ನವದೆಹಲಿ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮುಖಂಡರುಗಳ ಮನೆ ಮೇಲೆ ನಡೆದ ಐಟಿ ದಾಳಿಯ ಬಗ್ಗೆ ಪ್ರಸ್ತಾಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಭ್ರಷ್ಟಾಚಾರ ಎಂಬುದು ಪ್ರಧಾನ ಪ್ರತಿಪಕ್ಷಗಳ ವ್ಯಕ್ತಿತ್ವವಾಗಿದೆ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಅವರು ‘ಚೌಕಿದಾರ್ ಚೋರ್ ಹೈ’ ಎಂದು ಕಳೆದ ಆರು ತಿಂಗಳುಗಳಿಂದ ಹೇಳುತ್ತಾ ಬರುತ್ತಿದ್ದಾರೆ ಆದರೆ ನೋಟಿನ ಕಂತೆಗಳು ಎಲ್ಲಿ ಪತ್ತೆಯಾಗುತ್ತಿವೆ ಎಂಬುದನ್ನು ನೋಡಿ. ಯಾರು ಚೌಕಿದಾರನಿಗೆ ಹೆದರುತ್ತಿದ್ದಾರೆ? ಅಷ್ಟೊಂದು ಪ್ರಮಾಣದ ಹಣವನ್ನು ವಶಕ್ಕೆ ಪಡೆದುಕೊಳ್ಳುತ್ತಿರುವಾಗ ಚೌಕಿದಾರನನ್ನು ನಿಂದಿಸುವುದು ಸಾಮಾನ್ಯ’ ಎಂದಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿಯವರ ಆಪ್ತರ ನಿವಾಸ ಮತ್ತು ಕಛೇರಿಗಳ ಮೇಲೆ ದಾಳಿ ನಡೆಸಿದ ಐಟಿ ಇಲಾಖೆಯು, 281 ಕೋಟಿ ರೂಪಾಯಿ ಮೊತ್ತದ ದಾಖಲೆ ಇಲ್ಲದ ಹಣವನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಆರು ತಿಂಗಳುಗಳೂ ಆಗಿಲ್ಲ, ಈಗಲೇ ಅವರ ಬಳಿ ಕಂತೆ ಕಂತೆ ನೋಟು ಪತ್ತೆಯಾಗುತ್ತಿವೆ ಎಂದಿದ್ದಾರೆ.
‘ವೋಟಿಗಾಗಿ ನೋಟು ಕೊಡುವುದು ಕಾಂಗ್ರೆಸ್ ಪಕ್ಷದ ರಾಜಕೀಯ ಸಂಸ್ಕೃತಿಯಾಗಿದೆ, ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರವನ್ನು ಅತ್ಯಂತ ನಿಯತ್ತಿನಿಂದ ಮಾಡುವುದು ಇವರ ಹವ್ಯಾಸ ‘ ಎಂದಿದ್ದಾರೆ.
ಪ್ರಧಾನಿ ತಮ್ಮನ್ನು ತಾವು ದೇಶ ಚೌಕಿದಾರ ಎಂದು ಹೇಳುತ್ತಿರುತ್ತಾರೆ, ಇದಕ್ಕೆ ಕಾಂಗ್ರೆಸ್ ಚೌಕಿದಾರ್ ಚೋರ್ ಹೈ ಎಂದು ಟೀಕಿಸಿತ್ತು. ಟೀಕೆಗೆ ಪ್ರತ್ಯಸ್ತ್ರವಾಗಿ ಬಿಜೆಪಿ ‘ಮೇ ಭೀ ಚೌಕಿದಾರ್’ ಎಂಬ ಅಭಿಯಾನವನ್ನೇ ಆರಂಭಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.