ಕರಾಚಿ: ಪಾಕಿಸ್ಥಾನದಲ್ಲಿ ಕಳೆದ 35 ವರ್ಷಗಳ ಬಳಿಕ ಈ ಬಾರಿ ಅತ್ಯಧಿಕ 44 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಿದ್ದು, ಬಿಸಿಗಾಳಿಗೆ 1500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಎದಿ ಫೌಂಡೇಷನ್ ತಿಳಿಸಿದೆ.
ಈ ಹಿಂದೆ 1981ರಲ್ಲಿ ಇದೇ ರೀತಿ ಉಷ್ಣಾಂಶ ದಾಖಲಾಗಿತ್ತು. ಇಲ್ಲಿನ ನಿವಾಸಿಗಳು ನೀರಿನ ಮುಖ್ಯ ಪೈಪ್ಗೆ ನೇತು ಹಾಕಿ ನೀರು ಚಿಮ್ಮಿಸಿ ತಂಪು ಮಾಡುತ್ತಿದ್ದಾರೆ. ಇನ್ನು ಕೆಲವರು ನದಿಗಳಲ್ಲಿ ಇಳಿಯುತ್ತಿದ್ದಾರೆ. ಸೇನೆಯು ಬೀದಿಗಳಲ್ಲಿ ಐಸ್ ನೀರು ಒದಗಿಸುತ್ತಿದೆ.
ಒಂದೆಡೆ ರಂಜಾನ್ ಹಬ್ಬದ ಉಪವಾಸವಾದರೆ ಮತ್ತೊಂದೆಡೆ ವಿದ್ಯುತ್ ಸಂಪರ್ಕವಿಲ್ಲದೇ ಫ್ಯಾನು, ನೀರು ಪೂರೈಕೆ ಇಲ್ಲದಂತಾಗಿದೆ.
ರಂಜಾನ್ ತಿಂಗಳಲ್ಲಿ ಇಸ್ಲಾಂ ಧಾರ್ಮಿಕ ನಿಯದಂತೆ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ಸೇವನೆ, ಪಾನೀಕ ಕುಡಿಯುವುದು ಅಪರಾಧ. ಅಗತ್ಯ ಸಾಮಗ್ರಿಗಳೂ ಲಭಿಸದೇ ಇರುವುದರಿಂದ ಜನರು ದಿನದ 24 ಗಂಟೆಯೂ ಉಪವಾಸವಿರುವ ಪರಿಸ್ಥಿತಿ ಎದುರಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.