ನವದೆಹಲಿ: ಸರಕಾರಿ ಸ್ವಾಮ್ಯದ ಗೋವಾ ಶಿಪ್ಯಾರ್ಡ್ನಲ್ಲಿ 12 ಗಣಿ ಕೌಂಟರ್ಮೆಝರ್ ಹಡಗು (Mine countermeasure vessels) ಗಳನ್ನು ನಿರ್ಮಿಸಲು ಭಾರತೀಯ ನೌಕಾಪಡೆಯು ಜಾಗತಿಕ ಪಾಲುದಾರಿಕೆಗಾಗಿ ಹೊಸ ಹುಡುಕಾಟವನ್ನು ಪ್ರಾರಂಭಿಸಿದೆ ಎಂದು ಸ್ಪುಟ್ನಿಕ್ ಇಂಟರ್ನ್ಯಾಷನಲ್ ವರದಿ ಮಾಡಿದೆ. ದೇಶದ ಬಂದರುಗಳನ್ನು ಧ್ವಂಸ ಮಾಡಲು ಮತ್ತು ಭೀತಿಯನ್ನು ಹರಡಿಸಲು ಶತ್ರು ಪಡೆಗಳು ಇಟ್ಟಿರಬಹುದಾದಂತಹ ಗಣಿಗಳನ್ನು ಪತ್ತೆ ಹಚ್ಚಲು ಮತ್ತು ನಾಶಮಾಡಲು MCMV ಗಳು ಸಹಾಯ ಮಾಡಲಿದ್ದು, ಯಾವುದೇ ನೌಕಾಪಡೆಗೆ ನಿರ್ಣಾಯಕ ಸಾಮರ್ಥ್ಯವನ್ನು ಇದು ತಂದುಕೊಡುತ್ತದೆ.
ಹಿಂದೂ ಮಹಾಸಾಗರದಲ್ಲಿ ಚೀನೀ ಜಲಾಂತರ್ಗಾಮಿಗಳ ಆಕ್ರಮಣಶೀಲ ಮತ್ತು ಹೆಚ್ಚುತ್ತಿರುವ ನಿಯೋಜನೆಯ ಹಿನ್ನೆಲೆಯಲ್ಲಿ ಜಾಗತಿಕ ಪಾಲುದಾರರ ಹುಡುಕಾಟ ಆರಂಭವಾಗಿದೆ. ಭಾರತೀಯ ನೀರಿನಲ್ಲಿನ ಮೈನ್ಫೀಲ್ಡ್ ಗಳಲ್ಲಿ ಈ ಜಲಾಂತರ್ಗಾಮಿಗಳನ್ನು ರಹಸ್ಯವಾಗಿ ನಿಯೋಜನೆ ಮಾಡಬಹುದಾಗಿದೆ.
ಚೀನಾ ನೌಕೆಯು 100ಕ್ಕೂ ಅಧಿಕ ಗಣಿ ಕೌಂಟರ್ಮೆಝರ್ ಹಡಗುಗಳನ್ನು ಹೊಂದಿದೆ, ಆದರೆ ಭಾರತೀಯ ನೌಕಾಸೇನೆಯು 24 ಇಂತಹ ಹಡುಗಗಳನ್ನು 5 ಬಿಲಿಯನ್ ಡಾಲರ್ ವೆಚ್ಚದಲ್ಲಿ ಸೇರ್ಪಡೆಗೊಳಿಸುವತ್ತ ಈಗಷ್ಟೇ ಎದುರು ನೋಡುತ್ತಿದೆ.
ಇಂತಹ 12 ಹಡಗುಗಳನ್ನು ನಿರ್ಮಾಣ ಮಾಡಲು ಭಾರತ ಸರ್ಕಾರ ಮತ್ತು ಗೋವಾ ಶಿಪ್ ಯಾರ್ಡ್, ದಕ್ಷಿಣ ಕೊರಿಯಾದ ಪಾಲುದಾರಿಕೆಗಾಗಿ ಎದುರು ನೋಡುತ್ತಿದೆ. ಆದರೆ ತಂತ್ರಜ್ಞಾನ ವರ್ಗಾವಣೆ ಮತ್ತು ವೆಚ್ಚಗಳ ವಿಷಯದಲ್ಲಿ ಉಭಯ ದೇಶಗಳ ನಡುವೆ ಇನ್ನೂ ಸಹಮತ ಮೂಡಿ ಬಂದಿಲ್ಲ ಎನ್ನಲಾಗಿದೆ.
ಒಂದು ವೇಳೆ ಈ ಒಪ್ಪಂದ ಕಾರ್ಯರೂಪಕ್ಕೆ ಬಂದರೆ, ಉಭಯ ದೇಶಗಳ ನಡುವೆ ಏರ್ಪಟ್ಟ ಅತೀದೊಡ್ಡ ಒಪ್ಪಂದ ಎಂಬ ಹೆಸರನ್ನು ಪಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.