ಅಸಹಿಷ್ಣುತೆ, ದಬ್ಬಾಳಿಕೆ, dictatorship, ಸಂವಿಧಾನಿಕ ಸಂಸ್ಥೆಗಳು ಸ್ವಾತಂತ್ರ್ಯತೆ ಕಳೆದುಕೊಂಡಿದ್ದು, ವಿರೋಧಪಕ್ಷಗಳ ಆಡಳಿತದಲ್ಲಿರುವ ರಾಜ್ಯಗಳ ಮೇಲೆ ಹತೋಟಿ ಪಡೆಯುವ ಪ್ರಯತ್ನ, Mob lynching, ಹಿಂದಿ ಭಾಷೆಯ ಹೇರಿಕೆ ಇತ್ಯಾದಿ ಇತ್ಯಾದಿಗಳೆಲ್ಲವೂ ನಮ್ಮ ದೇಶದಲ್ಲಿ ನಡೆಯುತ್ತಿರುವುದು ಕೇಂದ್ರದಲ್ಲಿ ಮೋದಿ ಸರಕಾರ ಬಂದ ನಂತರವೇ ಎಂದು ಮೋದಿ ವಿರೋಧಿಗಳ ಪ್ರಚಾರ..!! ಅವರು ಈ ತರಹದ ವಿಚಾರಗಳನ್ನು ನಿರಂತರವಾಗಿ ಪ್ರಚಾರಮಾಡುತ್ತಿದ್ದರೆ, ಅದರ ಬಗ್ಗೆ ಬಿಜೆಪಿ ಯಾ ಮೋದಿ ಬೆಂಬಲಿಗರಿಂದ ಯಾವುದೇ ರೀತಿಯ ಪ್ರತಿರೋಧ ಬಾರದೇ ಇರುವುದರಿಂದಾಗಿ ಈವರೆಗೆ ಅಷ್ಟಾಗಿ ರಾಜಕೀಯ ವಿಚಾರಗಳಲ್ಲಿ ಆಸಕ್ತಿ ಇಲ್ಲದವರಿಗೆ ಈ ಮೋದಿ ವಿರೋಧಿ ಬಣ ಹೇಳುತ್ತಿರುವುದರಲ್ಲಿ ಸತ್ಯವಿರಬಹುದೇನೋ ಎಂಬ ಭಾವನೆ ಬರುತ್ತಿರುವುದು ದುರದೃಷ್ಟಕರ!!
ಆದರೆ ವಸ್ತುಸ್ಥಿತಿ ಮೋದಿ ವಿರುದ್ದ ಏನು ಆರೋಪಗಳು ಬರುತ್ತಿವೆಯೋ ಅದರ ಸರೀ ವಿರುದ್ದ ಎಂಬುದು ಹಲವರಿಗೆ ತಿಳಿದಿಲ್ಲವಾದ್ದರಿಂದ ನಮ್ಮ ದೇಶದಲ್ಲಿ ಸುಮಾರು 55 ವರ್ಷಗಳ ಕಾಲ ಒಂದೇ ಕುಟುಂಬದ ಸದಸ್ಯರು ಭಾರತವನ್ನು ಆಳಿದರು!!
