ಮೋದಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ, ಎಲ್ಲರನ್ನೂ ಆಶ್ಚರ್ಯಪಡುವಂತೆ ಮಾಡಿದ ಒಂದು ವಲಯವೆಂದರೆ ಅದು ನವೀಕರಿಸಬಹುದಾದ ಶಕ್ತಿಯ ವಲಯ. ಈ ವಲಯ ಕ್ಷಿಪ್ರ ಗತಿಯಲ್ಲಿ ಬೆಳವಣಿಗೆಯನ್ನು ಕಂಡಿತು ಮತ್ತು ಶಕ್ತಿ ಉತ್ಪಾದನೆಯು ಅಂದಾಜು ಗುರಿಯನ್ನೂ ಮೀರಿತು. ಈಗ ದೇಶವು ಮೂರನೇ ಅತಿದೊಡ್ಡ ಸೌರ ವಿದ್ಯುತ್ ಮಾರುಕಟ್ಟೆಯಾಗಿದೆ ಮತ್ತು ಪ್ರಪಂಚದಲ್ಲಿ ನಾಲ್ಕನೇ ಅತ್ಯಧಿಕ ಗಾಳಿ ಶಕ್ತಿ ಸಾಮರ್ಥ್ಯವನ್ನು ಹೊಂದಿದೆ. ಇಂಡಿಯಾ ಬ್ರಾಂಡ್ ಇಕ್ವಿಟಿ ಫೌಂಡೇಶನ್ (ಐಬಿಇಎಫ್) ವರದಿಯ ಪ್ರಕಾರ, ಕಳೆದ 18 ವರ್ಷಗಳಲ್ಲಿ ಈ ವಲಯವು 7.48 ಶತಕೋಟಿ ಡಾಲರ್ಗಳಷ್ಟು ಹೂಡಿಕೆಯನ್ನು ಏಪ್ರಿಲ್ 2000 ರಿಂದ ಡಿಸೆಂಬರ್ 2018 ರವರೆಗೆ ಕಂಡಿದೆ. ಶುದ್ಧ ಇಂಧನದಲ್ಲಿ ಒಟ್ಟು ಹೂಡಿಕೆಯು 2018ರ ಕ್ಯಾಲೆಂಡರ್ ವರ್ಷದಲ್ಲಿ 11.1 ಶತಕೋಟಿ ಡಾಲರ್ ಎಂದು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಸಲಹಾ ಸಂಸ್ಥೆ ಕೆಪಿಎಂಜಿಯ ಮಾಹಿತಿ ಹೇಳುತ್ತದೆ.
ಮೋದಿ ಸರಕಾರವು ನವೀಕರಿಸಬಹುದಾದ ಇಂಧನದಲ್ಲಿ ಎಫ್ಡಿಐ ಅನ್ನು ಸ್ವಯಂಚಾಲಿತ ಮಾರ್ಗದ ಮೂಲಕ ಶೇ.100ರಷ್ಟು ಉದಾರೀಕರಣಗೊಳಿಸಿತು. 2022 ರೊಳಗೆ 175 ಗಿಗಾ ವ್ಯಾಟ್ ನವೀಕರಿಸಬಹುದಾದ ಶಕ್ತಿ ಸಾಮರ್ಥ್ಯವನ್ನು ಸಾಧಿಸುವ ಉದ್ದೇಶದೊಂದಿಗೆ, ದೇಶದಲ್ಲಿ 100 ಗಿಗಾವ್ಯಾಟ್ ಸೋಲಾರ್ ಇನ್ಸ್ಟಾಲೇಶನ್ ಮತ್ತು 60 ಗಿಗಾವ್ಯಾಟ್ ವಿಂಡ್ ಇನ್ಸ್ಟಾಲೇಶನ್ಗಳನ್ನು ಮಾಡಲಾಗಿದೆ. ಆದರೆ ನವೀಕರಿಸಬಹುದಾದ ಇಂಧನ ಪ್ರಗತಿಯು ಯುಪಿಎ ಸರಕಾರದ 10 ವರ್ಷಗಳ ಅವಧಿಯಲ್ಲಿ ತೀರಾ ಕಡಿಮೆಯಾಗಿತ್ತು. ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ, ಕ್ಷೇತ್ರವು ಮತ್ತೆ ಬೆಳೆಯಲು ಆರಂಭಿಸಿತು. ಆರ್.ಕೆ. ಸಿಂಗ್ ಅವರ ನೇತೃತ್ವದ ನವೀಕರಿಸಬಹುದಾದ ಇಂಧನ ಸಚಿವಾಲಯವು (ಎಂಆರ್ಇ) 2022ರ ವೇಳೆಗೆ ನವೀಕರಿಸಬಹುದಾದ ಇಂಧನ ಉತ್ಪಾದನೆಯ ಗುರಿಯನ್ನು 175 ಗಿಗಾವ್ಯಾಟ್ನಿಂದ 227 ಗಿಗಾವ್ಯಾಟ್ಗೆ ಹೆಚ್ಚಿಸಿದೆ. “175 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೆಚ್ಚಿಸುವ ಗುರಿಯನ್ನು ಪರಿಷ್ಕರಿಸಲಾಗಿಲ್ಲ, ನಾವು ಗುರಿಯನ್ನು ಮೀರಿಸುತ್ತೇವೆ” ಎಂದು ಆರ್. ಕೆ. ಸಿಂಗ್ ಹೇಳಿದ್ದಾರೆ.
