ಅಸ್ಸಾಂನಲ್ಲೊಂದು ವಿಭಿನ್ನ ಶಾಲೆ ಇದೆ. ಇಲ್ಲಿ ಕಂತೆ ಕಂತೆ ನೋಟುಗಳನ್ನು ಶುಲ್ಕವಾಗಿ ಪಾವತಿ ಮಾಡಬೇಕಾಗಿಲ್ಲ. ಬದಲಿಗೆ, ಗೋಣಿ ಚೀಲದಲ್ಲಿ ಒಂದಷ್ಟು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೊತ್ತು ತಂದರಷ್ಟೇ ಸಾಕು. ಅದುವೇ ಆ ಶಾಲೆಯ ಶುಲ್ಕ. ಈ ವಿಭಿನ್ನ ಶಾಲೆ ಇರುವುದು ಪಮೋಹಿ ಪ್ರದೇಶದಲ್ಲಿ, ಇದರ ಹೆಸರು “ಅಕ್ಷರ” ಎಂದು. ಪರ್ಮಿತ ಶರ್ಮಾ ಮತ್ತು ಮಝಿನ್ ಮುಖ್ತರ್ ಅವರು ಈ ಶಾಲೆಯನ್ನು 2016ರ ಜೂನ್ನಲ್ಲಿ ಸ್ಥಾಪನೆ ಮಾಡಿದರು.
2013ರಲ್ಲಿ ನ್ಯೂಯಾರ್ಕ್ನಿಂದ ಆಗಮಿಸಿದ ಮಝೀನ್ ಅಖ್ತರ್ ಅವರಿಗೆ ವಿಭಿನ್ನ ಶೈಕ್ಷಣಿಕ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಗುರಿ ಇತ್ತು. ಈ ವೇಳೆ ಟಾಟಾ ಇನ್ಸ್ಟಿಟ್ಯೂಶನ್ನ ಎಂಎಸ್ಡಬ್ಲ್ಯು ವಿದ್ಯಾರ್ಥಿನಿ ಪರ್ಮಿತ ಅವರನ್ನು ಭೇಟಿಯಾದ ಮಝೀನ್, ಅವರ ಜೊತೆಗೂಡಿ ಉಚಿತ ಶಾಲೆಯನ್ನು ಸ್ಥಾಪನೆ ಮಾಡುವ ಯೋಜನೆಯೊಂದನ್ನು ಹಾಕಿಕೊಂಡರು.
ಅಸ್ಸಾಂನವರಾದ ಪರ್ಮಿತ ಅವರು, ಈ ನಿಟ್ಟಿನಲ್ಲಿ ಮಝೀನ್ ಅವರಿಗೆ ನಿರ್ದೇಶನವನ್ನು ನೀಡಿದ್ದರು. ಅಲ್ಲಿನ ಸವಾಲುಗಳ ಬಗ್ಗೆ ತಿಳಿಸಿದ್ದರು. ಸಾಂಪ್ರದಾಯಿಕ ಶಿಕ್ಷಣ ಮತ್ತು ವೃತ್ತಿಪರ ತರಬೇತಿ ನಡುವಣ ಅಂತರವನ್ನು ಹೋಗಲಾಡಿಸುವುದು ಅವರ ಉದ್ದೇಶವಾಗಿತ್ತು.
ಶಿಕ್ಷಣವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಪ್ರಾಕೃತಿಕವಾಗಿ ಮಕ್ಕಳಿಗೆ ವಾಸ್ತವವಾಗಿ ಇರಬೇಕು ಎಂಬುದು ಅವರ ಮುಖ್ಯ ಉದ್ದೇಶವಾಗಿತ್ತು. ಸ್ಥಳೀಯ ಗ್ರಾಮಸ್ಥರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವೊಲಿಸಿದ ಇವರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವಂತಹ ಶಾಲಾ ಪರಿಸರವನ್ನು ರಚಿಸಿದರು.