ನಮ್ಮ ದೇಶದಲ್ಲಿ ಕಾಂಗ್ರೇಸ್ ಆಡಳಿತದಡಿಯಲ್ಲಿ ಆಗಿರುವಷ್ಟು ದಂಗೆ, ಕೋಮುಗಲಭೆಗಳು ಬೇರೆ ಯಾವ ಸರಕಾರಗಳಡಿಯಲ್ಲೂ ಆಗಿಲ್ಲ!! ಆದರೆ ಗುಜರಾತಿನ 2002 ಗೋದ್ರಾ ಘಟನೆಯನ್ನು ಮಾತ್ರ ಜನರ ತಲೆಯಲ್ಲಿ ಉಳಿಯುವಂತೆ ಮಾಡಿದರು ಈ ಕಾಂಗ್ರೇಸಿಗರು !! ಮೋದಿ ಸರಕಾರ ಬರುವ ಮೊದಲೇ ಕಾಂಗ್ರೇಸ್ ಸರಕಾರದಡಿಯಲ್ಲಿ ಎಷ್ಟೆಲ್ಲಾ ಹತ್ಯಾಕಾಂಡಗಳು ಗುಜರಾತಿನಲ್ಲಿ, ಪಂಜಾಬ್ ನಲ್ಲಿ, ದೆಹಲಿಯಲ್ಲಿ ಮದ್ಯಪ್ರದೇಶದಲ್ಲಿ, ಉತ್ತರಪ್ರದೇಶದಲ್ಲಿ ಬಿಹಾರದಲ್ಲಿ, ಉತ್ತರ ಈಶಾನ್ಯ ರಾಜ್ಯಗಳಲ್ಲಿ ಮಹಾರಾಷ್ಟ್ರ ದಲ್ಲಿ, ಜಮ್ಮು ಕಾಶ್ಮೀರದಲ್ಲಿ ನಡೆದವು ಎಂಬ ಲೆಕ್ಕಾಚಾರ ತೆಗೆದರೆ ಜನ ಆಘಾತಕ್ಕೆ ಒಳಗಾಗುವ ಸಾಧ್ಯತೆಯೇ ಹೆಚ್ಚು!!!
ಇನ್ನು mob lynching ಬಗ್ಗೆ ಬಂದಲ್ಲಿ ಇಂದಿರಾಗಾಂಧಿಯವರನ್ನು ಸಿಖ್ ಸಮುದಾಯದ ಇಬ್ಬರು ಕೊಂದರು ಎಂದು ದೆಹಲಿಯಲ್ಲಿದ್ದ ಸಾವಿರಾರು ಸಿಖ್ ಸಮುದಾಯದವರ ಮನೆ ಮನೆಗೆ ನುಗ್ಗಿ ಬೆಂಕಿ ಹಚ್ಚಿ ಮಾರಣಹೋಮವನ್ನೇ ಮಾಡಿ ಕೊನೆಯಲ್ಲಿ ” ದೊಡ್ಡ ಮರ ಬಿದ್ದಾಗ ಭೂಮಿ ನಡುಗುವುದು ಸಹಜ ” ಎಂದು ಆಗಿನ ಪ್ರಧಾನಮಂತ್ರಿ ರಾಜೀವ್ ಗಾಂಧಿ ಹೇಳಲಿಲ್ಲವೇ..??!
ಮಹಿಳೆಯರ ರಕ್ಷಣೆ ವಿಚಾರಕ್ಕೆ ಬಂದರೂ ಕಾಂಗ್ರೇಸ್ ಆಡಳಿತದ ಸಮಯದಲ್ಲಿ ನಡೆದ ಅತ್ಯಚಾರ, ತಲಾಖ್ ವಿರುದ್ದ ಕಾನೂನು ಹೋರಾಟ, ಜಸಿಕಾಲಾಲ್ ಹತ್ಯೆಯ ನ್ಯಾಯದ ಹೋರಾಟ… ಒಂದೇ ಎರಡೇ ಆದರೆ ಅವರೆಲ್ಲರಿಗೂ ನ್ಯಾಯ ಅನ್ನುವುದು ಮರಿಚಿಕೆಯಾಯಿತು!!