ಕಲ್ಲಿದ್ದಲು ವಿದ್ಯುತ್ ಸ್ಥಾವರವನ್ನು ನವೀಕರಿಸಬಹುದಾದ ವಿದ್ಯುತ್ ಗಾಳಿ ಅಥವಾ ಸೌರ ವಿದ್ಯುತ್ಗೆ ಬದಲಾಯಿಸುವುದರಿಂದ ವಿದ್ಯುತ್ ದರ ಕಡಿತವಾಗಿ ವಾರ್ಷಿಕವಾಗಿ 54,000 ಕೋಟಿ ರೂಪಾಯಿಗಳನ್ನು ಉಳಿತಾಯ ಮಾಡಬಹುದಾಗಿದೆ. IBEFNನಿಂದ ಬಂದ ಮಾಹಿತಿಯ ಪ್ರಕಾರ, ಒಟ್ಟು ಸ್ಥಾಪಿತ ಸಾಮರ್ಥ್ಯದ ಹೊಸ ಶಕ್ತಿಯ ಕೊಡುಗೆ ಶೇ8.2ರಷ್ಟು ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಒಟ್ಟು ಸ್ಥಾಪಿತ ಸಾಮರ್ಥ್ಯಕ್ಕೆ ನವೀಕರಿಸಬಹುದಾದ ಶಕ್ತಿಯ ಶೇಕಡಾವಾರು ಕೊಡುಗೆ ಹೆಚ್ಚಾಗಿದೆ. 2013-14ರಲ್ಲಿ ಶೇ 12.92 ರಷ್ಟು ಏರಿಕೆಯಾಗಿದೆ. ಇದು 2018 ರ ಡಿಸೆಂಬರ್ನಿಂದ ಶೇ.21.21ಕ್ಕೆ ಏರಿಕೆಯಾಗಿದೆ ಎಂದು ಐಬಿಇಎಫ್ ತಿಳಿಸಿದೆ. ವಿಭಿನ್ನ ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ 2022 ರ ಹೊಸ ಗುರಿ ಹೀಗಿದೆ.
ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಅತಿದೊಡ್ಡ ಬೆಳವಣಿಗೆಯು ಸೌರ ಶಕ್ತಿಯ ವಲಯದಲ್ಲಿದೆ. ಇದು ಕಳೆದ ನಾಲ್ಕು ವರ್ಷಗಳಲ್ಲಿ ಒಂಬತ್ತು ಪಟ್ಟು ಬೆಳವಣಿಗೆಯನ್ನು ಕಂಡಿದೆ. ಸೌರ ಉದ್ಯಮವು ಚೀನಾದಲ್ಲಿನ ಸುಧಾರಣೆಗಳಿಂದ ಮತ್ತಷ್ಟು ಪ್ರಯೋಜನ ಪಡೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಕಳೆದ ವರ್ಷ ಡೆವಲಪರ್ಗಳಿಗೆ ಸಬ್ಸಿಡಿಗಳನ್ನು ಕಡಿತಗೊಳಿಸಲಿದ್ದೇವೆ ಮತ್ತು ಹೊಸ ಸೌರ ಯೋಜನೆಗಳ ಅನುಮೋದನೆಯನ್ನು ಸ್ಥಗಿತಗೊಳಿಸಲಿದ್ದೇವೆ ಎಂದು ಆ ರಾಷ್ಟ್ರ ಘೋಷಣೆ ಮಾಡಿತ್ತು. ಇದರಿಂದಾಗಿ ಚೀನಾದಲ್ಲಿ ಬೇಡಿಕೆ ಕುಗ್ಗುತ್ತದೆ, ಅದು ಅತಿ ದೊಡ್ಡ ಮಾರುಕಟ್ಟೆಯಾಗಿದ್ದು, ಆ ದೇಶದ ಉತ್ಪಾದಕರು ಪರ್ಯಾಯ ವಿದೇಶಿ ಮಾರುಕಟ್ಟೆಗಳಿಗೆ ಎದುರು ನೋಡಬೇಕಾಗುತ್ತದೆ. ಇದು ಫೋಟೋ-ವೋಲ್ಟಾಯಿಕ್ ಸೆಲ್ಗಳ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಟ್ಟಕ್ಕೆ ತರುತ್ತದೆ.
ಮೋದಿ ಸರ್ಕಾರದಡಿ ಶಕ್ತಿ ವಲಯ ದೊಡ್ಡ ಜಿಗಿತವನ್ನೇ ಕಂಡಿದೆ, ಭಾರತದ ಎಲ್ಲಾ ಗ್ರಾಮಗಳು ವಿದ್ಯುಚ್ಛಕ್ತಿಯನ್ನು ಪಡೆಯುತ್ತಿವೆ ಮತ್ತು ನವೀಕರಿಸಬಹುದಾದ ಇಂಧನ ವಲಯವು 2014-18ರವರೆಗೆ 42 ಶತಕೋಟಿ ಡಾಲರ್ ಹೂಡಿಕೆಯನ್ನು ಆಕರ್ಷಿಸಿದೆ. ಅಂತರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ (ಐಆರ್ಎನ್ಎ) 2017 ರಲ್ಲಿ, ನವೀಕರಿಸಬಹುದಾದ ಇಂಧನ ವಲಯವು 47,000 ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಹೇಳಲಾಗಿದೆ.
2000 ರಿಂದೀಚೆಗೆ ಭಾರತದಲ್ಲಿ ಶಕ್ತಿಯ ಬಳಕೆಯು ದ್ವಿಗುಣವಾಗಿದೆ, ಆದರೆ ತಲಾ ಬಳಕೆಯಲ್ಲಿ ಜಾಗತಿಕ ಸರಾಸರಿಗಿಂತ ಮೂರನೇ ಸ್ಥಾನದಲ್ಲಿದೆ. ಅದರ ಶಕ್ತಿಯ ಬೇಡಿಕೆಯ ಮೂರು-ಭಾಗದಷ್ಟು ಪಳೆಯುಳಿಕೆ ಇಂಧನಗಳಿಂದ ಈಡೇರುತ್ತದೆ. ಆರ್ಥಿಕ ಅಭಿವೃದ್ಧಿಯ ಸೂಚಕಗಳಲ್ಲಿ ಒಂದಾದ್ದರಿಂದ ಶಕ್ತಿಯ ಬಳಕೆಯ ಬೆಳವಣಿಗೆ ಬಹಳ ಮುಖ್ಯವಾಗುತ್ತದೆ. ಬೆಳೆಯುತ್ತಿರುವ ಇಂಧನ ಬೇಡಿಕೆ ಪಳೆಯುಳಿಕೆ ಇಂಧನಗಳ ಮೂಲಕ ಪೂರೈಸಿದರೆ, ಅದು ಪರಿಸರ ಮತ್ತು ಮಾನವ ಆರೋಗ್ಯದ ಮೇಲೆ ಅತ್ಯಂತ ಹಾನಿಕಾರಕ ಪ್ರಭಾವ ಬೀರುತ್ತದೆ. ಆದ್ದರಿಂದ, ನವೀಕರಿಸಬಹುದಾದ ಶಕ್ತಿಯಲ್ಲಿನ ಹೂಡಿಕೆಯು ಆದ್ಯತೆ ಪಡೆಯುವುದು ಬಹಳ ಮುಖ್ಯ ಎನಿಸಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.