ನವದೆಹಲಿ: ಭಾರತ ಮೊದಲ ಬಾರಿಗೆ ದೇಶೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಧನುಷ್ ಆರ್ಟಿಲರಿ ಬಂದೂಕು ವ್ಯವಸ್ಥೆಯನ್ನು ಜಬಲ್ಪುರದಲ್ಲಿ ಭಾರತೀಯ ಸೇನೆಗೆ ಹಸ್ತಾಂತರಿಸಲಾಯಿತು. ಧನುಷ್ ಅನ್ನು ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ಬಳಸಬಹುದು ಮತ್ತು ಇದು ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿಯಲ್ಲಿ ಉತ್ಪಾದನೆಗೊಂಡ ಮೊದಲ ಸುದೀರ್ಘ-ಶ್ರೇಣಿಯ ಫಿರಂಗಿ ಗನ್ ಆಗಿದೆ ಎಂದು ರಕ್ಷಣಾ ಇಲಾಖೆಯು ಪ್ರಕಟನೆಯಲ್ಲಿ ತಿಳಿಸಿದೆ.
‘ದೇಶಿ ಬೊಫೋರ್ಸ್’ ಎಂದೂ ಕರೆಯಲಾಗುವ ಧನುಷ್, ಆಮದುಗೊಂಡಿರುವ ಬೊಫೋರ್ಸ್ ಗನ್ಗಳಿಗಿಂತಲೂ 11 ಕಿ.ಮೀ ಹೆಚ್ಚು ದೂರದವರೆಗೆ ಹಿಟ್ಟಿಂಗ್ ರೇಂಜ್ ಅನ್ನು ಹೊಂದಿದೆ.
ಧನುಷ್ 155 ಎಂಎಂ / 45 ಕ್ಯಾಲಿಬರ್ ಟೋಡ್ ಗನ್ ಸಿಸ್ಟಮ್ ಅನ್ನು ಶೀಘ್ರದಲ್ಲೇ ಆರ್ಡಿನಾನ್ಸ್ ಫ್ಯಾಕ್ಟರಿಸ್ ಬೋರ್ಡ್ ಸೇನೆಗೆ ಸೇರ್ಪಡೆಗೊಳಿಸಲಿದೆ ಎಂದು ಭಾರತೀಯ ಸೇನೆಯ ಪಬ್ಲಿಕ್ ಇನ್ಫಾರ್ಮೇಶನ್ನ ಹೆಚ್ಚುವರಿ ಡೈರೆಕ್ಟರೇಟ್ ಜನರಲ್ ಇತ್ತೀಚಿಗೆ ಟ್ವಿಟ್ ಮೂಲಕ ತಿಳಿಸಿದ್ದರು.
ಧನುಷ್ ಬಂದೂಕು ವ್ಯವಸ್ಥೆಯು ಬೋಫೋರ್ಸ್ ಹೊವಿಟ್ಜರ್ನ ವಿನ್ಯಾಸಗಳನ್ನು ಆಧರಿಸಿದೆ, ಬೊಫೋರ್ಸ್ ಅನ್ನು 1980ರ ದಶಕದಲ್ಲಿ ಸೇನೆಗೆ ಸೇರ್ಪಡೆ ಮಾಡಲಾಯಿತು. K-9 ವಜ್ರ ಮತ್ತು M-777 ಅಲ್ಟ್ರಾ-ಲೈಟ್ ಹೊವಿಟ್ಜರ್ಗಳ ನಂತರ, ಧನುಷ್ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳುತ್ತಿರುವ ಮೂರನೆಯ ವಿಧದ ಆರ್ಟಿಲರಿ ಗನ್ ಆಗಿದೆ.
“ಈ ಗನ್ ಇನರ್ಶಿಯಲ್ ನಾವಿಗೇಶನ್-ಆಧರಿತ ದೃಶ್ಯೀಕರಣ ವ್ಯವಸ್ಥೆ, ಸ್ವಯಂ-ಹಾಕುವಿಕೆಯ ಸೌಲಭ್ಯ, ಆನ್-ಬೋರ್ಡ್ ಬ್ಯಾಲಿಸ್ಟಿಕ್ ಕಂಪ್ಯೂಟಿಂಗ್ ಮತ್ತು ಸುಧಾರಿತ ಡೇ ಆಂಡ್ ನೈಟ್ ಡೈರೆಕ್ಟ್ ಫೈರಿಂಗ್ ಸಿಸ್ಟಮ್ ವ್ಯವಸ್ಥೆಯನ್ನು ಒಳಗೊಂಡಿದೆ. ಇದರ ಸ್ವಯಂ-ಪ್ರೊಪಲ್ಷನ್ ಘಟಕವು ಗನ್ ಅನ್ನು ಪರ್ವತ ಭೂಪ್ರದೇಶಗಳಲ್ಲೂ ನಿಯೋಜಿಸಲು ಅನುಮತಿಸುತ್ತದೆ ಎಂದು ಸಚಿವಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.