ನವದೆಹಲಿ: 2020ರ ಎಪ್ರಿಲ್ ತಿಂಗಳಿನಿಂದ ವಿಮಾನ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಬಾಡಿ ಸ್ಕ್ಯಾನರ್ ಮೂಲಕ ಪರಿಶೀಲನೆಗೆ ಒಳಪಡಲಿದ್ದಾರೆ. ಆವಿಯೇಶನ್ ಸೆಕ್ಯೂರಿಟಿ ರೆಗ್ಯುಲೇಟರ್ ಈಗಾಗಲೇ ಎಲ್ಲಾ ಏರ್ಪೋರ್ಟ್ ಆಪರೇಟರ್ಗಳಿಗೆ, ಮೆಟಲ್ ಡಿಟೆಕ್ಟರ್ ಬದಲು ಅತ್ಯುತ್ತಮ ತಂತ್ರಜ್ಞಾನಗಳನ್ನು ಹೊಂದಿರುವ ಬಾಡಿ ಸ್ಕ್ಯಾನರ್ಗಳನ್ನು ಬಳಸುವಂತೆ ನಿರ್ದೇಶನ ನೀಡಿದೆ.
ಸೋಮವಾರ ನಿರ್ದೇಶನ ಹೊರಡಿಸಲಾಗಿದ್ದು, ಇದರಲ್ಲಿ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯೂರಿಟಿ (BCAS)ಯು ವಿಮಾನ ನಿಲ್ದಾಣ ನಿರ್ವಾಹಕರು ಮತ್ತು ಭದ್ರತಾ ಏಜೆನ್ಸಿಗಳಿಗೆ ಎಲ್ಲಾ ವಿಮಾನ ನಿಲ್ದಾಣಗಳ ಮುಂಭಾಗದಲ್ಲಿರುವ ಭದ್ರತಾ ಚೆಕ್ ಪಾಯಿಂಟ್ಗಳಲ್ಲಿ ಬಾಡಿ ಸ್ಕ್ಯಾನರ್ ಡಿವೈಸ್ ಅನ್ನು ಹಂತ ಹಂತವಾಗಿ ಅಳವಡಿಸುವಂತೆ ತಿಳಿಸಿದೆ. ಬಾಡಿ ಸ್ಕ್ಯಾನರ್ಗಳು ಪ್ರಯಾಣಿಕರು ಹೊತ್ತೊಯ್ಯುವ ವಸ್ತುಗಳನ್ನು ಯಾವುದೇ ದೈಹಿಕ ಮಟ್ಟುವಿಕೆಯ ಅವಶ್ಯಕತೆಯಿಲ್ಲದೇ ಪತ್ತೆ ಹಚ್ಚುತ್ತವೆ.
ಸರಕಾರವು ವಿಮಾನ ಪ್ರಯಾಣಿಕರಿಗೆ ಬಾಡಿ ಸ್ಕ್ಯಾನಿಂಗ್ ಅನ್ನು ನಿರಾಕರಿಸುವ ಆಯ್ಕೆಯನ್ನೂ ನೀಡಲಿದೆ. ಇ ಸಂದರ್ಭದಲ್ಲಿ, ಪ್ರಯಾಣಿಕನು ಸಂಪೂರ್ಣ ಪ್ಯಾಟ್ ಡೌನ್ ಪರಿಶೀಲನೆಗೆ ಒಳಪಡುತ್ತಾನೆ. ಆರೋಗ್ಯದ ಸಮಸ್ಯೆಯನ್ನು ಹೊಂದಿರುವ ವಿಮಾನ ಪ್ರಯಾಣಿಕರು ಬಾಡಿ ಸ್ಕ್ಯಾನರ್ಗಳ ಮೂಲಕ ಭದ್ರತಾ ಸ್ಕ್ರೀನಿಂಗ್ಗೆ ಒಳಪಡುವುದರಿಂದ ವಿನಾಯಿತಿ ಪಡೆದುಕೊಳ್ಳಲಿದ್ದಾರೆ. ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್ (ಡಿಎಫ್ಎಂಡಿಗಳು)ಗಳನ್ನು ಬಳಸಿಕೊಂಡು ಇವರುಗಳನ್ನು ಪರಿಶೀಲನೆಗೊಳಪಡಿಸಲಾಗುತ್ತದೆ.
“ಅತಿ ಸೂಕ್ಷ್ಮ” ಮತ್ತು “ಸೂಕ್ಷ್ಮ” ವಿಮಾನ ನಿಲ್ದಾಣಗಳ ನಿರ್ವಾಹಕರಿಗೆ (ಭದ್ರತಾ ಆಧಾರದ ಮೇಲೆ ವರ್ಗೀಕರಿಸಲಾಗಿದೆ), ಒಂದು ವರ್ಷದೊಳಗೆ ಮೆಟಲ್ ಡಿಟೆಕ್ಟರ್ಗಳನ್ನು ತೆಗೆದು ಹಾಕಿ ಬಾಡಿ ಸ್ಕ್ಯಾನಿಂಗ್ ಅನ್ನು ಅಳವಡಿಸುವಂತೆ ಸೂಚಿಸಲಾಗಿದೆ. ಇತರ ವಿಮಾನ ನಿಲ್ದಾಣಗಳಿಗೆ ಎರಡು ವರ್ಷಗಳ ಗಡುವು ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.