ನವದೆಹಲಿ: ಬಿಜೆಪಿ ಸ್ಥಾಪನಾ ದಿನದ ಅಂಗವಾಗಿ ಪಕ್ಷದ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಬಿಜೆಪಿ ಕಟ್ಟಲು ಮತ್ತು ಬಲಿಷ್ಠ ಭಾರತ ನಿರ್ಮಾಣಕ್ಕೆ ನಿರಂತರ ಪರಿಶ್ರಮಪಟ್ಟ ಕಾರ್ಯಕರ್ತರನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತೇವೆ ಎಂದಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಮೋದಿ ’39 ವರ್ಷಗಳ ಹಿಂದೆ ಈ ದಿನ, ಸಮಾಜಕ್ಕೆ ಸೇವೆ ಸಲ್ಲಿಸುವ ಮತ್ತು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯವ ಬದ್ಧತೆಯೊಂದಿಗೆ ಬಿಜೆಪಿ ಹುಟ್ಟಿಕೊಂಡಿತು. ನಮ್ಮ ಕಾರ್ಯಕರ್ತರ ಪ್ರಯತ್ನಕ್ಕೆ ಧನ್ಯವಾದಗಳು, ಬಿಜೆಪಿ ಈಗ ಅತ್ಯಂತ ಆದ್ಯತೆಯ ಪಕ್ಷವಾಗಿದೆ. ಸಂಸ್ಥಾಪನಾ ದಿನದ ಅಂಗವಾಗಿ ಬಿಜೆಪಿ ಕುಟುಂಬಕ್ಕೆ ಶುಭಾಶಯಗಳು’ ಎಂದಿದ್ದಾರೆ.’
39 years ago on this day, @BJP4India was born with an unwavering commitment to serve society and take the nation to new heights. Thanks to the efforts of our Karyakartas, BJP has become India’s preferred party. Greetings to the BJP family on the Party’s Foundation Day. pic.twitter.com/fBHp3fBQ2a
— Chowkidar Narendra Modi (@narendramodi) April 6, 2019
The @BJP4India stands tall due to it’s democratic ethos and patriotic zeal. This is a Party that is always on the ground, at the forefront of helping fellow Indians. Our development work has endeared the Party to all sections of society, across the length and breadth of India.
— Chowkidar Narendra Modi (@narendramodi) April 6, 2019
I am confident that the entire family of @BJP4India Karyakartas would be working day and night to ensure that our Party and our allies are blessed yet again by the people of India. In the last 5 years lots has been done and we want to do much more for the country.
— Chowkidar Narendra Modi (@narendramodi) April 6, 2019
ತನ್ನ ಪ್ರಜಾಪ್ರಭುತ್ವ ಮೌಲ್ಯಗಳಿಂದ ಮತ್ತು ರಾಷ್ಟಭಕ್ತಿಯ ಉತ್ಸಾಹದಿಂದಾಗಿ ಬಿಜೆಪಿ ಉನ್ನತವಾದ ಸ್ಥಾನಕ್ಕೇರಿದೆ. ಸದಾ ತಳಮಟ್ಟದಲ್ಲೇ ಇದ್ದು, ಭಾರತೀಯರ ಸಹಾಯಕ್ಕೆ ಸದಾ ಮುನ್ನಲೆಯಲ್ಲಿ ನಿಲ್ಲುವ ಪಕ್ಷ ಇದಾಗಿದೆ. ನಮ್ಮ ಅಭಿವೃದ್ಧಿ ಕಾರ್ಯಗಳು ನಮ್ಮ ಪಕ್ಷವನ್ನು ಸಮಾಜದ ಎಲ್ಲಾ ವರ್ಗಕ್ಕೂ, ದೇಶದ ಮೂಲೆ ಮೂಲೆಗೂ ತಲುಪವಂತೆ ಮಾಡಿದೆ’ ಎಂದಿದ್ದಾರೆ.
ದೇಶದ ಜನರು ಮತ್ತೊಮ್ಮೆ ನಮ್ಮ ಪಕ್ಷಕ್ಕೆ ಮತ್ತು ನಮ್ಮ ಮೈತ್ರಿಗಳಿಗೆ ಆಶೀರ್ವಾದ ಮಾಡಲಿ ಎಂಬ ಉದ್ದೇಶದೊಂದಿಗೆ ನಮ್ಮ ಕಾರ್ಯಕರ್ತರು ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಸಾಕಷ್ಟು ಕಾರ್ಯಗಳನ್ನು ಮಾಡಿದ್ದೇವೆ ಮತ್ತು ದೇಶಕ್ಕೆ ಮತ್ತಷ್ಟು ಸೇವೆಯನ್ನು ಸಲ್ಲಿಸಲು ಉತ್ಸುಹುಕರಾಗಿದ್ದೇವೆ’ ಎಂದಿದ್ದಾರೆ.
1980 ರ ಎಪ್ರಿಲ್ 6 ರಂದು ಬಿಜೆಪಿ ಪಕ್ಷ ಅಸ್ತಿತ್ವಕ್ಕೆ ಬಂತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.