ನವದೆಹಲಿ: ಇತ್ತೀಚೆಗೆ ಬಿಡುಗಡೆಗೊಳಿಸಿದ ಪ್ರಣಾಳಿಕೆಯಲ್ಲಿ, 2024 ರೊಳಗೆ ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಒಂದು ವೈದ್ಯಕೀಯ ಕಾಲೇಜು ಅಥವಾ PG ಕಾಲೇಜು ತೆರೆಯುವ ಮೂಲಕ ಆರೋಗ್ಯ ಸೇವೆ ಲಭ್ಯತೆಯನ್ನು ವಿಸ್ತರಿಸುವ ಬಗ್ಗೆ ಬಿಜೆಪಿ ಭರವಸೆ ನೀಡಿದೆ.
“ನಮ್ಮ ಯೋಜನೆಗಳ ಮೂಲಕ, ಪ್ರತಿ ಮೂರು ಸಂಸದೀಯ ಕ್ಷೇತ್ರಗಳಿಗೆ ಒಂದು ವೈದ್ಯಕೀಯ ಕಾಲೇಜನ್ನು ಖಾತ್ರಿಪಡಿಸುವ ಹಂತವನ್ನು ನಾವು ಯಶಸ್ವಿಯಾಗಿ ತಲುಪಿದ್ದೇವೆ. 2024 ರ ಹೊತ್ತಿಗೆ ನಾವು ಸಾರ್ವಜನಿಕ ಅಥವಾ ಖಾಸಗಿ ಪಾಲ್ಗೊಳ್ಳುವಿಕೆಯ ಮೂಲಕ ಪ್ರತಿ ಜಿಲ್ಲೆಯಲ್ಲಿ ತಲಾ ಒಂದು ವೈದ್ಯಕೀಯ ಕಾಲೇಜು ಅಥವಾ ಪೋಸ್ಟ್ ಗ್ರಾಜ್ಯುಯೇಟ್ ಮೆಡಿಕಲ್ ಕಾಲೇಜ್ ಅನ್ನು ಸ್ಥಾಪಿಸುತ್ತೇವೆ. ಯೋಜನೆಯ ಅನುಷ್ಠಾನ ಆರಂಭವಾದಂತೆ, 2022 ರೊಳಗೆ 75 ವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು” ಎಂದು ಪ್ರಣಾಳಿಕೆಯಲ್ಲಿ ಬಿಜೆಪಿ ಹೇಳಿದೆ.
ನಾವು ಇದುವರೆಗೆ ದೇಶದಲ್ಲಿ 17,150 ಹೆಲ್ತ್ ಅಂಡ್ ವೆಲ್ನೆಸ್ ಸೆಂಟರ್ (HWC)ಗಳನ್ನು ಸ್ಥಾಪನೆ ಮಾಡಿದ್ದೇವೆ, 2022 ರ ವೇಳೆಗೆ 1,50,000 HWC ಗಳನ್ನು ಸ್ಥಾಪನೆ ಮಾಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತೇವೆ ಎಂದು ಬಿಜೆಪಿ ಹೇಳಿದೆ.
“ಈ HWC ಗಳಲ್ಲಿ ಟೆಲಿಮೆಡಿಸಿನ್ ಮತ್ತು ಡಯಾಗ್ನೋಸ್ಟಿಕ್ ಲ್ಯಾಬೊರೇಟರಿ ಸೌಲಭ್ಯಗಳನ್ನು 2022 ರ ಹೊತ್ತಿಗೆ ಒದಗಿಸಲಾಗುವುದು, ಈ ಮೂಲಕ ಬಡವರಿಗೆ ಗುಣಮಟ್ಟದ ಪ್ರಾಥಮಿಕ ವೈದ್ಯಕೀಯ ಸೇವೆಯನ್ನು ಖಾತ್ರಿಪಡಿಸಿಕೊಳ್ಳಲಾಗುವುದು” ಎಂದು ಪ್ರಣಾಳಿಕೆ ಹೇಳಿದೆ.
ಕೇವಲ ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರಕಾರವು MBBS ಸೀಟುಗಳ ಸಂಖ್ಯೆಯನ್ನು 18,000ಗಳಷ್ಟು ಹೆಚ್ಚಳ ಮಾಡಿದೆ ಮತ್ತು ಸ್ನಾತಕೋತ್ತರ ಮೆಡಿಕಲ್ ಸೀಟುಗಳನ್ನು 12,000ಗಳಷ್ಟು ಏರಿಕೆ ಮಾಡಿದೆ. ಒಂದು ವೇಳೆ ಪಕ್ಷವು ಮರು ಆಯ್ಕೆಗೊಂಡರೆ ದೇಶದಲ್ಲಿ MBBS ಮತ್ತು ವಿಶೇಷ ತಜ್ಞ ವೈದ್ಯರ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತದೆ. 1947 ರಿಂದ 2014 ರ ವರೆಗಿನ ಕೆಲಸಕ್ಕೆ ಹೋಲಿಸಿದರೆ 2024 ರ ಹೊತ್ತಿಗೆ ದುಪ್ಪಟ್ಟು ಕಾರ್ಯ ನಡೆಯಲಿದೆ’ ಎಂದು ಹೇಳಿದೆ.
2022 ರ ಹೊತ್ತಿಗೆ ಎಲ್ಲ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಿಗೆ ಸಂಪೂರ್ಣ ರೋಗನಿರೋಧಕ ಕವರೇಜ್ ನೀಡಲಾಗುತ್ತದೆ ಎಂದು ಬಿಜೆಪಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.