ಲೋಹಿತ್ಪುರ: ಅರುಣಾಚಲ ಪ್ರದೇಶದಲ್ಲಿ ಶುಕ್ರವಾರ ಇಂಡೋ-ಟಿಬೆಟಿಯನ್ ಬಾರ್ಡರ್ ಫೋರ್ಸ್ ಯೋಧರು ಮತದಾನ ಮಾಡಿದ್ದಾರೆ. ಈ ಮೂಲಕ 2019ರ ಲೋಕಸಭಾ ಚುನಾವಣೆಗೆ ಮತ ಚಲಾಯಿಸಿದ ಮೊದಲಿಗರಾಗಿ ಹೊರಹೊಮ್ಮಿದ್ದಾರೆ. ಸರ್ವಿಸ್ ಪೋಟರ್ಸ್ ಆಗಿ ಇವರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಬೆಳಿಗ್ಗೆ 10 ಗಂಟೆಯಿಂದ ಗುಪ್ತ ಪೋಸ್ಟಲ್ ಬ್ಯಾಲೆಟ್ ಮೂಲಕ ಲೋಹಿತ್ ಪುರದ ಐಟಿಬಿಪಿಯ ಅನಿಮಲ್ ಟ್ರೈನಿಂಗ್ ಸ್ಕೂಲ್ನಲ್ಲಿ ಸರ್ವಿಸ್ ವೋಟಿಂಗ್ ಆರಂಭಗೊಂಡಿತ್ತು. ಮೊದಲ ಮತವನ್ನು ಡಿಐಜಿ ಸುಧಾಕರ್ ನಟರಾಜನ್ ಅವರು ಚಲಾಯಿಸಿದರು.
ಈ ಸ್ಕೂಲ್ನಲ್ಲಿ ಮಾತ್ರವಲ್ಲದೇ, ಅರುಣಾಚಲದ ಇತರ ಭಾಗದಲ್ಲಿ ನಿಯೋಜನೆಗೊಂಡಿರುವ ಯೋಧರೂ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಿದರು, ಸುಮಾರು 5 ಸಾವಿರ ಯೋಧರು ಮತ ಚಲಾಯಿಸಿದ್ದಾರೆ. ಇದರಲ್ಲಿ ಸುಮಾರು 1 ಸಾವಿರ ಮಂದಿ ಇಂಟೋ ಟಿಬೆಟಿಯನ್ ಬಾರ್ಡರ್ ಪೋರ್ಸ್ ಯೋಧರಾಗಿದ್ದಾರೆ.
ಬ್ಯಾಲೆಟ್ ಪೇಪರ್ಗಳನ್ನು ಉತ್ತರಾಖಂಡ, ಗುಜರಾತ್, ಬೆಂಗಳೂರು, ಬಿಹಾರ, ರಾಜಸ್ಥಾನ, ಹರಿಯಾಣ, ಉತ್ತರಪ್ರದೇಶ ಮತ್ತು ಇತರ ಪ್ರದೇಶಗಳಿಗೆ ಸರ್ವಿಸ್ ಪೋಟರ್ಸ್ಗಳ ಮತದಾನಕ್ಕಾಗಿ ಈಗಾಗಲೇ ಕಳುಹಿಸಿಕೊಡಲಾಗಿದೆ.
ಹೆಚ್ಚು ಸರ್ವಿಸ್ ವೋಟರ್ಸ್ಗಳನ್ನು ಮತದಾನ ಪ್ರಕ್ರಿಯೆಗೊಳಪಡಿಸಲು ಚುನಾವಣಾ ಆಯೋಗವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಎಲೆಕ್ಟ್ರಾನಿಕ್, ಸೋಶಿಯಲ್, ಪ್ರಿಂಟ್ ಮತ್ತು ಇತರ ಮಾಧ್ಯಮಗಳ ಮೂಲಕ ಈ ಬಗ್ಗೆ ಅರಿವು ಮೂಡಿಸಲಾಗಿದೆ. ಈ ಬಾರಿ ಅತ್ಯಧಿಕ ಪ್ರಮಾಣದಲ್ಲಿ ಸರ್ವಿಸ್ ವೋಟರ್ಸ್ಗಳು ಮತದಾನ ಮಾಡುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.