ನವದೆಹಲಿ: ಇಂದು ದೇಶದಾದ್ಯಂತ ಯುಗಾದಿಯ ಸಂಭ್ರಮ. ಹಿಂದೂಗಳ ಹೊಸವರ್ಷವನ್ನು ದೇಶದ ನಾನಾ ಭಾಗಗಳಲ್ಲಿ ನಾನಾ ಹೆಸರುಗಳಿಂದ ಆಚರಣೆ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು, ಆಯಾ ಭಾಷಿಕರಿಗೆ ಆಯಾ ಭಾಷೆಯಲ್ಲೇ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ.
‘ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು! ಹೊಸ ವರ್ಷದ ಶುಭ ಸಂದರ್ಭದಲ್ಲಿ ನಿಮ್ಮ ಎಲ್ಲ ಕನಸುಗಳು ನನಸಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಿಮಗೆಲ್ಲ ಸಂತೋಷ ಮತ್ತು ಉತ್ತಮ ಆರೋಗ್ಯ ಲಭಿಸಲಿ ಎಂದು ನಾನು ಆಶಿಸುತ್ತೇನೆ ಎಂದು ಮೋದಿಯವರು ಕನ್ನಡಿಗರಿಗೆ ಕನ್ನಡದಲ್ಲೇ ಶುಭಾಶಯವನ್ನು ಕೋರಿ ಟ್ವೀಟ್ ಮಾಡಿದ್ದಾರೆ.
ತೆಲುಗು ಭಾಷಿಕರಿಗೆ ತೆಲುಗುವಿನಲ್ಲಿ, ಮರಾಠಿಗರಿಗೆ ಮರಾಠಿಯಲ್ಲಿ, ಹಿಂದಿಯಲ್ಲಿ ಇತ್ಯಾದಿ ಭಾಷೆಗಳಲ್ಲಿ ಅವರು ಟ್ವೀಟ್ ಮಾಡಿದ್ದಾರೆ. ಮಣಿಪುರದಲ್ಲಿ ಆಚರಿಸಲಾಗುತ್ತಿರುವ ಸಾಜಿಬು ನಂಗ್ಮಾ ಪನ್ಬಾ ಚಿಯರೋಬಾ ಹಬ್ಬಕ್ಕೆ, ಕಾಶ್ಮೀರಿ ಪಂಡಿತರ ನವ್ರೇಹ್ ಹಬ್ಬಕ್ಕೆ, ಒಡಿಸ್ಸಾದ ಆಚರಿಸಲ್ಪಡುತ್ತಿರುವ ಹೊಸ ವರ್ಷಕ್ಕೆ ಶುಭಾಶಯಗಳನ್ನು ಮೋದಿ ಕೋರಿದ್ದಾರೆ.
ಯುಗಾದಿಯ ಮೂಲಕ ಹಿಂದೂಗಳ ನವ ಸಂವತ್ಸರ ಆರಂಭವಾಗುತ್ತದೆ. ಬೇವು ಬೆಲ್ಲವನ್ನು ತಿನ್ನುವ ಮೂಲಕ ಸಿಹಿ ಮತ್ತು ಕಹಿಗಳೆರಡನ್ನೂ ಸಮಾನವಾಗಿ ಸ್ವೀಕರಿಸುವ ಸಂದೇಶವನ್ನು ಈ ಹಬ್ಬ ನೀಡುತ್ತದೆ.
ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು!
ಹೊಸ ವರ್ಷದ ಶುಭ ಸಂದರ್ಭದಲ್ಲಿ ನಿಮ್ಮ ಎಲ್ಲ ಕನಸುಗಳು ನನಸಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಿಮಗೆಲ್ಲ ಸಂತೋಷ ಮತ್ತು ಉತ್ತಮ ಆರೋಗ್ಯ ಲಭಿಸಲಿ ಎಂದು ನಾನು ಆಶಿಸುತ್ತೇನೆ.
— Chowkidar Narendra Modi (@narendramodi) April 6, 2019
Ugadi greetings to everyone!
I pray that this auspicious occasion leads to the fulfilment of all your aspirations.
May everyone be blessed with happiness and best health.
— Chowkidar Narendra Modi (@narendramodi) April 6, 2019
सभी देशवासियों को नव संवत्सर की हार्दिक शुभकामनाएं। मैं कामना करता हूं कि नया वर्ष सबके जीवन में सुख, शांति, समृद्धि और आरोग्य लेकर आए। हमारा देश उन्नति की राह पर और तेज गति से अग्रसर हो।
— Chowkidar Narendra Modi (@narendramodi) April 6, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.