ಮೋದಿ ಸರಕಾರದಡಿಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ವಸತಿಗಳು ಹೆಚ್ಚು ಅಗ್ಗವಾಗಿವೆ ಎಂದು ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿಗಳು ಅಂದಾಜಿಸಿವೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ, ಸರ್ಕಾರ ನೀಡುತ್ತಿರುವ ಸಬ್ಸಿಡಿಗಳು ಮತ್ತು ಪ್ರೋತ್ಸಾಹಕಗಳು, ಕಡಿಮೆ ಗೃಹ ಸಾಲ ದರಗಳು, ಕಳೆದ ಕೆಲವು ವರ್ಷಗಳಲ್ಲಿನ ಆದಾಯದ ಬೆಳವಣಿಗೆ, ವಸತಿ ವಲಯದಲ್ಲಿನ ಕಡಿಮೆ ಹಣದುಬ್ಬರ. ರಿಯಲ್ ಎಸ್ಟೇಟ್ ವಲಯದಲ್ಲಿ ಕಪ್ಪು ಹಣದ ಹೂಡಿಕೆಯು ನೋಟ್ ಬ್ಯಾನ್ ಮೂಲಕ ಕೊನೆಗೊಂಡಿತು. ಅಪನಗದೀಕರಣ ರಿಯಲ್ ಎಸ್ಟೇಟ್ ಬೆಲೆಗಳನ್ನು ಅತ್ಯಂತ ಕಡಿಮೆ ಮಟ್ಟಕ್ಕೆ ತಂದಿತು ಮತ್ತು ಕಪ್ಪು ಹಣವನ್ನು ನಿಗ್ರಹಿಸಲು ತೆಗೆದುಕೊಂಡ ಕ್ರಮಗಳು ವಸತಿ ಬೆಲೆಯನ್ನು ಕಡಿಮೆ ಮಾಡಿತು. ಪ್ರಧಾನ್ ಮಂತ್ರಿ ಆವಾಸ್ ಯೋಜನೆ-ನಗರದಡಿಯಲ್ಲಿ, ಆರ್ಥಿಕವಾಗಿ ದುರ್ಬಲವಾದ ವಿಭಾಗಕ್ಕೆ ಮತ್ತು ಕಡಿಮೆ ಆದಾಯ ವರ್ಗಕ್ಕೆ ಉತ್ತೇಜನ ಮತ್ತು ಸಬ್ಸಿಡಿಗಳನ್ನು ಸರ್ಕಾರವು ನೀಡುತ್ತದೆ. ಇದು ವಸತಿಯ ದರವನ್ನು 1-3 ಲಕ್ಷ ರೂ.ಗೆ ಇಳಿಕೆ ಮಾಡಿದೆ.
ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಜೆಎಲ್ಎಲ್ ಇಂಡಿಯಾವು, ಹೋಮ್ ಪರ್ಚೇಸ್ ಅಫರ್ಡೇಬಿಲಿಟಿ ಇಂಡೆಕ್ಸ್ ಅನ್ನು ಪ್ರಕಟಿಸಿದೆ. ಇದರ ವರದಿ ಪ್ರಕಾರ, ‘2014ರಿಂದ 2018ರವರೆಗೆ ಅತ್ಯುತ್ತಮ ಗೃಹ ಸಾಲ ದರಗಳಿಂದಾಗಿ ಭಾರತದ ಪ್ರಮುಖ ಮಾರುಕಟ್ಟೆಗಳಲ್ಲಿ ವಸತಿ ಲಭ್ಯತೆಯೂ ಸುಧಾರಿಸಿದೆ’. ”2013ರ ಅವಧಿಯಲ್ಲಿ ಯುಪಿಎ ಸರ್ಕಾರದಡಿಯಲ್ಲಿ ಭಾರತದ 7 ಪ್ರಮುಖ ನಗರಗಳಾದ ಮುಂಬೈ, ದೆಹಲಿ ಎನ್ಸಿಆರ್, ಬೆಂಗಳೂರು, ಚೆನ್ನೈ, ಪುಣೆಯ, ಹೈದರಾಬಾದ್ ಮತ್ತು ಕೊಲ್ಕತ್ತಾ ಅವುಗಳ ಪೈಕಿ, ಕೇವಲ ಹೈದರಾಬಾದಿನಲ್ಲಿ ಮಾತ್ರ ವಸತಿ ಕೈಗೆಟಕುವ ದರದಲ್ಲಿ ಇತ್ತು. ಈ ಪರಿಸ್ಥಿತಿ ಮೋದಿ ಸರಕಾರದಡಿ ತೀವ್ರವಾಗಿ ಸುಧಾರಿಸಿದೆ ಮತ್ತು ಈಗ ಮುಂಬೈ ಹೊರತುಪಡಿಸಿ ಎಲ್ಲಾ ಕಡೆಯೂ ವಸತಿ ಕೈಗೆಟಕುವ ದರದಲ್ಲಿದೆ. 1,000 ಚದರ ಅಡಿಗಳ ಅಪಾರ್ಟ್ಮೆಂಟ್ನ ದರವು ಕುಟುಂಬದ ವಾರ್ಷಿಕ ಸರಾಸರಿ ಆದಾಯದ 4.5 ಪಟ್ಟು ಕಡಿಮೆಯಾಗಿದ್ದರೆ ಆ ನಗರವನ್ನು ಕೈಗೆಟುಕುವ ವಸತಿ ಇರುವ ನಗರ ಎಂದು ಪರಿಗಣಿಸಲಾಗುತ್ತದೆ.
ಕೈಗೆಟಕುವ ದರದಲ್ಲಿ ವಸತಿ ಲಭ್ಯವಾಗಲು ಪ್ರಾಥಮಿಕ ಕಾರಣವೆಂದರೆ, ಕಡಿಮೆ ವಸತಿ ಹಣದುಬ್ಬರ ಮತ್ತು ಅಧಿಕ ಆದಾಯದ ಬೆಳವಣಿಗೆ. 2014 ಮತ್ತು 2018 ರ ನಡುವೆ ಆಸ್ತಿ ಬೆಲೆ ಶೇ.2ರಷ್ಟು ಮಾತ್ರ ಹೆಚ್ಚಾಗಿದೆ, ಆದರೆ ಮಧ್ಯಮ ವರ್ಗದ ಸರಾಸರಿ ಆದಾಯವು ಶೇಕಡ 9 ರಷ್ಟು ಹೆಚ್ಚಾಗಿದೆ. ಶೇ. 7 ರಷ್ಟು ಹೆಚ್ಚುವರಿ ಆದಾಯವು ನಗರಗಳನ್ನು ಹೆಚ್ಚು ಅಗ್ಗವಾಗಿಸಿತು. ಯುಪಿಎ ಸರಕಾರದಡಿ ಮಧ್ಯಮ ವರ್ಗದ ಆದಾಯವೂ ಹೆಚ್ಚಿದೆ ಆದರೆ ಆಸ್ತಿ ಬೆಲೆಗಳು ಕೂಡ ಏರಿದೆ. ರಿಯಲ್ ಎಸ್ಟೇಟ್ನಲ್ಲಿ ಕಪ್ಪು ಹಣ ಹೂಡಿಕೆಯನ್ನು ನಿಭಾಯಿಸಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಲಿಲ್ಲ, ಇದರಿಂದಾಗಿ ಪ್ರತಿ ವರ್ಷವೂ ಆಸ್ತಿ ಬೆಲೆಗಳಲ್ಲಿ ಶೇ. 15-20ರಷ್ಟು ಹೆಚ್ಚಾಯಿತು. ಯುಪಿಎ ಅವಧಿಗೆ ಹೋಲಿಸಿದರೆ ಮೋದಿ ಸರಕಾರದಡಿ ಸರಾಸರಿ ಆಸ್ತಿ ಬೆಲೆ ಏರಿಕೆ 8-10 ಪಟ್ಟು ಕಡಿಮೆಯಾಗಿದೆ.
