ಪ್ರಾಚೀನ ದೇಗುಲಗಳು ಭಾರತದ ಹೆಮ್ಮೆಯ ಪ್ರತೀಕಗಳಾಗಿವೆ. ಭಾರತದ ಸಂಸ್ಕೃತಿ, ಪರಂಪರೆ ಮತ್ತು ನಾಗರಿಕತೆಯನ್ನು ಬಿಂಬಿಸುವ ದೇಗುಲಗಳನ್ನು ಉಳಿಸಿ, ಸಂರಕ್ಷಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಈ ಕರ್ತವ್ಯವನ್ನು ಬೆಂಗಳೂರು ಮೂಲದ ದಂಪತಿ ಮತ್ತು ಶಿವಮೊಗ್ಗ ಹೊಸಗುಂಡ ಗ್ರಾಮದ ಜನರು ಅತ್ಯಂತ ಶ್ರದ್ಧಾ, ಭಕ್ತಯಿಂದ ನೆರವೇರಿಸಿದ್ದಾರೆ.
ಶಿಥಿಲಾವಸ್ಥೆ ತಲುಪಿದ್ದ 11ನೇ ಶತಮಾನದ ಪ್ರಾಚೀನ ದೇಗುಲ ಆವರಣವನ್ನು ಪುನರುಜ್ಜೀವನಗೊಳಿಸಲು ಶಿವಮೊಗ್ಗದ ಹೊಸಗುಂದ ಗ್ರಾಮಸ್ಥರಿಗೆ 18 ವರ್ಷಗಳೇ ಬೇಕಾಯಿತು. 2011ರಿಂದ ಟ್ರಸ್ಟ್ ವತಿಯಿಂದ ಜೀರ್ಣೋದ್ಧಾರ ಕಾರ್ಯಗಳು ಜರಗುತ್ತಿದ್ದು, ಇದೀಗ ಸಂಪೂರ್ಣಗೊಂಡಿದೆ. ಸೋಮವಾರದಿಂದ ಅಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಜರುಗುತ್ತಿವೆ. ಉಮಾಮಹೇಶ್ವರ ಸೇರಿದಂತೆ ಇತರ 7 ದೇವತೆಗಳ ಗುಡಿಗಳನ್ನು ಈ ದೇಗುಲ ಆವರಣ ಒಳಗೊಂಡಿದೆ.
ಶಿವಮೊಗ್ಗ ನಗರದಿಂದ 66 ಕಿ.ಮೀ. ದೂರದಲ್ಲಿ ಹೊಸಗುಂದ ಗ್ರಾಮವಿದ್ದು, ಹಿಂದೆ ಶಾಂತರ ರಾಜಮನೆತನಕ್ಕೆ ಸೇರಿದ ಹೊಸಗುಂದ ರಾಜರುಗಳ ರಾಜಧಾನಿ ಇದಾಗಿತ್ತು. 13ನೇ ಶತಮಾನದವರೆಗೆ 300 ವರ್ಷಗಳ ಕಾಲ ಅವರು ಇಲ್ಲಿ ರಾಜ್ಯಭಾರ ಮಾಡಿದ್ದಾರೆ. ಈ ದೇಗುಲವನ್ನೂ ಅವರೇ ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ.
ಶಾಂತರ ಮನೆತನದವರು 11ನೇ ಶತಮಾನದಿಂದ 13ನೇ ಶತಮಾನದವರೆಗೆ ಇಲ್ಲಿ ರಾಜ್ಯಭಾರವನ್ನು ಮಾಡಿದ್ದರು, ಆದರೆ ಬಳಿಕ ಸಂಭವಿಸಿದ ಬರ ಮತ್ತು ವಿವಿಧ ಕಾರಣಗಳಿಂದಾಗಿ ಅವರು ಈ ಪ್ರದೇಶವನ್ನು ಬಿಟ್ಟು ಬೇರೆ ಕಡೆಗಳಿಗೆ ವಲಸೆ ಹೋದರು ಎಂಬುದಾಗಿ ಪುರಾತತ್ವ, ಮ್ಯೂಸಿಯಂ ಮತ್ತು ಪಾರಂಪರಿಕ ಇಲಾಖೆ ಸಲಹಾ ನಿರ್ದೇಶಕ ಆರ್. ಸೆಜೇಶ್ವರ ಹೇಳುತ್ತಾರೆ.
