ಥಿಂಪು: ಕಳೆದ ಶನಿವಾರ ಭೂತಾನಿನ ಜಿಗ್ಮೆ ಡೊರ್ಜಿ ವಾಂಗ್ಚುಕ್ ನ್ಯಾಷನಲ್ ರಿಫೆರಲ್ ಹಾಸ್ಪಿಟಲಿನಲ್ಲಿ ಡಾ. ಲೊತಾಯ್ ಶೇರಿಂಗ್ ಅವರು ಯುರಿನರಿ ಬ್ಲಾಡರ್ ಸರ್ಜರಿಯನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದರು. ಆದರೆ ಶೇರಿಂಗ್ ಸಾಮಾನ್ಯ ವೈದ್ಯರಲ್ಲ, ಅವರು ಭೂತಾನಿನ ಪ್ರಧಾನಮಂತ್ರಿ.
ಹೌದು, ಹಿಮಾಲಯದ ಪುಟ್ಟ ದೇಶ ಭೂತಾನಿನ ಪ್ರಧಾನಮಂತ್ರಿ ಈಗಲೂ ವೀಕೆಂಡ್ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನೂರಾರು ರೋಗಿಗಳಿಗೆ ಮರುಜೀವನವನ್ನು ಕಲ್ಪಿಸಿಕೊಡುತ್ತಿದ್ದಾರೆ. 2008ರಲ್ಲಿ ಈ ದೇಶದಲ್ಲಿ ಸರ್ವಾಧಿಕಾರ ಕೊನೆಗೊಂಡು ಪ್ರಜಾಪ್ರಭುತ್ವ ಸ್ಥಾಪನೆಯಾಯಿತು. ಕಳೆದ ವರ್ಷ ಇಲ್ಲಿ ಮೂರನೇ ಚುನಾವಣೆ ಜರುಗಿತ್ತು, ಈ ವೇಳೆ ಶೇರಿಂಗ್ ಅವರು ಪ್ರಧಾನಿಯಾಗಿ ಆಯ್ಕೆಯಾದರು.
ವೈದ್ಯ ವೃತ್ತಿ ಮಾಡುವುದರಿಂದ ನನ್ನ ಒತ್ತಡ ನಿವಾರಣೆಯಾಗುತ್ತದೆ ಎನ್ನುವ ಶೇರಿಂಗ್ ಅವರು, ಕೆಲವರಿಗೆ ಗಾಲ್ಫ್ ಆಡುವುದು ಇಷ್ಟವಾಗುತ್ತದೆ, ಕೆಲವರಿಗೆ ಆರ್ಚರಿ ಇಷ್ಟವಾಗುತ್ತದೆ. ಆದರೆ ನನಗೆ ಆಪರೇಶನ್ ಮಾಡುವುದು ಇಷ್ಟವಾಗುತ್ತದೆ. ಹಾಗಾಗಿ ವಿಕೆಂಡ್ಗಳಲ್ಲಿ ಸರ್ಜರಿಗಳಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಹೇಳುತ್ತಾರೆ.
ಭೂತಾನ್ ದೇಶ ನಾಗರಿಕ ತಲಾ ರಾಷ್ಟ್ರೀಯ ಸಂತೋಷವನ್ನು ಅಳೆಯುವುದಕ್ಕೆ ಅತ್ಯಂತ ಫೇಮಸ್ ಆಗಿದೆ. ಅಲ್ಲಿ ಆರ್ಥಿಕ ಅಭಿವೃದ್ಧಿಗಿಂತ ಹೆಚ್ಚಾಗಿ ಸಂತೋಷ ವೃದ್ಧಿಗೆ ಒತ್ತು ನೀಡಲಾಗುತ್ತದೆ. ಶೇ.60ರಷ್ಟು ದೇಶ ಅರಣ್ಯವನ್ನು ಹೊಂದಿರಬೇಕು ಎಂಬುದನ್ನು ಅಲ್ಲಿನ ಸಂವಿಧಾನ ಕಡ್ಡಾಯಗೊಳಿಸಿದೆ. ಇಲ್ಲಿ ತಂಬಾಕಿಗೆ ನಿಷೇಧವಿದೆ. ರಾಜಧಾನಿಯಲ್ಲೇ ಟ್ರಾಫಿಕ್ ಲೈಟ್ಗಳು ಇಲ್ಲ. ಇಂಗಾಲ ವಿರೋಧಿ ಧೋರಣೆಯನ್ನು ಈ ಪುಟ್ಟ ರಾಷ್ಟ್ರ ಇಟ್ಟುಕೊಂಡಿದೆ.
ಶೇರಿಂಗ್ ಅವರು, ಜಪಾನ್, ಬಾಂಗ್ಲಾ, ಆಸ್ಟ್ರೇಲಿಯಾಗಳಲ್ಲಿ ವೈದ್ಯಕೀಯ ವೃತ್ತಿಯನ್ನು ಮಾಡಿದ್ದಾರೆ. 2013ರಿಂದ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.