ತನ್ನ ಅಧಿಕಾರಾವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಮಾನವ ಅಥವಾ ಆರ್ಥಿಕ ಅಭಿವೃದ್ಧಿ ಸೇರಿದಂತೆ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ಆರ್ಥಿಕ ಸೇರ್ಪಡೆಯನ್ನು ಅನುಷ್ಠಾನಗೊಳಿಸಲು ಅಭೂತಪೂರ್ವ ಕ್ರಮಗಳನ್ನು ಕೈಗೊಂಡಿದ್ದಾರೆ. ಅಭಿವೃದ್ಧಿ ಕಾರ್ಯತಂತ್ರಗಳಲ್ಲಿ, ಉದ್ಯಮಶೀಲತೆ ಮತ್ತು ಸ್ಟಾರ್ಟ್ ಅಪ್ ಮೇಲಿನ ಗಮನವು ಅತ್ಯಂತ ಮಹತ್ವದ್ದಾಗಿದ್ದು, ಹಲವಾರು ಯೋಜನೆಗಳು ಮತ್ತು ತೆರಿಗೆ ಕಡಿತಗಳನ್ನು ಪರಿಚಯಿಸುವ ಮೂಲಕ ಪ್ರಧಾನಿ ಮೋದಿ ಇವುಗಳನ್ನು ಪರಿಚಯಿಸಿದರು. ಉದ್ಯಮಶೀಲತೆಯ ಅಭಿವೃದ್ಧಿಯನ್ನು ಸರಳಗೊಳಿಸುವ ಯೋಜನೆಗಳ ಪೈಕಿ ಮುಂಚೂಣಿಯಲ್ಲಿರುವುದು ಮುದ್ರಾ ಯೋಜನೆ. ಸಮಾಜದಲ್ಲಿ ಸಾಮಾಜಿಕವಾಗಿ ಅನಾನುಕೂಲತೆಯನ್ನು ಹೊಂದಿರುವ ವರ್ಗದ ಅತೀದೊಡ್ಡ ಆರ್ಥಿಕ ಸೇರ್ಪಡೆ ಎಂದೇ ಮುದ್ರಾವನ್ನು ಪರಿಗಣಿಸಲಾಗುತ್ತದೆ.
ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಮೋದಿ ತೆಗೆದುಕೊಂಡ ಅತ್ಯಂತ ನವೀನ ಯೋಜನೆಗಳ ಪೈಕಿ ಮುದ್ರಾ ಯೋಜನೆ ಕೂಡ ಒಂದಾಗಿದೆ. 2015-16ರ ಹಣಕಾಸು ವರ್ಷದಲ್ಲಿ ಬಜೆಟ್ ಮಂಡಿಸಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ‘ಮುದ್ರಾ’ವನ್ನು ಘೋಷಣೆ ಮಾಡಿದ್ದರು. ಈ ಯೋಜನೆಯ ಭಾಗವಾಗಿ, ಅಗ್ಗದ ಮತ್ತು ಜಾಮೀನು ಇಲ್ಲದ ಉಚಿತ ಸಾಲಗಳನ್ನು ಸಣ್ಣ ಉದ್ಯಮಗಳಿಗೆ ನೀಡಲಾಗುತ್ತದೆ. ಉತ್ಪಾದನೆ, ಸಂಸ್ಕರಣೆ, ವಹಿವಾಟು, ಮತ್ತು ಸೇವಾ ವಲಯ ಚಟುವಟಿಕೆಗಳಲ್ಲಿ ತೊಡಗಿರುವ ಸೂಕ್ಷ್ಮ ಉದ್ಯಮಗಳಿಗೆ ಸಹಾಯ ಮಾಡುವ ಗುರಿ ಹೊಂದಿರುವ ಈ ಯೋಜನೆ ರೂ.50 ಸಾವಿರದಿಂದ 10 ಲಕ್ಷದವರಗೆ ಸಾಲವನ್ನು ನೀಡುತ್ತದೆ.