ಗ್ರಾಮಸ್ಥರು ಊರನ್ನು ಬಿಟ್ಟು ತೆರಳಿದ ಬಳಿಕ ಎಲ್ಲಾ 8 ಗುಡಿಗಳು ಶಿಥಿಲಗೊಳ್ಳಲು ಆರಂಭಿಸಿದವು. ಉಮಾಮಹೇಶ್ವರ ದೇಗುಲವನ್ನು ಕಲ್ಯಾಣ ಚಾಲುಕ್ಯ ಶೈಲಿಯಲ್ಲಿ ಕಟ್ಟಲಾಗಿದ್ದು, ಹಸಿರು ಮಿಶ್ರಿತ ಕ್ಲೋರೈಟ್ ಛಿದ್ರ ಕಲ್ಲುಗಳನ್ನು ಇದಕ್ಕೆ ಬಳಸಲಾಗಿದೆ. 2,400 ಚದರ ಅಡಿ ವಿಸ್ತೀರ್ಣವನ್ನು ಈ ದೇಗುಲ ಹೊಂದಿದೆ. ಈ ದೇಗುಲ ಆವರಣದಲ್ಲಿ ಮಹಿಷಮರ್ಧಿನಿ, ವೀರಭದ್ರ, ಕಂಚಿ ಕಾಳಮ್ಮ, ಪ್ರಸನ್ನ ನಾರಾಯಣ, ಲಕ್ಷ್ಮೀ, ಗಣಪತಿ ಮುಂತಾದ ಪರಿವಾರ ದೇವತೆಗಳ ಗುಡಿಗಳಿವೆ. ಈ ಗುಡಿಗಳ ಅವಶೇಷಗಳು ಇತ್ತೀಚಿನ ಉತ್ಖನನದ ಸಂದರ್ಭದಲ್ಲಿ ಪತ್ತೆಯಾಗಿದ್ದವು.
ಈ ದೇಗುಲದ ಪುನರುಜ್ಜೀವನಕ್ಕಾಗಿ ಉಮಾಮಹೇಶ್ವರ ಸೇವಾ ಟ್ರಸ್ಟ್ ರಚನೆಗೊಂಡಿದ್ದು, ಜೀರ್ಣೋದ್ಧಾರದ ಸಂಪೂರ್ಣ ಕಾರ್ಯದ ಉಸ್ತುವಾರಿಯನ್ನು ಇದು ನೋಡಿಕೊಂಡಿದೆ. ದೇಗುಲವನ್ನು ಅದರ ಹಿಂದಿನ ವೈಭವಕ್ಕೆ ಮರಳಿಸಲು 7 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ. ಇದರಲ್ಲಿ 50 ಲಕ್ಷಗಳನ್ನು ಗ್ರಾಮಸ್ಥರು ದೇಣಿಗೆಯಾಗಿ ನೀಡಿದ್ದಾರೆ. ಬೆಂಗಳೂರು ಮೂಲದ ನಾರಾಯಣ ಶಾಸ್ತ್ರೀ ಮತ್ತು ಶೋಭ ಶಾಸ್ತ್ರೀ, ಗ್ರಾಮದ ನಾಗರಾಜಪ್ಪ ಗೌಡರೊಂದಿಗೆ ಸೇರಿ ಈ ಟ್ರಸ್ಟ್ ಅನ್ನು ರಚನೆ ಮಾಡಿದ್ದಾರೆ.
