ನೆಹರು ಸಿದ್ಧಾಂತದ ಏರಿಕೆಯ ಪರಿಣಾಮವಾಗಿ ಭಾರತಕ್ಕೆ ಸಾಕಷ್ಟು ಹಾನಿಯಾಗಿರುವುದನ್ನು ನಾವು ಕಾಣುತ್ತಿದ್ದೇವೆ. ನಮ್ಮ ಸಮಾಜದಲ್ಲಿ ಎರಡು ತರನಾದ ವ್ಯಕ್ತಿಗಳಿರುತ್ತಾರೆ, ಒಂದು ಕೆಲಸ ಮಾಡುವವರು, ಇನ್ನೊಬ್ಬರು ಬೇರೆಯವರು ಮಾಡಿದ ಕೆಲಸದ ಶ್ರೇಯಸ್ಸನ್ನು ತಾವೇ ಪಡೆದುಕೊಳ್ಳುವವರು. ಗಾಂಧಿ-ನೆಹರು ಪರಿವಾರದವರು ಎರಡನೇ ವರ್ಗಕ್ಕೆ ಸೇರಿದವರಾಗಿದ್ದಾರೆ. ಜವಾಹರ್ಲಾಲ್ ನೆಹರು ಮತ್ತು ಅವರ ಕಟ್ಟಾ ಅನುಯಾಯಿಗಳಾದ ಶಶಿ ತರೂರ್ ನಂತವರು ಭಾರತದಲ್ಲಿ ವಿಜ್ಞಾನದ ಬಗೆಗಿನ ಚಿಂತನೆಯನ್ನು ತಂದಿದ್ದೆ ನೆಹರು ಮತ್ತು ಭಾರತದಲ್ಲಿ ವಿಜ್ಞಾನ ಸಂಸ್ಥೆಗಳು ಸ್ಥಾಪನೆಯಾಗುವುದಕ್ಕೂ ಅವರೇ ಕಾರಣ ಎಂದು ಹೇಳುತ್ತಾರೆ. ಪದೇ ಪದೇ ಇದನ್ನೇ ಹೇಳುತ್ತಾ ಬಂದಿರುವ ಕಾರಣ ಹಲವಾರು ಮಂದಿ ಇದೇ ಸತ್ಯ ಎಂದು ಅಂದುಕೊಂಡಿದ್ದಾರೆ. ನೆಹರು ಕುಟುಂಬ ವನ್ನು ಹೊಗಳುತ್ತಲೇ ರಾಜಕೀಯ ಜೀವನದಲ್ಲಿ ನೆಲೆ ಕಂಡುಕೊಂಡಿರುವ ಶಶಿ ತರೂರ್ ಅವರು, ಸಿಲಿಕಾನ್ ವ್ಯಾಲಿಯ ಸ್ಟಾರ್ಟ್ ಅಪ್ ಗಳ ವಿಷಯದಲ್ಲೂ ನೆಹರು ಅವರಿಗೆ ಶೇಕಡ 40ರಷ್ಟು ಕ್ರೆಡಿಟ್ ಅನ್ನು ನೀಡುತ್ತಾರೆ .
ನಿಜ ಹೇಳಬೇಕೆಂದರೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸ್ಥಾಪನೆಗೂ ನೆಹರೂ ಅವರಿಗೂ ಯಾವುದೇ ಸಂಬಂಧವಿಲ್ಲ.
