2014 ರಿಂದ ದೇಶದಲ್ಲಿ ಮೋದಿ ಸರ್ಕಾರವು ಬದಲಾವಣೆಯ ಗಾಳಿ ಬೀಸುವಂತೆ ಮಾಡಿತು ಮತ್ತು ಭಾರತದ ಆರ್ಥಿಕತೆಯನ್ನು ಅಭೂತಪೂರ್ವವಾಗಿ ಬದಲಾಯಿಸಿತು. ಆಧಾರ್ ಯುಪಿಎ ಸರ್ಕಾರದ ಕನಸಿನ ಕೂಸಾದರೂ, ಬಿಜೆಪಿ ಸರ್ಕಾರದಡಿಯಲ್ಲಿ ಇದನ್ನು ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪರಿವರ್ತನೆಯನ್ನು ತರಲು ಅಸ್ತ್ರವಾಗಿ ಬಳಕೆ ಮಾಡಿಕೊಳ್ಳಲಾಯಿತು. ಸುಪ್ರೀಂಕೋರ್ಟ್ ಆದೇಶದಿಂದಾಗಿ ಆಧಾರಿನ ಬಳಕೆಯನ್ನು ನೇರ ಲಾಭ ವರ್ಗಾವಣೆ (ಡಿಬಿಟಿ)ಯಲ್ಲಿ, ಇನ್ನಿತರ ಸರ್ಕಾರಿ ಯೋಜನೆಗಳಲ್ಲಿ ಬಳಕೆ ಮಾಡಲು ಸಾಧ್ಯವಾಯಿತು. ಕಲ್ಯಾಣ ಯೋಜನೆಗಳು ದೇಶದ ಬಹುಪಾಲು ಜನರನ್ನು ತಲುಪುವಂತೆ ಮಾಡುವಲ್ಲಿ ಇದು ಯಶಸ್ವಿಯಾಯಿತು ಮತ್ತು ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರಲು ಇದು ಸಹಾಯ ಮಾಡಿತು.
ಹಣದ ಸೋರಿಕೆಯನ್ನು ತಡೆಗಟ್ಟುವಲ್ಲಿ ನೇರ ಲಾಭ ವರ್ಗಾವಣೆಯು ಸಹಾಯ ಮಾಡಿದೆ. ಸರ್ಕಾರದ ಪ್ರಮುಖ ಯೋಜನೆಗಳ ಅನರ್ಹ ಮತ್ತು ನಕಲಿ ಫಲಾನುಭವಿಗಳನ್ನು ಹೊರ ಹಾಕುವಲ್ಲಿ ಆಧಾರ್ ಅತ್ಯಂತ ಪ್ರಯೋಜನಕಾರಿಯಾಗಿದೆ. ಪ್ರಸ್ತುತ, ಎಲ್ಪಿಜಿ ಸಬ್ಸಿಡಿಯಿಂದ ಹಿಡಿದು ಕಾಲೇಜು ವಿದ್ಯಾರ್ಥಿ ವೇತನಗಳವರೆಗೆ ಸುಮಾರು 465 ಯೋಜನೆಗಳಿಗೆ ಸರ್ಕಾರ ಡಿಬಿಟಿಯನ್ನು ಬಳಸುತ್ತದೆ. ಸುಪ್ರೀಂಕೋರ್ಟ್ ಸಮ್ಮತಿಯ ನಂತರ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ((MNREGS) ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಯಂತಹ ಹಲವು ಪ್ರಮುಖ ಯೋಜನೆಗಳಲ್ಲಿ ಆಧಾರ್ ಬಳಕೆಯಿಂದಾಗಿ ಭ್ರಷ್ಟಾಚಾರ ಮತ್ತು ಸೋರಿಕೆಗಳು ಅಂತ್ಯಗೊಂಡಿವೆ. ಭಾರತದಲ್ಲಿ ಈಗ 1.24 ಶತಕೋಟಿ ಆಧಾರ್ ಕಾರ್ಡುಗಳಿವೆ, ಇದು ದೇಶದ ಜನಸಂಖ್ಯೆಯ ಸುಮಾರು 98% (2011 ರ ಜನಗಣತಿಯ ಅಂದಾಜಿನ ಪ್ರಕಾರ)ರಷ್ಟನ್ನು ಕವರ್ ಮಾಡಿದೆ.
ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಆಧಾರ್ ಬಳಕೆಯಿಂದಾಗಿ ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಹೆಚ್ಚು ಪಾರದರ್ಶಕಗೊಂಡಿದೆ. ಮೋದಿ ಸರ್ಕಾರದ ಈ ನಿರ್ಧಾರ, ಭ್ರಷ್ಟಾಚಾರವನ್ನು ಉತ್ತೇಜಿಸಿದ ಮತ್ತು ಅದಕ್ಷತೆಗೆ ದಾರಿ ಮಾಡಿಕೊಟ್ಟ ಹಿಂದಿನ ಸರ್ಕಾರದ ಕಾರ್ಯತಂತ್ರಗಳಿಗೆ ವ್ಯತಿರಿಕ್ತವಾಗಿದೆ. ಐದು ವರ್ಷಗಳ ಮೋದಿ ಸರ್ಕಾರದ ಆಡಳಿತವು ಭಾರತವನ್ನು ಪರಿವರ್ತಿಸುವ ಮತ್ತು ಭ್ರಷ್ಟಾಚಾರದಂತಹ ಪ್ರಮುಖ ವಿಷಯಗಳನ್ನು ನಿಭಾಯಿಸುವತ್ತ ಹೆಚ್ಚಿನ ಗಮನವನ್ನು ನೀಡಿದೆ ಎಂಬುದನ್ನು ಆಧಾರ್ ಕಾರ್ಡಿನ ವ್ಯವಸ್ಥಿತ ಬಳಕೆ ಸಾಬೀತುಪಡಿಸಿದೆ.
ಆಧಾರ್ನ ಪ್ರಯೋಜನವೆಂದರೆ, ಬಯೋಮೆಟ್ರಿಕ್ ಗುರುತಿಸುವಿಕೆ. ಇದು ಯೋಜನೆಯ ನಿಜವಾದ ಮತ್ತು ನಕಲಿ ಫಲಾನುಭವಿಗಳನ್ನು ಗುರುತಿಸುವಲ್ಲಿ ಸಹಾಯ ಮಾಡುತ್ತದೆ. ಆಧಾರ್ನ ಸಹಾಯದಿಂದ, ಭಾರತದ ಎರಡು ದೊಡ್ಡ ಯೋಜನೆಗಳಾದ MNREGS ಮತ್ತು PDS, ಶೇ.90ರಷ್ಟು ಫಲಾನುಭವಿಗಳನ್ನು ತಲುಪಲು ಸಮರ್ಥವಾಗಿವೆ. ಸರ್ಕಾರದ ಎಲ್ಲಾ ಪ್ರಮುಖ ಯೋಜನೆಗಳು ಬಹುತೇಕ ಆಧಾರ್ನೊಂದಿಗೆ ಲಿಂಕ್ ಆಗಿವೆ.
ಜನ್ಧನ್ ಯೋಜನೆ ಎಂಬ ಕಲ್ಯಾಣ ಯೋಜನೆಯು ಎನ್ಡಿಎ ಸರಕಾರದ ಹೆಚ್ಚಿನ ಗಮನವನ್ನು ಪಡೆದುಕೊಂಡಿದೆ. ಈ ಯೋಜನೆಯು ಆರ್ಥಿಕ ಸೇರ್ಪಡೆಗೆ ಸಹಾಯ ಮಾಡಿದೆ ಮತ್ತು ಇದರಡಿ ಠೇವಣಿಯಾದ ಮೊತ್ತವು 1 ಲಕ್ಷ ಕೋಟಿ ರೂಪಾಯಿಯ ಗಡಿ ದಾಟುವ ಸಮೀಪದಲ್ಲಿದೆ. 2014-15ರ ಆರ್ಥಿಕ ಸಮೀಕ್ಷೆಯು, ಜನ್ ಧನ್-ಆಧಾರ್-ಮೊಬೈಲ್ (JAM) ತ್ರಿವಳಿಯನ್ನು ಸಂಭವನೀಯ ಗೇಮ್ ಚೇಂಬರ್ ಎಂದು ಪರಿಗಣಿಸಿದೆ. ಯಾಕೆಂದರೆ, ಡಿಬಿಟಿಯ ಮೂಲಕ JAM ಭ್ರಷ್ಟ ಮಧ್ಯವರ್ತಿಗಳನ್ನು ಹೊರಗಿಡುತ್ತದೆ ಮತ್ತು ಮಾರುಕಟ್ಟೆ ಕುಸಿತ ತಡೆಯುತ್ತದೆ.