ಆಸ್ತಿ ಬೆಲೆಗಳು ಮುಂದಿನ ಕೆಲವು ವರ್ಷಗಳವರೆಗೆ ಕಡಿಮೆಯೇ ಇರಲಿದೆ ಮತ್ತು ಲಭ್ಯತೆ ಏರಿಕೆಯಾಗಲಿದೆ. ಹೀಗಾಗಿ ಮೋದಿ ಸರಕಾರವು ಮತ್ತೆ ಅಧಿಕಾರಕ್ಕೆ ಮರಳಿದರೆ, ಪ್ರತಿ ಮಧ್ಯಮ ವರ್ಗ ಕುಟುಂಬವು 2022 ರ ಹೊತ್ತಿಗೆ ತಮ್ಮ ಸ್ವಂತ ಮನೆಗಳನ್ನು ಹೊಂದುವುದು ನಿಶ್ಚಿತ. “ಎಲ್ಲಾ ಏಳು ನಗರಗಳಲ್ಲಿ ಮುಂದಿನ ಮೂರು ವರ್ಷಗಳಲ್ಲಿ ವಸತಿ ಲಭ್ಯತೆಯ ಮಟ್ಟವು ಸುಧಾರಣೆಯನ್ನು ಕಾಣಲಿದೆ. ಅದೇ ಅವಧಿಯಲ್ಲಿ, ಆಸ್ತಿ ದರದಲ್ಲಿ ಶೇ.3-5ರಷ್ಟು ಕ್ಷಿಪ್ರ ಪ್ರಗತಿಯಾಗಲಿದೆ ಮತ್ತು ಕುಟುಂಬದ ಸರಾಸರಿ ವಾರ್ಷಿಕ ಆದಾಯದಲ್ಲಿ ಶೇ.8-9ರಷ್ಟು ಹೆಚ್ಚಳವಾಗಲಿದೆ. ಗೃಹ ಸಾಲಗಳ ದರದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂಬುದು ನಿಶ್ಚಿತ”ಎಂದು ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಜೆಎಲ್ಎಲ್ ಇಂಡಿಯಾದ ಸಂಶೋಧನಾ ಮುಖ್ಯಸ್ಥ ಸಮಂತಕ್ ದಾಸ್ ಹೇಳಿದ್ದಾರೆ.
ಕಳೆದ ಎರಡು ಹಣಕಾಸು ನೀತಿ ಸಭೆಗಳಲ್ಲಿ, ಆರ್ಬಿಐಯು 50 ಬೇಸಿಸ್ ಪಾಯಿಂಟ್ ಪಾಲಿಸಿ ದರಗಳನ್ನು ಕಡಿಮೆ ಮಾಡಿದೆ. ಗೃಹ ಸಾಲ ದರಗಳು ಮುಂಬರುವ ತಿಂಗಳುಗಳಲ್ಲಿ ಇನ್ನಷ್ಟು ಅಗ್ಗವಾಗಲಿದೆ ಎಂದು ನಿರೀಕ್ಷಿಸಲಾಗಿದೆ, ಇದರಿಂದಾಗಿ ವಸತಿ ಲಭ್ಯತೆ ಇನ್ನಷ್ಟು ಹೆಚ್ಚಾಗುತ್ತದೆ. ಮುಂದಿನ ಜಿ ಎಸ್ ಟಿ ಕೌನ್ಸಿಲ್ ಸಭೆಯಲ್ಲಿ, ಸಿಮೆಂಟ್ ಅನ್ನು ಶೇ. 28ರ ತೆರಿಗೆ ವ್ಯಾಪ್ತಿಯಿಂದ ಶೇ.18ರ ತೆರಿಗೆ ವ್ಯಾಪ್ತಿಗೆ ತರಲು ಸರ್ಕಾರ ಯೋಜಿಸಿದೆ. ಮುಂಬರುವ ತಿಂಗಳುಗಳಲ್ಲಿ ಇನ್ಪುಟ್ ವೆಚ್ಚವು ಕಡಿಮೆಯಾಗಲಿದೆ ಮತ್ತು ಮನೆಗಳು ಅಗ್ಗದ ದರದಲ್ಲಿ ಮಾರಾಟವಾಗಲಿದೆ. ಮೋದಿ ಸರಕಾರ ಅಧಿಕಾರಕ್ಕೆ ಮರಳಿದರೆ, ಮಧ್ಯಮ ವರ್ಗದ ಕುಟುಂಬಗಳು ಮನೆಗಳನ್ನು ಹೊಂದುವ ಅವಕಾಶಗಳು ಹೆಚ್ಚಾಗುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.