ಮ್ಯಾಂಚೆಸ್ಟರ್: ಮ್ಯಾಂಚೆಸ್ಟರ್ ರಸ್ತೆಗಳಲ್ಲಿ ಬಿಜೆಪಿ ಧ್ವಜಗಳನ್ನು ಹಿಡಿದು, ನಮೋ ಅಗೈನ್ ಎಂಬ ಘೋಷಣೆಯುಳ್ಳ ಟಿ-ಶರ್ಟ್ಗಳನ್ನು ಧರಿಸಿ ಎನ್ಆರ್ಐಗಳ ತಂಡವೊಂದು ಫ್ಲ್ಯಾಶ್ ಮಾಬ್ ಮೂಲಕ ಬಿಜೆಪಿಯ ಪರವಾಗಿ ಮತ ಪ್ರಚಾರ ಮಾಡಿ ಎಲ್ಲರ ಗಮನವನ್ನು ಸಲ್ಲಿಸಿದೆ.
ಮಧ್ಯದಲ್ಲಿ ಮೋದಿಯ ವೇಷಧಾರಿಯನ್ನು ನಿಲ್ಲಿಸಿಕೊಂಡು, ಅವರ ಸುತ್ತಲೂ ಎನ್ಆರ್ಐಗಳು ಶಂಕರ್ ಮಹಾದೇವನ್ ಅವರ ಪ್ರಸಿದ್ಧ ‘ಬ್ರೆತ್ಲೆಸ್’ ಹಾಡಿಗೆ ನೃತ್ಯ ಮಾಡಿದ್ದಾರೆ.
ಈ ತಂಡದ ನೃತ್ಯಗಳ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಏ ದೇಶ್ ಜುಕ್ನೆ ನಹೀ ದೇಂಗೆ ‘ ಸೇರಿದಂತೆ ಯುಕೆ ಮತ್ತು ಯುರೋಪಿಯನ್ ದೇಶಗಳಲ್ಲಿ ಮೋದಿ ಪರವಾಗಿ 100ಕ್ಕೂ ಅಧಿಕ ಪ್ರಚಾರ ಅಭಿಯಾನಗಳನ್ನು ನಡೆಸಲಾಗುತ್ತಿದೆ.
ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ಅನಿವಾಸಿ ಭಾರತೀಯರು ಸಾಕಷ್ಟು ಶ್ರಮಪಡುತ್ತಿದ್ದಾರೆ. ಹಲವಾರು ಸಭೆ ಸಮಾರಂಭಗಳನ್ನು ನಡೆಸುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಅಧಿಕ ಪ್ರಮಾಣದಲ್ಲಿ ಭಾರತಕ್ಕೆ ಬಂದು ಇವರು ಮತ ಚಲಾವಣೆ ಮಾಡುವ ನಿರೀಕ್ಷೆ ಇದೆ. 2014ರ ಚುನಾವಣೆಯಲ್ಲೂ ಅತ್ಯಧಿಕ ಪ್ರಮಾಣದ ಅನಿವಾಸಿ ಭಾರತೀಯರು ಬಿಜೆಪಿಗೆ ಬೆಂಬಲ ನೀಡಿದ್ದರು.
Flash dance at an European city by Indians.
This is probably the first election where public is vigorously campaigning for PM @narendramodi to become PM again rather than the politicians and the party itself pic.twitter.com/w7limo1P74— 💂 Rishi Bagree 🇮🇳 (@rishibagree) April 7, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.