ವಾಸ್ತವದಲ್ಲಿ ಆರ್ಕಾಟ್ ರಾಮಸ್ವಾಮಿ ಮುದಲಿಯಾರ್ ಅವರ ದೂರದೃಷ್ಟಿಯ ಫಲವಾಗಿ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ 1947 ರಲ್ಲಿ ಅಸ್ತಿತ್ವಕ್ಕೆ ಬಂತು. ಡಾಕ್ಟರ್ ಮುಖರ್ಜಿಯವರು ಇದನ್ನು ನಿರ್ಮಾಣ ಮಾಡಿದರು. ನೆಹರು ಅವರು ಇದರಲ್ಲಿ ಯಾವ ಪಾತ್ರವನ್ನೂವಹಿಸಿಲ್ಲ. ಭಾರತದ ಪ್ರಧಾನಿಯಾಗಿದ್ದರು ಎಂಬ ಕಾರಣಕ್ಕೆ ಅವರನ್ನು ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ನ ಗೌರವ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಈ ಅವಧಿಯಲ್ಲಿ ಹೇಳಿಕೆ ನೀಡಿದ್ದ ನೆಹರು ಅವರು ‘ಕೌನ್ಸಿಲ್ ನ ಕಾರ್ಯದಲ್ಲಿ ಹೆಚ್ಚಿನ ಸಮಯವನ್ನು ನೀಡಲು ನನಗೆ ಸಾಧ್ಯವಾಗಿಲ್ಲ. ಡಾಕ್ಟರ್ ಶ್ಯಾಮ ಪ್ರಸಾದ್ ಮುಖರ್ಜಿ ಅವರು ಈ ಕಾರ್ಯವನ್ನು ದಿನನಿತ್ಯ ನಿರ್ವಹಣೆ ಮಾಡಿದರು’ ಎಂದಿದ್ದಾರೆ.
ಡಾಕ್ಟರ್ ಮುಖರ್ಜಿ ಅವರು ಹಲವಾರು ಲ್ಯಾಬೋರೇಟರಿಗಳನ್ನು ದೇಶದಲ್ಲಿ ಸ್ಥಾಪನೆ ಮಾಡಿದ್ದಾರೆ. ಇದರಲ್ಲಿ ನ್ಯಾಷನಲ್ ಫಿಸಿಕಲ್ ಲ್ಯಾಬೋರೇಟರಿ, ನ್ಯಾಷನಲ್ ಕೆಮಿಕಲ್ ಲ್ಯಾಬೋರೇಟರಿ, ನ್ಯಾಷನಲ್ ಮೆಟಲರ್ಜಿಕಲ್ ಲ್ಯಾಬೋರೇಟರಿ, ಫ್ಯೂಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಸಿರಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್, ಸೆಂಟ್ರಲ್ ಲೆದರ್ ರಿಸರ್ಚ್ ಇನ್ಸ್ಟಿಟ್ಯೂಟ್, ಸೆಂಟ್ರಲ್ ಎಲೆಕ್ಟ್ರೋಕೆಮಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ಗಳು ಸೇರಿವೆ. ಡಾಕ್ಟರ್ ಮುಖರ್ಜಿ ಅವರು ತಮ್ಮ ಅವಧಿಯಲ್ಲಿ ಪೈಕರ, ಸ ಮೆತ್ತೂರ್, ಶಿವಮೊಗ್ಗ ಮತ್ತು ಶಿವನ ಸಮುದ್ರ ಎಲೆಕ್ಟ್ರಿಕಲ್ ಗ್ರಿಡ್ ಗಳನ್ನು ಏಕೀಕರಣಗೊಳಿಸಿದರು.