ಇನ್ನು ನ್ಯಾಯಾಂಗ ವ್ಯವಸ್ಥೆಗೆ ಬಂದರೆ ಯಾವುದೇ procedure ಪಾಲನೆ ಮಾಡದೇ ಸುಪ್ರೀಂ ಕೋರ್ಟ್ಗೆ ತನಗೆ ಬೇಕಾದವರನ್ನ ನ್ಯಾಯಾಧೀಶರಾಗಿ ಆಯ್ಕೆ ಮಾಡಿದ ಇತಿಹಾಸವಿರುವುದು ಇಂದಿರಾಗಾಂಧಿ ಆಡಳಿತದಲ್ಲಿ!! ತನ್ನ ಬಂಧನವಾದಾಗ ಬಿಡುಗಡೆಯ ಒತ್ತಾಯ ಮಾಡಿ ತನ್ನದೇ ಕಾರ್ಯಕರ್ತರು ಇದೇ ದೇಶದ ವಿಮಾನ ಅಪಹರಣದ ಘಟನೆ ನಡೆದದ್ದು ಕಾಂಗ್ರೇಸ್ ಕೃಪೆಯಿಂದಲೇ…!!! ತನ್ನ ಅಧಿಕಾರ ಉಳಿಸುವ ಒಂದೇ ಉದ್ದೇಶದಿಂದ ಸಂವಿಧಾನ ವ್ಯವಸ್ಥೆಯನ್ನೇ ತೆಗೆದುಹಾಕಿ ಎಮರ್ಜೆನ್ಸಿ ಹೇರಿ ಎಲ್ಲರ ಸ್ವಾತಂತ್ರ್ಯ ಕ್ಕೆ ಕೊಳ್ಳಿ ಇಟ್ಟಿದ್ದು ಇದೇ ಕಾಂಗ್ರೇಸ್!!!
ಇನ್ನು ಈ ದೇಶದಲ್ಲಿ ಮನಸೋ ಇಚ್ಚೆ ರಾಜ್ಯಗಳ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಿದ ಶ್ರೇಯವಿರುವುದು ಕೂಡ ಕಾಂಗ್ರೇಸಿನ ಮೇಲೆಯೇ…!!! 1954 ರಲ್ಲಿ ಮೊದಲಬಾರಿಗೆ ಉತ್ತರ ಪ್ರದೇಶದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾದ ನಂತರ ಈವರೆಗೆ ಒಟ್ಟಾರೆಯಾಗಿ 120 ಕ್ಕೂ ಹೆಚ್ಚುಬಾರಿ ರಾಜ್ಯಗಳ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ! ಅವುಗಳಲ್ಲಿ ಸುಮಾರು 85 ಕ್ಕೂ ಹೆಚ್ಚುಬಾರಿ ಕಾಂಗ್ರೇಸ್ ತನ್ನ ಆಡಳಿತದಲ್ಲಿದ್ದಾಗ ವಿರೋಧಪಕ್ಷಗಳ ಆಡಳಿತವಿದ್ದ ರಾಜ್ಯಗಳ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಿದೆ!! ಅಂದರೆ ರಾಷ್ಟ್ರಪತಿ ಆಳ್ಳಿಕೆ ಹೇರಿಕೆಯಾಗಿರುವುದರಲ್ಲಿ ಸುಮಾರು 72-75% ನಷ್ಟು ಕಾಂಗ್ರೇಸ್ ಆಡಳಿತದಲ್ಲೇ ಆಗಿದ್ದು!! ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಚಾರವೆಂದರೆ ಇಂದು ಮೋದಿಯವರದ್ದು ಸರ್ವಾಧಿಕಾರ ಎಂದು ಆರೋಪ ಮಾಡುತ್ತಿರುವ ಕಾಂಗ್ರೇಸಿನ ಹಿಂದಿನ ನಾಯಕಿ ಇಂದಿರಾ ಗಾಂಧಿಯವರ ಆಡಳಿತದ ಸಮಯ 1966-77 ರ ನಡುವೆ ಇಂದಿರಾಗಾಂಧಿಯವರು ಈ ದೇಶದ ಹಲವು ರಾಜ್ಯಗಳ ಮೇಲೆ ಹೇರಿದ ರಾಷ್ಟ್ರಪತಿ ಆಳ್ವಿಕೆ ಎಷ್ಟು ಗೊತ್ತೇ ಬರೋಬ್ಬರಿ 39 ಬಾರಿ!!!!
ಪುಲ್ವಾಮಾ ಘಟನೆಯನ್ನು ಮೋದಿ ಸರಕಾರದ ಇಂಟೆಲಿಜೆನ್ಸ್ failure ಎಂದು ಆರೋಪಿಸುವ ಕಾಂಗ್ರೇಸ್ ತನ್ನ ಆಡಳಿತದ ಕಾಲದಲ್ಲಿ ಮುಂಬಯಿ ಮೇಲಿನ ದಾಳಿಯೂ ಸೇರಿದಂತೆ ದೇಶದ ಹಲವು ಕಡೆಗಳಲ್ಲಾದ ಬಾಂಬ್ ಮತ್ತು ಟೆರರಿಸ್ಟ್ ದಾಳಿಗಳು ತನ್ನ ಇಂಟೆಲಿಜೆನ್ಸ್ failure ಎಂದು ಯಾವತ್ತೂ ಒಪ್ಪಿಕೊಂಡೇ ಇಲ್ಲ ಅಲ್ಲವೇ…!!
