ನವದೆಹಲಿ: ಲೋಕಸಭಾ ಚುನಾವಣೆ ಇಂದಿನಿಂದ ಆರಂಭಗೊಂಡಿದೆ. ಭಾರತದ ಪ್ರಜಾಪ್ರಭುತ್ವದ ಅತೀದೊಡ್ಡ ಹಬ್ಬವಾದ ಈ ಚುನಾವಣೆಯನ್ನು ಗೂಗಲ್ ಡೂಡಲ್ ಮೂಲಕ ಸಂಭ್ರಮಿಸಿದೆ.
ಗೂಗಲ್ ಡೂಡಲ್ ಇಂಕ್ ಹಾಕಿದ ಕೈಬೆರಳನ್ನು ತೋರಿಸಿದ್ದು, ಅದನ್ನು ಕ್ಲಿಕ್ ಮಾಡಿದಾಗ ವೋಂಟಿಂಗ್ ಪ್ರಕ್ರಿಯೆಯನ್ನು ವಿವರಿಸುವ ಪೇಜ್ ತೆರೆದುಕೊಳ್ಳುತ್ತದೆ. ಮೊದಲ ಬಾರಿಯ ಮತದಾರರಿಗೆ ಅತ್ಯಂತ ಸಹಾಯಕವಾಗುವ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
ಮತಗಟ್ಟೆಗಳ ಮಾಹಿತಿ, ಅಭ್ಯರ್ಥಿಗಳ ಮಾಹಿತಿ, ಚುನಾವಣಾ ದಿನಾಂಕ ಮತ್ತು ಸಮಯ, ಗುರುತಿನ ಚೀಟಿ, ಮತಯಂತ್ರಗಳ ಬಗೆಗಿನ ಮಾಹಿತಿ ಇದರಲ್ಲಿ ಇದೆ.
ದೇಶದ 543 ಲೋಕಸಭಾ ಕ್ಷೇತ್ರಗಳಿಗೆ 7 ಹಂತದಲ್ಲಿ ಮತದಾನ ನಡೆಯಲಿದೆ. ಎಪ್ರಿಲ್ 11, ಎಪ್ರಿಲ್ 18, ಎಪ್ರಿಲ್ 23, ಎಪ್ರಿಲ್ 29, ಮೇ 6, ಮೇ 12 ಮತ್ತು ಮೇ 19 ರಂದು ಚುನಾವಣೆ ನಡೆಯಲಿದೆ. ಮೇ 23ರಂದು ಫಲಿತಾಂಶ ಹೊರಬೀಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.