ನವದೆಹಲಿ: 2018ರ ಎಪ್ರಿಲ್ ತಿಂಗಳಿನಿಂದ 2019ರ ಮಾರ್ಚ್ ನಡುವೆ ಭಾರತದ ಆಟೋಮೊಬೈಲ್ ಇಂಡಸ್ಟ್ರಿಯು 3.09 ಕೋಟಿ ವಾಹನಗಳನ್ನು ಉತ್ಪಾದನೆ ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 2.9 ಕೋಟಿ ವಾಹನಗಳನ್ನು ತಯಾರಿಸಿತ್ತು, ಈ ವರ್ಷ ಶೇ.6.26 ರಷ್ಟು ಬೆಳವಣಿಗೆಯನ್ನು ಕಾಣಲಾಗಿದೆ ಎಂದು ಎಂದು ಇಂಡಿಯನ್ ಅಟೊಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ಸೋಮವಾರ ತಿಳಿಸಿದೆ.
ಪ್ರಯಾಣಿಕ ವಾಹನಗಳ ಮಾರಾಟ ಶೇ. 2.7 ರಷ್ಟು ಏರಿಕೆಯಾಗಿದೆ. ಪ್ರಯಾಣಿಕ ಕಾರುಗಳು, ಯುಟಿಲಿಟಿ ವಾಹನಗಳು ಮತ್ತು ವ್ಯಾನ್ಗಳು ಶೇ.2.05 , ಶೇ.2.08 ಮತ್ತು ಶೇ. 13.1ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.
ಕಳೆದ ವರ್ಷದ ಇದೇ ಅವಧಿಯಲ್ಲಿ ಹೋಲಿಸಿದರೆ, ಒಟ್ಟಾರೆ ವಾಣಿಜ್ಯ ವಾಹನಗಳ ವಿಭಾಗವು 2018ರ ಎಪ್ರಿಲ್ನಿಂದ 2019ರ ಮಾರ್ಚ್ವರೆಗೆ ಶೇ. 17.55 ರಷ್ಟು ಏರಿಕೆ ಕಂಡಿದೆ. ಸಾಧಾರಣ ಮತ್ತು ಭಾರಿ ವಾಣಿಜ್ಯ ವಾಹನಗಳು ಶೇ.14.66ರಷ್ಟು ಏರಿಕೆಯಾಗಿದೆ ಮತ್ತು ಕಡಿಮೆ ವಾಣಿಜ್ಯ ವಾಹನಗಳು ಶೇ.19.46 ರಷ್ಟು ಹೆಚ್ಚಾಗಿದೆ. ತ್ರಿಚಕ್ರ ವಾಹನಗಳ ಮಾರಾಟ ಶೇ 10.27 ರಷ್ಟು ಏರಿಕೆಯಾಗಿದೆ. ಪ್ರಯಾಣಿಕ ಕಾರುಗಳ ಮಾರಾಟ ಶೇ.10.62 ಮತ್ತು ಸರಕು ಸಾಗಣೆದಾರ ವಾಹನ ಶೇ.8.75 ರಷ್ಟು ಹೆಚ್ಚಾಗಿದೆ.
ದ್ವಿಚಕ್ರ ವಾಹನಗಳ ಮಾರಾಟ ಶೇ.4.86ರಷ್ಟು ಏರಿಕೆಯಾಗಿದೆ. ಸ್ಕೂಟರ್ ಶೇ. 0.27 ರಷ್ಟು ಕುಸಿತವಾಗಿದೆ. ಮೋಟರ್ ಮತ್ತು ಮೊಪೆಡ್ಗಳು ಶೇ.7.76ರಷ್ಟು ಮತ್ತು ಶೇ.2.41ರಷ್ಟು ಏರಿಕೆಯಾಗಿದೆ. ಒಟ್ಟಾರೆ ವಾಹನ ರಫ್ತು ಶೇ.14.5 ರಷ್ಟು ಏರಿಕೆಯಾಗಿದೆ. ಪ್ರಯಾಣಿಕ ವಾಹನಗಳ ರಫ್ತು ಶೇ. 9.64 ರಷ್ಟು ಕುಸಿತ ಕಂಡಿದೆ. ವಾಣಿಜ್ಯ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ದ್ವಿಚಕ್ರ ವಾಹನಗಳು ಶೇ.3.17, ಶೇ.49 ಮತ್ತು ಶೇ.16.55 ರಷ್ಟು ಏರಿಕೆಯನ್ನು ದಾಖಲಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.