1940ರ ವೇಳೆಗೆ ಭಾರತವು ವೈಜ್ಞಾನಿಕ ಚಟುವಟಿಕೆಗಳನ್ನು ನಡೆಸಲು ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ಹೊಂದಿತ್ತು. ಭಾರತದ ಹಿಂದೂ ನಾಗರಿಕತೆ ಸಾವಿರಾರು ವರ್ಷಗಳಿಂದ ಹಲವು ವೈಜ್ಞಾನಿಕ ಚಿಂತನೆಗಳನ್ನು ಮತ್ತು ವಿಜ್ಞಾನಿಗಳನ್ನು ಸೃಷ್ಟಿಸಿತ್ತು. ಪಂಡಿತ್ ಮದನ್ ಮೋಹನ್ ಮಾಲವೀಯ ಅವರ ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಇಂಡಿಯನ್ ಅಸೋಶಿಯೇಶನ್ ಫಾರ್ ಕಲ್ಟಿವೇಶನ್ ಅಫ್ ಸೈನ್ಸ್ ಮುಂತಾದವುಗಳು 1876ರಲ್ಲೇ ಸ್ಥಾಪನೆಯಾಗಿದ್ದವು. ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್, ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಇವುಗಳೆಲ್ಲವೂ ನೆಹರುಗೆ ಮುಂಚಿತವಾಗಿಯೇ ಸ್ಥಾಪನೆಗೊಂಡಿದೆ. ಆದರೂ ಕೆಲವು ಅವರ ಬೆಂಬಲಿಗರು ಇವುಗಳ ಸ್ಥಾಪನೆಯ ಕ್ರೆಡಿಟ್ ಅನ್ನು ನೆಹರುಗೆ ನೀಡಲು ಮುಂದಾಗುತ್ತಾರೆ. ಸಾರ್ವಜನಿಕ ವಲಯದ ಘಟಕಗಳ ಪೈಕಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅನ್ನು ವಲ್ಚಂದ್ ಹಿರಚಂದ್ ಅವರು ಖಾಸಗಿ ಉದ್ಯಮವಾಗಿ ಸ್ಥಾಪನೆ ಮಾಡಿದರು ಮತ್ತು ಇದರ ಮುಖೇನ ಬ್ರಿಟನ್ ಗೆ ಅತ್ಯಾಧುನಿಕ ಏರ್ಕ್ರಾಫ್ಟ್ ಗಳನ್ನು ಆರೈಕೆ ಮಾಡಿದರು. ಆದರೆ ಸರಕಾರ ರಚನೆ ಮಾಡಿದ ಬಳಿಕ ಕ್ಷಿಪ್ರಗತಿಯಲ್ಲಿ ಆ ಸಂಸ್ಥೆ ಅವಸಾನ ಗೊಳ್ಳುತ್ತಾ ಬಂತು
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸ್ಥಾಪನೆ ಕೂಡ ನೆಹರು ಅವರಿಗೆ ಯಾವ ರೀತಿಯಲ್ಲೂ ಸಂಬಂಧಿಸಿಲ್ಲ. ಐಐಟಿಗಳು 1945ರ ಎನ್.ಎಂ ಸಿರ್ಕಾರ್ ಕಮಿಟಿ ಕಮಿಟಿಯ ಚಿಂತನೆಯ ಫಲವಾಗಿದೆ. ನೆಹರು ಅವರು, ಮೆಡಿಕಲ್ ಇನ್ಸ್ಟ್ಯೂಟ್ ಸ್ಥಾಪನೆಯ ಬಗ್ಗೆ ಡಾಕ್ಟರ್ ಮುಖರ್ಜಿ ಮತ್ತು ಎಂಜಿ ರಂಗ ಅವರ ಅವರೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ಲಕ್ಷ್ಮಣ ಸ್ವಾಮಿ ಮುದಲಿಯಾರ್ ಅವರ ಮುಖ್ಯಸ್ಥ ಸ್ಥಾನದಲ್ಲಿ ಮೆಡಿಕಲ್ ಇನ್ಸ್ಟ್ಯೂಟ್ ಸ್ಥಾಪನೆಗೆ ಸಮಿತಿಯನ್ನು ರಚಿಸುವಂತೆ ಶಿಫಾರಸ್ಸು ಮಾಡಿದಾಗ ನೆಹರು ಅವರು ಈ ನಿರ್ಧಾರಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿದರು. ದೆಹಲಿಯಲ್ಲಿ ಆಲ್ ಇಂಡಿಯಾ ಮೆಡಿಕಲ್ ಇನ್ಸ್ಟ್ಯೂಟ್ ಸ್ಥಾಪನೆಗೂ ಮುನ್ನ ಅಲ್ಲಿರುವ ವಸತಿ ಸಮಸ್ಯೆಯನ್ನು ನೀಗಿಸಬೇಕು ಎಂಬ ವಾದವನ್ನು ಮುಂದಿಟ್ಟಿದ್ದರು. ಭಾರತ ಆಂಟಿ ಸೆಟಲೈಟ್ ಮಿಸೈಲ್ ಅನ್ನು ಪ್ರಯೋಗಕ್ಕೆ ಒಳಪಡಿಸಿದಾಗಲೂ ಪ್ರಿಯಾಂಕಾ ವಾದ್ರಾ ಅವರು ಶ್ರೇಯಸ್ಸನ್ನು ನೆಹರು ಅವರಿಗೆ ನೀಡಿದರು. DRDO ಆಗಲಿ, ISRO ಆಗಲಿ ನೆಹರು ಅವರ ಚಿಂತನೆಯ ಫಲದಿಂದ ಸ್ಥಾಪಿತವಾದದ್ದು ಅಲ್ಲ ಎಂಬ ಅರಿವಿದ್ದರೂ ನಮ್ಮ ತಾತನಿಗೆ ಶ್ರೇಯಸ್ಸು ನೀಡಲು ತುದಿಗಾಲಲ್ಲಿ ನಿಂತಿದ್ದರು.
