ಜೆರುಸಲೇಂ: ಇಸ್ರೇಲ್ ರಾಷ್ಟ್ರೀಯ ಚುನಾವಣೆಯಲ್ಲಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಜಯಗಳಿಸಿದ್ದಾರೆ. ತನ್ನ ಪ್ರತಿಸ್ಪರ್ಧಿ ಬೆನ್ನಿ ಗ್ಯಾಂಟ್ಜ್ ಅವರೊಂದಿಗೆ ತೀವ್ರ ಹಣಾಹಣಿಯನ್ನು ಎದುರಿಸಿದರೂ ವಿಜಯಶಾಲಿಯಾಗಿ ಹೊರಹೊಮ್ಮಿದರು, ಈ ಮೂಲಕ ಸತತ ಐದನೇಯ ಬಾರಿಗೆ ಪ್ರಧಾನಿಯಾಗಿ ಹೊರಹೊಮ್ಮಿದ್ದಾರೆ ಎಂದು ಅಲ್ಲಿನ ಮೂರು ಟೆಲಿವಿಶನ್ ಚಾನೆಲ್ಗಳು ವರದಿ ಮಾಡಿವೆ.
ಶೇ. 97 ಪ್ರತಿಶತದಷ್ಟು ಮತಗಳ ಎಣಿಕೆಯಾದರೂ, ಯಾವುದೇ ಅಭ್ಯರ್ಥಿಗಳ ಪಕ್ಷಗಳು ಆಡಳಿತ ನಡೆಸಲು ಬೇಕಾದ ಬಹುಮತವನ್ನು ಪಡೆದುಕೊಂಡಿಲ್ಲ. ಆದರೆ ನೇತನ್ಯಾಹು ಅವರು ಬಲಪಂಥೀಯ ಬಣಗಳ ಬೆಂಬಲವನ್ನು ಪಡೆದುಕೊಂಡಿದ್ದು, ಮೈತ್ರಿ ಸರ್ಕಾರ ಪಡೆಯುವ ಬಲಿಷ್ಠ ಆಯ್ಕೆಯನ್ನು ಹೊಂದಿದ್ದಾರೆ.
ಕೆನ್ಸೆಟ್ ವೆಬ್ಸೈಟ್ ಮತ್ತು ಇಸ್ರೇಲಿ ಟಿವಿ ಚಾನೆಲ್ಗಳ ಪ್ರಕಾರ, ಹಿರಿಯ ಬಲಪಂಥೀಯ ನಾಯಕರ ಲಿಕುಡ್ ಪಾರ್ಟಿ ಮತ್ತು ಗ್ಯಾಂಟ್ಜ್ನ ನೂತನ ಸೆಂಟ್ರಿಸ್ಟ್ ಬ್ಲೂ ಮತ್ತು ವೈಟ್ ಪಾರ್ಟಿ 35 ಸ್ಥಾನಗಳನ್ನು ಗೆದ್ದುಕೊಂಡಿವೆ. ಇದರರ್ಥ ಲಿಕುಡ್ ಪಕ್ಷಕ್ಕೆ ಐದು-ಸ್ಥಾನಗಳ ಗಳಿಕೆ.
“ಇದು ಭರ್ಜರಿ ವಿಜಯದ ರಾತ್ರಿ,” ಎಂದು 69 ವರ್ಷದ ನೇತನ್ಯಾಹು ಅವರು ತಮ್ಮ ಪಕ್ಷ ಲಿಕುಡ್ ಕೇಂದ್ರ ಕಚೇರಿಯಲ್ಲಿ ರಾತ್ರಿಯ ವೇಳೆ ನೆರೆದಿದ್ದ ಜನರನ್ನು ಉದ್ದೇಶಿಸಿ ಹೇಳಿದ್ದಾರೆ. ಅಧಿಕೃತ ಫಲಿತಾಂಶಗಳು ಹೊರಬಿದ್ದ ಬಳಿಕವೇ ಸಂಪೂರ್ಣ ಚಿತ್ರಣ ಹೊರಬರಲಿದೆ ಎಂದು ಕೆಲವರು ಅವರಿಗೆ ಎಚ್ಚರಿಸಿದ್ದಾರೆ.
ಶುಕ್ರವಾರ ಅಧಿಕೃತ ಫಲಿತಾಂಶ ಹೊರಬೀಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.