”ಅಂತರವನ್ನು ಕುಗ್ಗಿಸಲು ಮತ್ತು ಅನುದಾನ ಸಿಗದವರಿಗೆ ಅನುದಾನ ಸಿಗುವಂತೆ ಮಾಡುವ ಗುರಿ ಮುದ್ರಾ ಯೋಜನೆಯದ್ದು. ಮುದ್ರಾ ಯೋಜನೆಯು ಎಸ್ ಸಿ/ ಎಸ್ ಟಿ ಯುವಕರ ಆಶೋತ್ತರಗಳನ್ನು ಹೆಚ್ಚಿನ ಮಟ್ಟದಲ್ಲಿ ಈಡೇರಿಸುತ್ತಿದೆ’ ಎಂದು ಮೋದಿ ತಮ್ಮ ಬ್ಲಾಗ್ನಲ್ಲಿ ಹೇಳಿಕೊಂಡಿದ್ದರು.
ಈ ಯೋಜನೆಯಡಿಯಲ್ಲಿ, ದಲಿತ ಉದ್ಯಮಿಗಳಿಗೆ ನೀಡಲಾದ ಪ್ರಯೋಜನಗಳು ಅಗಾಧವಾಗಿವೆ. ಸಾಂಪ್ರದಾಯಿಕವಾಗಿ, ಅವರು ಸಮಾಜದ ಅತ್ಯಂತ ಹಿಂದುಳಿದ ಆರ್ಥಿಕ ವರ್ಗವಾಗಿದ್ದಾರೆ. ಅವರು ಭೂಮಿರಹಿತ ಗುಂಪಾಗಿರುವ ಕಾರಣ, ಅವರಿಗೆ ಸಾಲ ಪಡೆಯುವಾಗ ಜಾಮೀನು ನೀಡಲು ಏನೂ ಇರುವುದಿಲ್ಲ. ಇದರಿಂದಾಗಿ ಅವರಿಗೆ ಸಾಲ ಸಿಗುವುದು ಕಷ್ಟವಾಗುತ್ತದೆ. ಇದೇ ಕಾರಣಕ್ಕೆ ವ್ಯವಹಾರಗಳನ್ನು ಪ್ರಾರಂಭಿಸುವುದರಲ್ಲಿ ಅವರು ಹಿಂದುಳಿಯುತ್ತಾರೆ. ಆದರೆ, ಮುದ್ರಾ ಯೋಜನೆಯಡಿ, ದಲಿತ ವ್ಯವಹಾರಗಳು ಅಭೂತಪೂರ್ವ ಪ್ರಮಾಣದಲ್ಲಿ ಬೆಳೆದಿದೆ, ಯಾಕೆಂದರೆ ಮುದ್ರಾದ ಮೂಲಕ ಸಾಲ ಪಡೆದುಕೊಂಡು ಅವರು ಅದರ ಮೂಲಕ ವ್ಯವಹಾರವನ್ನು ಆರಂಭಿಸುತ್ತಿದ್ದಾರೆ. ಮುದ್ರಾದ ಸಹಾಯದಿಂದ, ವಾಣಿಜ್ಯೋದ್ಯಮ ಮತ್ತು ನಾವೀನ್ಯತೆಯ ಪರಿಸರ ವ್ಯವಸ್ಥೆಯಲ್ಲಿ ದಲಿತರು ವಾಣಿಜ್ಯ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಹುಡುಕುತ್ತಿದ್ದಾರೆ.