ಇಷ್ಟು ಮಾತ್ರವಲ್ಲದೆ ಭಾರತದ ಏಕೀಕರಣ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ಶ್ರೇಯಸ್ ಅನ್ನು ಕೂಡ ನೆಹರು ಅವರೇ ತೆಗೆದುಕೊಂಡಿದ್ದಾರೆ. ಸರ್ದಾರ್ ವಲ್ಲಬಾಯ್ ಪಟೇಲ್ ಅವರು ಸೇನೆಯನ್ನು ಹೈದ್ರಾಬಾದ್ ಗೆ ಕಳಿಸಿ ಭಾರತದ ಜೊತೆಗೂಡಿಸಿರು, ಭಾರತದ ಏಕೀಕರಣಕ್ಕೆ ಅವಿರತ ಶ್ರಮವನ್ನು ಪಟ್ಟಿದ್ದರು. ಭಾರತದ ಏಕೀಕರಣದಲ್ಲಿ ನೆಹರು ಕೊಡುಗೆ ಶೂನ್ಯ. ಇನ್ನು ಪ್ರಜಾಪ್ರಭುತ್ವದ ಮೌಲ್ಯಗಳ ವಿಷಯಕ್ಕೆ ಬಂದರೆ ನೆಹರು ಅವರು ಭಾರತೀಯರ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಿದರು. ಕಾಯ್ದೆ 356 ರ ಅಡಿಯಲ್ಲಿ ತಮ್ಮ ರಾಜಕೀಯ ವಿರೋಧಿಗಳ ರಾಜ್ಯ ಸರ್ಕಾರಗಳನ್ನು ಉರುಳಿಸುವ ಪ್ರಯತ್ನ ಮಾಡಿದರು. ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಗೆ ಕೊಂಡೊಯ್ದಿದ್ದು, ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನವನ್ನು ನಿರಾಕರಿಸಿದ್ದು, ಬದಲಾಗಿ ಆ ಸ್ಥಾನ ಚೀನಾಗೆ ದೊರಕಿಸಿಕೊಡಲು ಲಿಬಿ ನಡೆಸಿದ್ದು ನೆಹರು ಅವರ ಅಸಮರ್ಥ ಆಡಳಿತ ವೈಖರಿಯನ್ನು ತೋರಿಸುತ್ತದೆ. ವಂಶಾಡಳಿತಕ್ಕೆ ನಾಂದಿ ಹಾಡಿದ ಅವರು ತಮ್ಮ ಸಹೋದರಿಯನ್ನು ರಾಯಭಾರಿಯನ್ನಾಗಿ ಸಿದರು, ತಮ್ಮ ಮಗಳನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿಸಿದರು. ನೆಹರು ಅವರ ಸಿದ್ಧಾಂತ ಭಾರತಕ್ಕೆ ದೊಡ್ಡ ಮಟ್ಟದ ಹಾನಿಯನ್ನು ಉಂಟು ಮಾಡಿದೆ. ಆದರೂ ಅವರ ಅನುಯಾಯಿ ಗಳು ದೇಶದ ಎಲ್ಲಾ ಅಭಿವೃದ್ಧಿ ಕಾರ್ಯಗಳ ಶ್ರೇಯಸ್ಸನ್ನು ಅವರಿಗೆ ನೀಡಿ ದೇಶದ ಜನರ ದಾರಿ ತಪ್ಪಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.