ನವದೆಹಲಿ: ಕಳ್ಳ ಸಾಗಾಣಿಕೆಯ ಸುಮಾರು 100,೦೦೦ ಟನ್ ಮಾಂಸಗಳನ್ನು ಚೀನಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆಶ್ಚರ್ಯವೆಂದರೆ ಈ ಮಾಂಸಗಳು 40 ವರ್ಷ ಹಿಂದಿನದು!
ಅಂದರೆ 1970ರ ದಶಕದ್ದು, ಆಗ ಚೀನಾ ಕಮ್ಯೂನಿಸ್ಟ್ ಪಕ್ಷದ ಸಂಸ್ಥಾಪಕ ಮಾವೋ ಝೆಡಾಂಗ್ ಅವರ ಆಡಳಿತದಲ್ಲಿತ್ತು. ಅಲ್ಲಿಂದ ಇಲ್ಲಿಯವರೆಗೂ ಈ ಮಾಂಸಗಳನ್ನು ಶೈತ್ಯೀಕರಿಸಿ ಇಡಲಾಗಿದೆ. ಇದರ ಬೆಲೆ ಸುಮಾರು ಅರ್ಧ ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಚೀನಾದ ವಿವಿಧೆಡೆ ನಡೆಸಿದ ದಾಳಿಯಲ್ಲಿ ಈ ಮಾಂಸಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ 20 ಮಂದಿಯನ್ನು ಬಂಧನಕ್ಕೂ ಒಳಪಡಿಸಿದ್ದಾರೆ.
ದನ, ಹಂದಿ, ಬಾತುಕೋಳಿ ಮತ್ತು ಕೋಳಿಯ ಮಾಂಸ ಇದಾಗಿದೆ, ನೆರೆಯ ವಿಯೆಟ್ನಾಂ, ಹಾಂಕ್ಕಾಂಗ್ನಿಂದ ಕಳ್ಳ ಸಾಗಾಣಿಕ ಮೂಲಕ ಇದು ಚೀನಾ ಪ್ರವೇಶಿಸಿರಬಹುದು ಎಂದೂ ಅಧಿಕಾರಿಗಳು ಸಂಶಯವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ನಾಯಿ, ನರಿ, ಹುಳು, ಉಪ್ಪಟೆ ತಿನ್ನುವುದರಲ್ಲಿ ಖ್ಯಾತಿ ಪಡೆದ ಚೀನಾ ಇದೀಗ 40 ವರ್ಷ ಹಳೆಯ ಮಾಂಸದಿಂದಲೂ ಭಾರೀ ಸುದ್ದಿ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.