“ಎಸ್ಸಿ / ಎಸ್ಟಿ ಯುವ ಜನರಿಗೆ ಉದ್ಯಮವನ್ನು ಪ್ರಾರಂಭಿಸಲು ಸುಸ್ಥಿರ ವೇದಿಕೆಯನ್ನು ಕಲ್ಪಿಸಿಕೊಡುವ ಸಲುವಾಗಿ ಮತ್ತು ರಾಷ್ಟ್ರೀಯ ಪ್ರಗತಿ ಮತ್ತು ಅಭಿವೃದ್ಧಿಯ ಫಲ ಎಸ್ಸಿ / ಎಸ್ಸಿ ಸಮುದಾಯದವರಿಗೂ ದೊರಕಬೇಕು ಎನ್ನುವ ದೂರದೃಷ್ಟಿಯೊಂದಿಗೆ ಮುದ್ರಾವನ್ನು ಅನುಷ್ಠಾನಗೊಳಿಸಲಾಗಿದೆ ಎಂದು’ ಮೋದಿ ಬ್ಲಾಗ್ನಲ್ಲಿ ಹೇಳಿಕೊಂಡಿದ್ದಾರೆ.
“80,000 ಮಂದಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಈ ಯೋಜನೆಯಡಿ ಎಸ್. ಸಿ. ಮತ್ತು ಎಸ್. ಟಿ., ಒಬಿಸಿ ಸಮುದಾಯದವರು ಮತ್ತು ಮಹಿಳೆಯರು ಸುಮಾರು 50,000 ಕೋ.ರೂ ಮೌಲ್ಯದ ಸಾಲಗಳನ್ನು ಪ್ರಾಥಮಿಕವಾಗಿ ಪಡೆದುಕೊಂಡು ಅದರ ಮೂಲಕ ಸಣ್ಣ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮಾತ್ರವಲ್ಲ, ಸುಮಾರು 14 ಕೋಟಿ ಜನರಿಗೆ ಉದ್ಯೋಗವನ್ನು ಒದಗಿಸುತ್ತಿದ್ದಾರೆ.” ಎಂದಿದ್ದಾರೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಎಸ್ಸಿ ವಿಭಾಗಕ್ಕೆ ಸೇರಿದ ಮುದ್ರಾ ಸಾಲದ ಫಲಾನುಭವಿಗಳ ಸಂಖ್ಯೆ 61.14 ಲಕ್ಷ ಮತ್ತು ಎಸ್ಟಿ ವರ್ಗದವರ ಸಂಖ್ಯೆ 16.78 ಲಕ್ಷ . ಮುದ್ರಾ ಯೋಜನೆಯಡಿಯಲ್ಲಿನ ಎಸ್ಸಿ ಮತ್ತು ಎಸ್ಟಿಯವರ ಒಟ್ಟು ಖಾತೆಗಳು 77.92 ಲಕ್ಷ. ಒಟ್ಟು ಶೇಕಡಾ 22.34% ಮತ್ತು ಒಟ್ಟು ವಿತರಣಾ ಮೊತ್ತ 19,433 ಕೋಟಿ ರೂ. ಇದು ಸಮಾಜದ ನಿರ್ಲಕ್ಷಿತ ಪಂಗಡದ ಜೀವನೋಪಾಯದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಿದೆ.
ಯೋಜನೆಯ ಸಂಪೂರ್ಣ ಯಶಸ್ಸನ್ನು ಕೊಂಡಾಡಿರುವ ಮೋದಿ, “ಹಣಕಾಸು ಸೇರ್ಪಡೆಯತ್ತ ಸರ್ಕಾರದ ಗಮನವು ಹೆಚ್ಚಾಗಿ ಕೇಂದ್ರೀಕೃತವಾಗಿದೆ. ಅದು ಉದ್ಯೋಗ-ಸೃಷ್ಟಿಕರ್ತರನ್ನು ಸೃಷ್ಟಿಸಲಿದೆಯೇ ಹೊರತು ಉದ್ಯೋಗ ಹುಡುಕುವವರನ್ನಲ್ಲ” ಎಂದಿದ್ದಾರೆ.