ಈ ಗ್ರಾಮದ ಜನರು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಚಳಿಗಾಲದಲ್ಲಿ ಬೆಂಕಿ ತಯಾರಿಸಲು ಬಳಕೆ ಮಾಡುತ್ತಿದ್ದುದನ್ನು ಕಂಡು, ಜನರ ಈ ಧೋರಣೆಯನ್ನು ಬದಲಾಯಿಸಲು ಅವರು ಮುಂದಾದರು. ಹೀಗಾಗಿ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಶಾಲೆಗೆ ಹೊತ್ತು ತರುವಂತೆ ಸೂಚಿಸಿದರು. ಅಲ್ಲದೇ ಈ ಪ್ಲಾಸ್ಟಿಕ್ ತ್ಯಾಜ್ಯಗಳು ಶಾಲೆಯ ಶುಲ್ಕ ಎಂದು ಹೇಳಿ, ಪ್ಲಾಸ್ಟಿಕ್ ತರುವುದನ್ನು ಕಡ್ಡಾಯಗೊಳಿಸಿದರು.
ಈ ಗ್ರಾಮದ ಮಕ್ಕಳು ಕಲ್ಲಿನ ಕ್ವಾರೆಗಳಲ್ಲಿ ದುಡಿಯುತ್ತಿದ್ದರು, ದಿನಕ್ಕೆ ರೂ.150ರಿಂದ 200ವರೆಗೆ ಸಂಪಾದಿಸುತ್ತಿದ್ದರು. ಹೀಗಾಗಿ ಅವರನ್ನು ಅಲ್ಲಿಂದ ಬಿಡಿಸಿ ಶಾಲೆಗೆ ಕರೆತರುವ ಮೊದಲು ಅವರಿಗೆ ಪರ್ಯಾಯ ಆದಾಯದ ವ್ಯವಸ್ಥೆಯನ್ನು ಮಾಡಿ ಕೊಡುವುದು ಅನಿವಾರ್ಯವಾಗಿತ್ತು, ಹೀಗಾಗಿ ಯೋಜನೆಯೊಂದನ್ನು ಹಾಕಿಕೊಂಡ ದಂಪತಿ, ದೊಡ್ಡ ಮಕ್ಕಳು ಕಿರಿಯ ಮಕ್ಕಳಿಗೆ ಟ್ಯೂಷನ್ ನೀಡುವಂತೆ ಮಾಡಿದರು. ಈ ರೀತಿ ಟ್ಯೂಷನ್ ಕೊಡೋ ಮಕ್ಕಳಿಗೆ ಪ್ಲಾಸ್ಟಿಕ್ ಕರೆನ್ಸಿಯನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಕರೆನ್ಸಿಯನ್ನು ಬಳಸಿ ಮಕ್ಕಳು ಸ್ಥಳೀಯ ಅಂಗಡಿಗಳಿಂದ ತಿಂಡಿ ತಿನಿಸುಗಳನ್ನು, ಬಟ್ಟೆ, ಪುಸ್ತಕಗಳನ್ನು ಖರೀದಿಸುವ ಅವಕಾಶವನ್ನು ನೀಡಲಾಯಿತು.
ಅಕ್ಷರ ಸಾಂಪ್ರದಾಯಿಕ ಶಾಲೆಗಳಿಗಿಂತ ಸಂಪೂರ್ಣ ವಿಭಿನ್ನವಾದ ಶಾಲೆಯಾಗಿದ್ದು, ಇಲ್ಲಿ ವಯಸ್ಸು ಆಧಾರಿತವಾಗಿ ತರಗತಿಗಳಿಗೆ ಸೇರ್ಪಡೆಗೊಳಿಸಲಾಗುವುದಿಲ್ಲ, ಬದಲಾಗಿ ಜ್ಞಾನ ಆಧಾರಿತವಾಗಿ ಮಕ್ಕಳ ತರಗತಿಗಳನ್ನು ನಿರ್ಧರಿಸಲಾಗುತ್ತದೆ. ಬಿದಿರಿನಿಂದ ರಚಿಸಲಾದ ಕೊಠಡಿಗಳಲ್ಲಿ ಮಕ್ಕಳಿಗೆ ಶಿಕ್ಷಣವನ್ನು ನೀಡಲಾಗುತ್ತದೆ. ಇದು ಮಕ್ಕಳನ್ನು ಇನ್ನಷ್ಟು ಪರಿಸರಕ್ಕೆ ಹತ್ತಿರವನ್ನಾಗಿಸಿದೆ.
ಮಕ್ಕಳ ಸರ್ವಾಂಗಿಣ ಅಭಿವೃದ್ಧಿಗೆ ಅಕ್ಷರದಂತಹ ಶಾಲೆಗಳ ಅಗತ್ಯ ನಮ್ಮ ದೇಶಕ್ಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.