‘ಅಪನಗದೀಕರಣವು ತೆರಿಗೆ ಮೂಲವನ್ನು ವಿಸ್ತರಿಸುವಲ್ಲಿ ಮತ್ತು ನೇರ ತೆರಿಗೆ ಸಂಗ್ರಹದಲ್ಲಿ ಅತ್ಯದ್ಭುತವಾದ ರೀತಿಯ ಸಕಾರಾತ್ಮಕ ಪ್ರಭಾವವನ್ನು ಬೀರಿದೆ’ ಎಂದು ಸಿಬಿಡಿಟಿ ಹೇಳಿದೆ.
‘ಹಣಕಾಸು ವರ್ಷ 2017-18ರಲ್ಲಿ 6.87 ಕೋಟಿ ತೆರಿಗೆ ಪಾವತಿಯನ್ನು ಸಲ್ಲಿಕೆ ಮಾಡಲಾಗಿದೆ, 2016-17ರ ಸಾಲಿನಲ್ಲಿ ಈ ಸಂಖ್ಯೆ 5.48 ಇತ್ತು, ಅಂದರೆ ತೆರಿಗೆ ಸಲ್ಲಿಕೆ ಪ್ರಮಾಣ ಶೇ.25ರಷ್ಟು ಹೆಚ್ಚಾಗಿದೆ. ಅಲ್ಲದೇ, 2017-18ರ ಸಾಲಿನಲ್ಲಿ, 1.07 ಕೋಟಿ ಹೊಸ ತೆರಿಗೆ ಪಾವತಿ ಸಲ್ಲಿಕೆಯಾಗಿದೆ, ಈ ಸಂಖ್ಯೆ 2016-17ರಲ್ಲಿ 86.16 ಲಕ್ಷ ಇತ್ತು’ ಎಂದು ಹೇಳಿದೆ.
ಕೈಬಿಟ್ಟ ತೆರಿಗೆ ಪಾವತಿದಾರರು, ಅಂದರೆ ಈ ಹಿಂದೆ ತೆರಿಗೆ ಪಾವತಿಸುತ್ತಿದ್ದವರು ಮತ್ತು ಕಳೆದ ಮೂರು ಹಣಕಾಸು ವರ್ಷದಲ್ಲಿ ತೆರಿಗೆಯನ್ನು ಸಲ್ಲಿಸದೇ ಇದ್ದವರ ಸಂಖ್ಯೆ 2017-18ರ ಸಾಲಿನಲ್ಲಿ ಇವರ ಸಂಖ್ಯೆ 25.22 ಲಕ್ಷಕ್ಕೆ ಇಳಿಕೆಯಾಗಿದೆ.
‘2017-18ರ ಸಾಲಿನಲ್ಲಿ ತಲಾ ನೇರ ತೆರಿಗೆ ಸಂಗ್ರಹವು ರೂ.10.03 ಲಕ್ಷ ಕೋಟಿಯಾಗಿದೆ, ಇದು 2016-17ರ ಸಾಲಿಗಿಂತ ಶೇ.18ರಷ್ಟು ಹೆಚ್ಚು’ ಎಂದು ಸಿಬಿಡಿಟಿ ಹೇಳಿದೆ.
2017-18ರ ಶೇ.18ರಷ್ಟು ಬೆಳವಣಿಗೆಯ ಪ್ರಮಾಣವು, 7 ಹಣಕಾಸು ವರ್ಷಗಳಲ್ಲೇ ಅತೀ ಹೆಚ್ಚು ಆಗಿದೆ. ಅಪನಗದೀಕರಣವು ಬೆಳವಣಿಗೆಯಲ್ಲಿ ಅತೀ ಮುಖ್ಯ ಪಾತ್ರವನ್ನು ವಹಿಸಿದೆ. 2016ರ ನವೆಂಬರ್ ತಿಂಗಳಲ್ಲಿ ನರೇಂದ್ರ ಮೋದಿ ಸರ್ಕಾರವು 500 ರೂಪಾಯಿ ಮತ್ತು 1 ಸಾವಿರ ರೂಪಾಯಿಗಳ ಅಪನಗದೀಕರಣವನ್ನು ಏಕಾಏಕಿ ಜಾರಿಗೊಳಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.