನಿಸಿಕೊಂಡಿದೆ. ಆದರೀಗ ನೇಪಾಳದಿಂದ ಇಲ್ಲಿಗೆ ಭಯೋತ್ಪಾದಕರು ಒಳನುಸುಳಿರುವುದು ಭಾರೀ ಮಹತ್ವ ಪಡೆದುಕೊಂಡಿದೆ. ಯಾಕೆಂದರೆ 2017-18ರ ನಡುವೆ ನೇಪಾಳದಿಂದ ಭಾರತಕ್ಕೆ ಯಾವೊಬ್ಬ ಉಗ್ರರ ನುಸುಳುವಿಕೆ ನಡೆದಿಲ್ಲ.
ವರದಿಯ ಪ್ರಕಾರ, ಬಾಂಗ್ಲಾದೇಶ ಮೂಲದ ಜಮಾತ್ ಉಲ್ ಮುಜಾಹಿದ್ದೀನ್ ಸಂಘನೆಯು ಮಹಿಳಾ ಸುಸೈಡ್ ಬಾಂಬರ್ ಅನ್ನು ತರಬೇತಿಗೊಳಿಸಿದ್ದು, ಆಕೆ ಬಾಂಗ್ಲಾದೇಶ, ಭಾರತ ಮತ್ತು ಮಯನ್ಮಾರಿನಲ್ಲಿನ ಬುದ್ಧ ದೇಗುಲಗಳನ್ನು ಟಾರ್ಗೆಟ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ, ಮೇ 18ರಂದು ಬುದ್ಧ ಪೂರ್ಣಿಯ ಸಂದರ್ಭದಲ್ಲಿ ಈಕೆ ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನವನ್ನು ಮಾಡಬಹುದು ಎನ್ನಲಾಗಿದೆ. ಬೌದ್ಧರು ಮುಸ್ಲಿಮರಿಗೆ ನೀಡುತ್ತಿರುವ ಕಿರುಕುಳಕ್ಕೆ ಸೇಡು ತೀರಿಸಿಕೊಳ್ಳುವುದು ಈಕೆಯ ಗುರಿ ಎನ್ನಲಾಗಿದೆ.
ಪಾಕಿಸ್ಥಾನದ ನಟೋರಿಯಸ್ ಗುಪ್ತಚರ ಸಂಘಟನೆ ಐಎಸ್ಐಯು ನೇಪಾಳದಲ್ಲಿ ಬಲಿಷ್ಠ ನೆಟ್ವರ್ಕ್ ಸ್ಥಾಪನೆ ಮಾಡಿತ್ತು, ಇತ್ತೀಚಿನ ದಿನಗಳಲ್ಲಿ ಈ ನೆಟ್ವರ್ಕ್ ಅನ್ನು ಬಲಹೀನಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.