ಇನ್ನು ಮೋದಿಯವರು ತನ್ನ ಗುರು ಅಡ್ವಾಣಿಯವರನ್ನು ಮೂಲೆಗುಂಪು ಮಾಡಿದರು ಎಂದು ಹೇಳುವ ಗಾಂಧಿ ಕುಟುಂಬ ಈ ದೇಶದಲ್ಲಿ ಗಾಂಧಿಯೇತರರಿಗೆ ದೆಹಲಿಯಲ್ಲಿ ಸಮಾಧಿಗೆ ಕೂಡ ಅವಕಾಶ ಕೊಡಲಿಲ್ಲವೆಂಬುದು ಅಷ್ಟೇ ಸತ್ಯ.. !! ಇಂದಿರಾಗಾಂಧಿ ತನ್ನ ಗಂಡನಿಗೂ ದೆಹಲಿಯಲ್ಲಿ ಅವಕಾಶ ನೀಡೇ ಇಲ್ಲ!! ಇಂದಿಗೂ ಇಂದಿರಾಗಾಂಧಿ ಪತಿಯ ಸಮಾಧಿ ಇರುವುದು ಪ್ರಯಾಗ್ ರಾಜ್ನಲ್ಲಿ ಎಂಬುದು ಹಲವರಿಗೆ ತಿಳಿದಿಲ್ಲ! ಯಾಕೆಂದರೆ ಗಾಂಧಿ ಕುಟುಂಬ ಅಲ್ಲಿಗೆ ಹೋಗುವುದೇ ಇಲ್ಲ!! ಅಷ್ಟೂ ಗೌರವ ನೋಡಿ …!!
ಹಿಂದೆ ಕಾಂಗ್ರೇಸಿನ 55 ವರ್ಷಗಳ ಆಡಳಿತದಡಿಯಲ್ಲಿ ನಡೆದ ಚುನಾವಣೆಗಳಲ್ಲಿ ಬೂತ್ capturing ಅನ್ನುವುದು ಒಂದು ಸಾಮಾನ್ಯ ವಿಷಯವಾಗಿತ್ತು!! ಪಶ್ಚಿಮ ಬಂಗಾಳದಲ್ಲಿ ಅದು ಇನ್ನೂ ಮಮತಾ ಕೃಪೆಯಿಂದ ನಡೆಯುತ್ತನೇ ಇರುವುದು ನಿಜಕ್ಕೂ ಆತಂಕಕಾರಿ ವಿಚಾರ!!
ಹೀಗೆ ಹೇಳುತ್ತಾ ಸಾಗುತ್ತಿದ್ದರೆ ಕಾಂಗ್ರೇಸ್ನ ಆಡಳಿತದ ಇತಿಹಾಸ ಎಂತವರಿಗೂ ದಂಗುಬಡಿಸುವಂತೆ ಇದೆ!!! ಇಷ್ಟಾದರೂ ಮೋದಿಯವರು ನಮ್ಮ ದೇಶವನ್ನು ಹಾಳುಮಾಡಿದರೆಂದು ಕಾಂಗ್ರೇಸ್ ನಮ್ಮೆಲ್ಲರ ತಲೆಗೆ ತುಂಬುತ್ತಿರುವುದನ್ನ ಒಂದಷ್ಟು ವಿದ್ಯಾವಂತ ಜನರ ನಂಬುತ್ತಿರುವುದು ನಿಜಕ್ಕೂ ಆತಂಕಕಾರಿ ವಿಚಾರ ಸ್ನೇಹಿತರೇ…!!
✍ ರಾಮಕಿಶೋರ್ ಶಾಸ್ತ್ರಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.