ಕೃಷಿ ಮಾಡುವುದಕ್ಕಾಗಿ ಈ ದಂಪತಿ 1991ರಲ್ಲಿ ಬೆಂಗಳೂರಿನಿಂದ ಹೊಸಗುಂದಕ್ಕೆ ಬಂದಿದ್ದರು. ಈ ವೇಳೆ ಮರ ಪೊದೆಗಳ ಅರಣ್ಯದೊಳಗೆ ಈ ದೇಗುಲ ಶಿಥಿಲಾವಸ್ಥೆಯಲ್ಲಿದ್ದುದನ್ನು ನೋಡಿ, ಅದರ ಪುನರುಜ್ಜೀವನದ ಸಂಕಲ್ಪವನ್ನು ತೊಟ್ಟರು. ಅದಕ್ಕಾಗಿ ಟ್ರಸ್ಟ್ ಆರಂಭಿಸಿದರು. ಮೊದಲು, ಗ್ರಾಮದ ಗೌಡರನ್ನು ಟ್ರಸ್ಟ್ ಮುಖ್ಯಸ್ಥರನ್ನಾಗಿ ಮಾಡಿದರು. ಒಂದು ವರ್ಷಗಳ ತರುವಾಯ ಅವರು ತೀರಿಕೊಂಡರು, ಬಳಿಕ ಸ್ಥಳಿಯ ನಿವಾಸಿ ಕೋವಿ ಪುಟ್ಟಪ್ಪ ಮತ್ತು ಶೃಂಗೇರಿ ಮಠ ಆಡಳಿತಗಾರ ವಿ.ಆರ್ ಗೌರಿಶಂಕರ್ ಟ್ರಸ್ಟ್ ಟನ್ನು ಸೇರಿಕೊಂಡರು. ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಸೇರಿದಂತೆ ಹತ್ತು ಹಲವು ದಾನಿಗಳು ದೇಗುಲದ ಜೀರ್ಣೋದ್ಧಾರ ಕಾರ್ಯದಲ್ಲಿ ಕೈಜೋಡಿಸಿದ್ದಾರೆ ಎಂದು ಶಾಸ್ತ್ರೀ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಆರಂಭದಲ್ಲಿ ಪುರಾತತ್ಮ, ಮ್ಯೂಸಿಯಂ ಮತ್ತು ಪಾರಂಪರಿಕ ಇಲಾಖೆ(DAMH) ದೇಗುಲವನ್ನು ಸಂರಕ್ಷಣೆ ಮಾಡುವ ಕಾರ್ಯವನ್ನು ಆರಂಭಿಸಿತು. ಆದರೆ ಬಳಿಕ ಗ್ರಾಮಸ್ಥರು ಕೈಜೋಡಿಸಿ ಇಡೀ ದೇಗುಲ ಆವರಣವನ್ನೇ ಪುನರುಜ್ಜೀವನಗೊಳಿಸುವ ಕಾರ್ಯವನ್ನು ನಡೆಸಿದರು ಎಂದು ಸೆಜೇಶ್ವರ ಹೇಳುತ್ತಾರೆ.
ದೇಗುಲದ ಉದ್ಧಾರಕ್ಕಾಗಿ ಸ್ಥಾಪನೆಗೊಂಡ ಉಮಾಮಹೇಶ್ವರ ಟ್ರಸ್ಟ್ ಜಿರ್ಣೋದ್ಧಾರ ಕಾರ್ಯಕ್ಕಾಗಿ 7 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ, ಇದರಲ್ಲಿ 50 ಲಕ್ಷ ರೂಪಾಯಿಗಳನ್ನು ಗ್ರಾಮಸ್ಥರು ದೇಣಿಗೆಯಾಗಿ ನೀಡಿದ್ದಾರೆ. ಈ ಮೂಲಕ ಶಿವಮೊಗ್ಗ ಪ್ರವಾಸೋದ್ಯಮಕ್ಕೆ ಮತ್ತೊಂದು ಐತಿಹಾಸಿಕ ಕೊಡುಗೆಯನ್ನೇ ನೀಡಿದ್ದಾರೆ.
ಐತಿಹಾಸಿಕ ದೇಗುಲದ ಜೀರ್ಣೋದ್ಧಾರಕ್ಕೆ ಟೊಂಕಕಟ್ಟಿ ತಮ್ಮ ಕನಸು ನನಸಾಗಿಸಿದ ಶಾಸ್ತ್ರೀ ದಂಪತಿಗಳ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.