ನವದೆಹಲಿ: ಎಪ್ರಿಲ್ 1 ರಂದು ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ (IRCTC) ತನ್ನ ವೆಬ್ಸೈಟ್ ಮತ್ತು ಅಪ್ಲಿಕೇಶನ್ನಲ್ಲಿ ಒಂದು ಹೊಸ ಫೀಚರ್ ಅನ್ನು ಅನಾವರಣಗೊಳಿಸಿತು. ಇದು ರೈಲಿನ ಪ್ರಯಾಣಿಕರಿಗೆ ಎರಡು ಸಂಪರ್ಕ ಮಾರ್ಗಗಳ (ಕನೆಕ್ಟಿಂಗ್ ಜರ್ನಿ) PNR ಸಂಖ್ಯೆಗಳನ್ನು ಲಿಂಕ್ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮೊದಲ ರೈಲಿನ ವಿಳಂಬದ ಕಾರಣ ಪ್ರಯಾಣಿಕರಿಗೆ ತಮ್ಮ ಸಂಪರ್ಕದ ಮತ್ತೊಂದು ರೈಲ್ (ಕನೆಕ್ಟಿಂಗ್ ಟ್ರೈನ್) ಅನ್ನು ಹಿಡಿಯಲು ಸಾಧ್ಯವಾಗದಿದ್ದಲ್ಲಿ ಪ್ರಯಾಣಿಕರಿಗೆ ಹಣ ಮರುಪಾವತಿ ಮಾಡುವ ದೃಷ್ಟಿಯಿಂದ ಈ ಫೀಚರ್ ಅನ್ನು ಅನಾವರಣಗೊಳಿಸಲಾಗಿದೆ. ವಿಮಾನಯಾನ ಉದ್ಯಮದಂತೆ ಇದು ಕಾರ್ಯ ನಿರ್ವಹಿಸುತ್ತದೆ, ವಿಮಾನ ಪ್ರಯಾಣಿಕರು ತಮ್ಮ ಮೊದಲ ವಿಮಾನದ ವಿಳಂಬದ ಕಾರಣದಿಂದಾಗಿ ಕನೆಕ್ಟಿಂಗ್ ವಿಮಾನವನ್ನು ಮಿಸ್ ಮಾಡಿಕೊಂಡರೆ, ಅವರಿಗೆ ಬೇರೆ ವಿಮಾನದಲ್ಲಿ ಆಸನವನ್ನು ನೀಡಲಾಗುತ್ತದೆ.
ಸಂಪರ್ಕ ಪ್ರಯಾಣಕ್ಕಾಗಿ ಟಿಕೆಟ್ ಅನ್ನು ಕಾಯ್ದಿರಿಸುವ ಸಂದರ್ಭದಲ್ಲಿ ಮೊದಲ ಪ್ರಯಾಣದ ಟಿಕೆಟಿನ PNR ಗೆ ಪ್ರವೇಶಿಸುವ ಮೂಲಕ ಈ ಸೌಲಭ್ಯವನ್ನು ಬಳಸಬಹುದು. ಮೊದಲ ರೈಲು ಪ್ರಯಾಣದ ಸಮಯ ಮತ್ತು ಎರಡನೇ ರೈಲು ನಿರ್ಗಮನದ ಸಮಯವನ್ನು ಆಧರಿಸಿ, ಪ್ರಯಾಣಿಕರಿಗೆ ಸಂಪರ್ಕಿಸುವ ರೈಲಿಗೆ ಬುಕಿಂಗ್ ಮಾಡುವ ಅರ್ಹತೆ ಇದೆಯೇ ಎಂಬ ಬಗ್ಗೆ ಆನ್ಲೈನ್ ವ್ಯವಸ್ಥೆಯು ಸ್ವಯಂಚಾಲಿತವಾಗಿ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.