ಪ್ರಧಾನಿ ಮೋದಿಯವರು ಎ.14ರಂದು ನಡೆಸಿದ ಭಾಷಣದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನೆನಪಿಸಿಕೊಂಡು, “ಬಾಬಾಸಾಹೇಬ್ ಅವರು, ನಮ್ಮ ದಲಿತ ಸಹೋದರರಿಗೆ ಮತ್ತು ಸಹೋದರರಿಗೆ ಕೈಗಾರೀಕರಣವು ಗರಿಷ್ಠ ಲಾಭವನ್ನು ನೀಡುತ್ತದೆ ಎಂದು ಹೇಳಿದ್ದರು” ಎಂದಿದ್ದಾರೆ.
ಇದಲ್ಲದೆ, ಮ್ಯಾನುವಲ್ ಸ್ಕ್ಯಾವೇಜಿಂಗ್ನಲ್ಲಿ ತೊಡಗಿಕೊಂಡಿದ್ದ ಸುಮಾರು 7,500 ವ್ಯಕ್ತಿಗಳನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಗುರುತಿಸಿದ್ದು, ಅವರಿಗೆ ಸಣ್ಣ ವ್ಯಾಪಾರದತ್ತ ಮುಖ ಮಾಡಲು 40,000 ರೂಪಾಯಿಗಳ ಅನುದಾನವನ್ನು ನೀಡಲಾಗುತ್ತಿದೆ.
ಮೋದಿ ಸರಕಾರ ದಲಿತರಿಗಾಗಿ ಮಾಡಿದ ಈ ಪ್ರಯತ್ನಗಳು ಗಮನವನ್ನು ಸೆಳೆಯದೇ ಇರುವುದಿಲ್ಲ ಮತ್ತು 2019ರ ಚುನಾವಣಾ ಕಣದಲ್ಲಿ ಇದು ಬಿಜೆಪಿಗೆ ಭಾರೀ ಪ್ರಯೋಜನಗಳನ್ನು ತಂದುಕೊಡುವುದರಲ್ಲಿ ಅನುಮಾನವೇ ಇಲ್ಲ. ಈ ಯೋಜನೆಯ ಅನುಷ್ಠಾನದ ನಂತರ, ದೇಶಾದ್ಯಂತದ ಕುಟುಂಬಗಳು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಾಧ್ಯವಾಗುತ್ತಿದೆ ಮತ್ತು ಇತರರಿಗೆ ಹೆಚ್ಚಿನ ಸಂಖ್ಯೆಯ ಉದ್ಯೋಗಾವಕಾಶಗಳನ್ನೂ ಇವರು ಸೃಷ್ಟಿಸುತ್ತಿದ್ದಾರೆ ಎಂಬುದನ್ನು ಪ್ರಧಾನಿ ಮೋದಿ ತನ್ನ ಬ್ಲಾಗ್ನಲ್ಲಿ ಸೂಕ್ತವಾಗಿಯೇ ಉಲ್ಲೇಖ ಮಾಡಿದ್ದಾರೆ. ದಲಿತ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಡಿಐಸಿಸಿಐ)ನ ತತ್ವವಾದ ‘ಬಿ ಜಾಬ್ ಗೀವರ್ಸ್, ನಾಟ್ ಜಾಬ್ ಸೀಕರ್ಸ್ (ಉದ್ಯೋಗ ನೀಡುವವರಾಗಿ, ಉದ್ಯೋಗ ಹುಡುಕುವವರಲ್ಲ)’ ಎಂಬ ತತ್ವದಿಂದ ಸಾಕಷ್ಟು ಪ್ರೇರಿತಗೊಂಡಿರುವ ದೇಶದಾದ್ಯಂತ ದಲಿತ ಯುವಕರು ತಮ್ಮದೇ ಆದ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಮತ್ತು ಉದ್ಯಮಶೀಲರಾಗಲು ಹೆಚ್ಚಿನ ಆಸಕ್ತಿಯನ್ನು ಹೊಂದುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.