ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಆರೋಗ್ಯ ಯೋಜನೆಯಾದ ಆಯುಷ್ಮಾನ್ ಭಾರತ್, ಸಾರ್ವತ್ರಿಕ ಆರೋಗ್ಯ ಕವಚದ ವಿಷಯದಲ್ಲಿ ಅತ್ಯಂತ ಮಹತ್ವಪೂರ್ಣ ಹೆಜ್ಜೆಯಾಗಿದೆ ಎಂದು ಅಮೆರಿಕಾದ ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಗ್ಲೋಬಲ್ ಡೆವಲಪ್ಮೆಂಟ್ ಶುಕ್ರವಾರ ಹೇಳಿದೆ.
ಪ್ರಧಾನಮಂತ್ರಿ-ಜನ ಆರೋಗ್ಯ ಯೋಜನೆಯ ಒಂದು ವರ್ಷದ ಜನಪ್ರಿಯತೆಯನ್ನು ವಿಮರ್ಶೆ ಮಾಡಿರುವ ಥಿಂಕ್ ಟ್ಯಾಂಕ್, ಯೋಜನೆಯ ಸರ್ವ ಪ್ರಯತ್ನಗಳು ಅತ್ಯಂತ ಸಕಾರಾತ್ಮಕವಾಗಿದೆ ಎಂದಿದೆ. ಆದರೆ ಅನುಷ್ಠಾನದ ವಿಷಯದಲ್ಲಿ ಕೆಲವೊಂದು ಸವಾಲುಗಳು ಇರುವುದನ್ನು ಅದು ಉಲ್ಲೇಖ ಮಾಡಿದೆ. ದರ ಮತ್ತು ಗುಣಮಟ್ಟ ತೊಡಕಾಗಬಹುದು ಎಂದು ಎಚ್ಚರಿಸಿದೆ.
“ಮೋದಿ ಕೇರ್ ನೂರು ಮಿಲಿಯನ್ ಜನರಿಗೆ ಲಭ್ಯವಾಗುವಂತೆಯೇ ಇದೆ, ಇದು ಸರ್ಕಾರದ ಅನುದಾನದಿಂದ ಆರೋಗ್ಯ ಸೇವೆ ಪಡೆಯುವವರ ಸಂಖ್ಯೆಯನ್ನು ವೃದ್ಧಿ ಮಾಡಿದೆ. ಆರಂಭಿಕ ನಿರೀಕ್ಷೆಯನ್ನೂ ಮೀರಿ ಇದು ಪ್ರಗತಿ ಕಾಣುತ್ತಿದೆ” ಎಂದು ಥಿಂಕ್ ಟ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಅಮಂಡಾ ಗ್ಲಾಸ್ಮೆನ್ ಹೇಳಿದ್ದಾರೆ.
“ಆಯುಷ್ಮಾನ್ ಭಾರತ್ ಯೋಜನೆ ಪ್ರಯೋಜನವನ್ನು ಪಡೆಯಲು 500 ಮಿಲಿಯನ್ ಜನರು ಅರ್ಹರಾಗಿದ್ದಾರೆ ಎಂಬುದನ್ನು ನಾವು ಮನಗಂಡಿದ್ದೇವೆ. ಅದು ನಿಜಕ್ಕೂ ಉತ್ತೇಜನಕಾರಕ ಸಂಖ್ಯೆ, ದರ ಮತ್ತು ಗುಣಮಟ್ಟದ ವಿಷಯದಲ್ಲಿ ಇನ್ನೂ ಸಾಕಷ್ಟು ಕಾರ್ಯನಿರ್ವಹಿಸಬೇಕಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.