ನವದೆಹಲಿ: ಭಾರತದ ಸೂಪರ್ಸಾನಿಕ್ ಕ್ರೂಸ್ ಮಿಸೈಲ್ ಬ್ರಹ್ಮೋಸ್ನ ರೇಂಜ್ ಶೀಘ್ರದಲ್ಲೇ ವಿಸ್ತರಣೆಗೊಳ್ಳಲಿದೆ. 500 ಕಿಲೋಮೀಟರ್ ದೂರಕ್ಕೆ ಹಿಟ್ ರೇಂಜ್ ಹೊಂದಿರುವಂತೆ ವಿಸ್ತರಣೆ ಮಾಡಲಾಗುತ್ತಿದೆ. ಬ್ರಹ್ಮೋಸ್ ಪ್ರಸ್ತುತ 400 ಕಿಲೋಮೀಟರುಗಳ ಗರಿಷ್ಠ ರೇಂಜ್ ಅನ್ನು ಹೊಂದಿದ್ದು, ಅದರ ವ್ಯಾಪ್ತಿಯನ್ನು ಹೆಚ್ಚಿಸಲು ಈಗಾಗಲೇ ಕೆಲಸ ಆರಂಭವಾಗಿದೆ.
ಬ್ರಹ್ಮೋಸ್ ಏರೋಸ್ಪೇಸ್ ಕಂಪೆನಿಯ ವ್ಯವಸ್ಥಾಪಕ ಸಹ-ನಿರ್ದೇಶಕ ಅಲೆಕ್ಸಾಂಡರ್ ಮ್ಯಾಕ್ಸಿಚೆವ್ ಅವರು ರಷ್ಯಾದ ನ್ಯೂಸ್ ಪೋರ್ಟಲ್ ಸ್ಪುಟ್ನಿಕ್ ನ್ಯೂಸ್. ಕಾಮ್ಗೆ ನೀಡಿರುವ ಮಾಹಿತಿಯ ಪ್ರಕಾರ, ರಷ್ಯಾ ಮತ್ತು ಭಾರತದಿಂದ ಜಂಟಿಯಾಗಿ ನಿರ್ಮಾಣವಾದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳ ರೇಂಜ್ ಅನ್ನು 400 ಕಿಲೋಮೀಟರ್ಗಳಿಂದ 500 ಕಿಲೋಮೀಟರ್ಗೆ ವಿಸ್ತರಣೆಗೊಳಿಸಲಾಗುತ್ತಿದೆ. ವಿಸ್ತರಣೆಗೊಂಡ ರೇಂಜ್ ಮೂಲಕ ಹೈಪರ್ಸೌಂಡ್ಗೆ ಬರಲಿದ್ದೇವೆ. ವೇಗವನ್ನು ವೃದ್ಧಿಸುವ ನಿಟ್ಟಿನಲ್ಲಿ ರೇಂಜ್ ಅನ್ನು ಕೂಡ ವಿಸ್ತರಣೆ ಮಾಡಲಾಗುತ್ತಿದೆ. ಈಗ ಕ್ಷಿಪಣಿ ವೇಗವು 2.8 ಮ್ಯಾಕ್ ಇದೆ, ಆಧುನೀಕರಣದ ಮೂಲಕ ನಾವು 4.5 ಮ್ಯಾಕ್ಗಿಂತಲೂ ಹೆಚ್ಚಿನ ವೇಗವನ್ನು ಪಡೆಯಲಿದ್ದೇವೆ’ ಎಂದಿದ್ದಾರೆ.
ಭಾರತೀಯ ಸೇನೆ, ಭಾರತೀಯ ವಾಯುಸೇನೆ ಮತ್ತು ಭಾರತೀಯ ನೌಕಾಪಡೆಯು ಬ್ರಹ್ಮೋಸ್ಗಳನ್ನು ಹೊಂದಿವೆ, ಪ್ರಸ್ತುತ ಇದರ ವ್ಯಾಪ್ತಿಯು ಶತ್ರು ಪ್ರದೇಶದೊಳಗೆ ಆಳವಾದ ಗುರಿಗಳನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿದೆ.
ಹೊಸ ಮತ್ತು ಲಘು ವರ್ಶನ್ ಮಿಸೈಲ್ ಅನ್ನು ಬ್ರಹ್ಮೋಸ್ ಎನ್ ಜಿ(ನೆಕ್ಸ್ಟ್ ಜನರೇಶನ್) ಎಂದು ಕರೆಯಲಾಗುತ್ತದೆ. ಮುಂದಿನ ಎರಡು ಮೂರು ವರ್ಷಗಳಲ್ಲಿ ಇದು ಪ್ರಾಯೋಗಿಕ ಪರೀಕ್ಷೆಗೆ ಒಳಪಡಲಿದೆ, ನಾಲ್ಕು ವರ್ಷದೊಳಗೆ ಇದು ಸಕ್ರಿಯ ಸೇವೆಯನ್ನು ಆರಂಭಿಸುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.