ಕಳೆದ ಎರಡು ವರ್ಷಗಳಲ್ಲಿ, ಡಿಬಿಟಿ ಗಣನೀಯವಾಗಿ ಏರುಗತಿಯನ್ನು ಕಂಡಿದೆ. 2018-2019 ರಲ್ಲಿ 2 ಲಕ್ಷ ಕೋಟಿ ರೂ., ಸರ್ಕಾರಿ ಖರ್ಚಿನ ಶೇ. 8 ರಷ್ಟು ಪಾಲನ್ನು ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ವಿತರಿಸಲಾಗಿದೆ. PAHAL, MNREGS, ರಸಗೊಬ್ಬರಗಳು, ವಸತಿ ಕಾರ್ಯಕ್ರಮ, PMAY ಮತ್ತು PDS ನಂತಹ ಅನೇಕ ಕಾರ್ಯಕ್ರಮಗಳಲ್ಲಿ DBT ಯ ಪ್ರಭಾವವನ್ನು ಕಾಣಬಹುದು. ಯೋಜನೆಗಳ ವ್ಯಾಪ್ತಿಯು ಡಿಬಿಟಿಯ ಬಳಕೆಯ ಮೂಲಕ ಹೆಚ್ಚಾಗಿದೆ ಮತ್ತು ಡಿಬಿಟಿಯಿಂದಾಗಿ ಫಲಾನುಭವಿಗಳ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಲು ಸಹಾಯವಾಗಿದೆ.
ಡಿಬಿಟಿಯು ಉಳಿತಾಯದ ಉದ್ದೇಶವನ್ನು ಒಳಗೊಂಡಿದೆ ಮತ್ತು ಈ ಯೋಜನೆ 2014 ರ ಬಳಿಕ 1.2 ಟ್ರಿಲಿಯನ್ ಡಾಲರ್ ಉಳಿತಾಯ ಮಾಡಲು ಸಹಾಯ ಮಾಡಿದೆ. ಆಧಾರ್ ನಕಲಿ ಫಲಾನುಭವಿಗಳನ್ನು ತೆಗೆದುಹಾಕುವ ಮೂಲಕ ಉಳಿತಾಯವನ್ನು ಮಾಡಿದೆ ಎಂದು ಸರ್ಕಾರ ಹೇಳಿದೆ. ಡಿಬಿಟಿ ವ್ಯವಸ್ಥೆಯು ಸೋರಿಕೆಯನ್ನು ತಡೆಗಟ್ಟುವುದರಿಂದ, ಸಮಯದ ವಿಳಂಬವನ್ನು ತಪ್ಪಿಸುವುದರಿಂದ, ಸೇವೆಗಳ ಲಭ್ಯತೆಯನ್ನು ಹೆಚ್ಚಳ ಮಾಡುವುದರಿಂದ ಡಿಬಿಟಿಯ ವ್ಯವಸ್ಥೆಗೆ ಶೇ.90ರಷ್ಟು ಜನರು ಆದ್ಯತೆಯನ್ನು ನೀಡಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರವನ್ನು ತಗ್ಗಿಸುವಲ್ಲಿ ಆಧಾರ್ ಮತ್ತು ಡಿಬಿಟಿಯು ಅತ್ಯಂತ ಮಹತ್ವದ ಮಾತ್ರವನ್ನು ವಹಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.