ನವದೆಹಲಿ : 2005ಕ್ಕಿಂತ ಮೊದಲಿನಿಂದಲೂ ಚಲಾವಣೆಯಲ್ಲಿದ್ದ 500ಮತ್ತು 1000 ಸಾವಿರದ ನೋಟುಗಳನ್ನು ಬ್ಯಾಂಕ್ಗಳಿಗೆ ಜಮಾಮಾಡಿ ಬದಲಿಸಿ ಕೊಳ್ಳಲು ಡಿ.31ರ ವರೆಗೆ ಅವಧಿ ವಿಸ್ತರಿಸಲಾಗಿದೆ.
2005 ಕ್ಕಿಂತ ಹಿಂದಿನ ನೋಟುಗಳಲ್ಲಿ ನೋಟಿನಲ್ಲಿ ಅಳವಡಿಸಬೇಕಾದ ಭದ್ರತಾ ಕ್ರಮಗಳನ್ನು ಅಳವಡಿಸಲಾಗಿಲ್ಲ. ಆದುದರಿಂದ ಅದನ್ನು ಹಿಂಪಡೆಯಲು ಆರ್.ಬಿ.ಐ ಚಿಂತಿಸಿತ್ತು. ಈ ಹಿಂದೆ ಜ.೧ನ್ನು ಕಡೆಯ ದಿನವನ್ನಾಗಿ ಘೋಷಿಸಿತ್ತು. ಅದನ್ನು ಈ ತಿಂಗಳ ಕೊನೆಯವರೆಗೆ ವಿಸ್ತರಿಸಿತ್ತು.
ಆದರೆ ಈಗ ಈ ಅವಧಿಯನ್ನು ಡಿ.31ರ ವರೆಗೆ ವಿಸ್ತರಿಸಲಾಗಿದೆ. 500 ರಮತ್ತು 1000ದ ನೋಟುಗಳ ಬದಲಾವಣೆಗೆ ಇನ್ನೂ 6ತಿಂಗಳ ಅವಧಿ ನೀಡಿದಂತಾಗಿದೆ.
100ರ ಹೊಸ ನೋಟು ಇನ್ನಷ್ಟು ಹೆಚ್ಚಿನ ಭದ್ರತಾ ವಿನ್ಯಾಸಗಳೊಂದಿಗೆ ಬರುತ್ತಿದೆ ಎಂದು ಆರ್.ಬಿ.ಐ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.