ನವದೆಹಲಿ: ಪ್ರಜಾಪ್ರಭುತ್ವದ ಅತೀದೊಡ್ಡ ಹಬ್ಬ ಲೋಕಸಭಾ ಚುನಾವಣೆ ಆರಂಭವಾಗಲು ಇನ್ನು ಎರಡೇ ದಿನಗಳು ಬಾಕಿ ಇವೆ. ಈಗಾಗಲೇ ಹಲವಾರು ಚುನಾವಣಾ ಪೂರ್ವ ಸಮೀಕ್ಷೆಗಳು ಹೊರಬಿದ್ದಿದ್ದು, ಎಲ್ಲವೂ ಹೆಚ್ಚೂ ಕಮ್ಮಿ ನರೇಂದ್ರ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಸೂಚನೆಯನ್ನು ನೀಡಿವೆ. ಇದೀಗ ಟೈಮ್ಸ್ ನೌ ಮತ್ತು ವಿಎಂಆರ್ ಸಮೀಕ್ಷೆ ಕೂಡ ಎನ್ಡಿಎ 279 ಸ್ಥಾನಗಳನ್ನು ಪಡೆದುಕೊಂಡು ಸರ್ಕಾರ ರಚನೆ ಮಾಡಲಿದೆ ಎಂಬುದಾಗಿ ತಿಳಿಸಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ 149 ಸ್ಥಾನಗಳನ್ನು ಪಡೆದುಕೊಂಡು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. ಕಳೆದ ಬಾರಿಗಿಂತ ಇವುಗಳು 89 ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳಲಿವೆ. ಯುಪಿಎ ಜೊತೆ ಸ್ನೇಹ ಹೊಂದಿದ್ದರೂ ತಟಸ್ಥವಾಗಿ ಉಳಿದುಕೊಂಡಿರುವ ಪಕ್ಷಗಳು 115 ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಎನ್ಡಿಎಗೆ ಶೇ.40.8ರಷ್ಟು ಮತ ಹಂಚಿಕೆ ಸಿಗಲಿದೆ, ಯುಪಿಎಗೆ ಶೇ.30.7 ರಷ್ಟುಮತ್ತು ಇತರ ಪಕ್ಷಗಳಿಗೆ ಶೇ.28.5ರಷ್ಟು ಮತ ಹಂಚಿಕೆಯಾಗಲಿದೆ.
ಮಹಾಘಟಬಂಧನವಿದ್ದರೂ ಎನ್ಡಿಎಗೆ ಅದರಿಂದ ದೊಡ್ಡ ಮಟ್ಟದಲ್ಲಿ ಹಾನಿಯಾಗುವುದಿಲ್ಲ ಎಂದು ಹೇಳಿದೆ. ಉತ್ತರಪ್ರದೇಶದಲ್ಲೂ ಬಿಜೆಪಿ 50 ಸ್ಥಾನಗಳನ್ನು ಗೆಲ್ಲುವುದು ಬಹುತೇಕ ಖಚಿತವಾಗಿದೆ, ಮಹಾರಾಷ್ಟ್ರದಲ್ಲೂ ಬಿಜೆಪಿ-ಶಿವಸೇನಾ ಮೈತ್ರಿ 38 ಸ್ಥಾನಗಳನ್ನು ಜಯಿಸುವ ನಿರೀಕ್ಷೆ ಇದೆ.
ಪಶ್ಚಿಮಬಂಗಾಳದಲ್ಲಿ 9 ಸ್ಥಾನಗಳು ಬಿಜೆಪಿಗೆ ಸಕಾರಾತ್ಮಕವಾಗಿದೆ ಎಂದು ಸಮೀಕ್ಷೆ ಹೇಳಿದೆ. ಇಲ್ಲಿ ಅದರ ಮತ ಹಂಚಿಕೆ ಶೇ.14.5ರಷ್ಟು ಏರಿಕೆಯಾಗಲಿದೆ ಎಂದಿದೆ.
ಕಳೆದ ಮಾರ್ಚ್ 22 ರಿಂದ ಏಪ್ರಿಲ್ 4ರವರೆಗೂ ಸಮೀಕ್ಷೆ ನಡೆಸಲಾಗಿದ್ದು, ದೇಶಾದ್ಯಂತ 960 ಪ್ರದೇಶಗಳಲ್ಲಿ 14,301 ಜನರಿಂದ ಅಭಿಪ್ರಾಯವನ್ನು ಸಂಗ್ರಹಣೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.