ನವದೆಹಲಿ: ಅಮೇಥಿಯಲ್ಲಿ ನಿರ್ಮಾಣವಾದ AK-203 ಅಸಾಲ್ಟ್ ರೈಫಲ್ಸ್ಗಳು ಭಾರತೀಯ ಸೈನ್ಯದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಿಗೆ ಹೆಚ್ಚಿನ ಉತ್ತೇಜನವನ್ನು ನೀಡಲು ಸಜ್ಜಾಗಿವೆ. ಯಾಕೆಂದರೆ, AK-203 ರೈಫಲ್ಗಳ ಆಧುನೀಕರಿಸಿದ ಆವೃತ್ತಿಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿನ ಕಾರ್ಯಾಚರಣೆಗಳಲ್ಲಿ ಕಾರ್ಬೈನ್ ಪಾತ್ರಗಳಲ್ಲಿ ಬಳಸಲು ಸೇನೆ ಯೋಜನೆ ರೂಪಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಕಾರ್ಬೈನ್ ಪಾತ್ರದಲ್ಲಿ, ರೈಫಲ್ಗಳ ಬಟ್ಗಳನ್ನು ತೆಗೆದುಹಾಕಲಾಗುತ್ತದೆ, ಹೀಗಾಗಿ ರೈಫಲ್ನ ಗಾತ್ರ ಕಡಿಮೆಯಾಗುತ್ತದೆ ಮತ್ತು ತೂಕವೂ ಕಡಿಮೆಯಾಗುತ್ತದೆ, ಹೀಗಾಗಿ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳ ಸಂದರ್ಭಗಳಲ್ಲಿ ಇದನ್ನು ಅತ್ಯಂತ ಸುಲಭವಾಗಿ ಸಾಗಿಸಬಹುದು ಮತ್ತು ಬಳಸಿಕೊಳ್ಳಬಹುದು.
93,000 ಕಾರ್ಬೈನ್ಗಳನ್ನು ಫಾಸ್ಟ್ ಟ್ರ್ಯಾಕ್ ಪ್ರಕ್ರಿಯೆಯಡಿ ಖರೀದಿ ಮಾಡಲು ಪ್ರತ್ಯೇಕ ಟೆಂಡರ್ ಅನ್ನು ಕರೆಯಲಾಗಿದೆ ಮತ್ತು ಹಿರಿಯ ಲೆಫ್ಟಿನೆಂಟ್ ಜನರಲ್ ರ್ಯಾಂಕ್ ಅಧಿಕಾರಿಗಳನ್ನು, ರಕ್ಷಣಾ ಸಚಿವಾಲಯ ಮತ್ತು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ನ ಇತರ ಸದಸ್ಯರನ್ನು ಸಮಿತಿಯ ಸದಸ್ಯರಾಗಿ ನೇಮಕ ಮಾಡಲಾಗಿದೆ.
ಕಾರ್ಬೈನ್ಸ್ಗಳು, ಸಮೀಪದ ಮುಖಾಮುಖಿ ಯುದ್ಧದಲ್ಲಿ ಹೆಚ್ಚು ಉಪಯುಕ್ತವಾಗಿವೆ ಮತ್ತು ಕೊಠಡಿಯೊಳಗೆ ನುಗ್ಗುವಿಕೆಯಂತಹ ಕಾರ್ಯಾಚರಣೆಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ ಎಂದು ಸೇನೆಯ ಉನ್ನತ ಮೂಲಗಳು ತಿಳಿಸಿವೆ.
ಈ ರೈಫಲ್ಸ್ ಅಮೇಥಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಫೆಸಿಲಿಟಿಯಲ್ಲಿ ಉತ್ಪಾದನೆಗೊಳ್ಳಲಿವೆ. ಈ ಫೆಸಿಲಿಟಿಯನ್ನು ಆರ್ಡೆನ್ಸ್ ಫ್ಯಾಕ್ಟರಿ ಬೋರ್ಡ್ ಮತ್ತು ರಷ್ಯಾದ ಕಲಶ್ನಿಕೋವ್ ಜಂಟಿಯಾಗಿ ಮುನ್ನಡೆಸುತ್ತಿದೆ. 2019ರ ಮಾರ್ಚ್ 3ರಂದು ಪ್ರಧಾನಿ ನರೇಂದ್ರ ಮೋದಿ ಇದನ್ನು ಲೋಕಾರ್ಪಣೆಗೊಳಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.