ನವದೆಹಲಿ: ಶ್ರೀಮಂತ ತೈಲ ಕಂಪನಿಗಳಾದ ಒಎನ್ಜಿಸಿ, ಇಂಡಿಯನ್ ಆಯಿಲ್ ಮತ್ತು ಬಿಪಿಸಿಎಲ್ಗಳು ತಮ್ಮ ನಿವೃತ್ತ ನೌಕರರಿಗೆ ನಗದು ಪುರಸ್ಕಾರವನ್ನು ನೀಡಲು ನಿರ್ಧರಿಸಿವೆ. ಈ ಮೂರು ಕಂಪನಿಗಳು ನಿವೃತ್ತ ನೌಕರರಿಗೆ ಪುರಸ್ಕಾರ ಕೊಡುವ ನಿರ್ಧಾರವನ್ನು ಪ್ರತ್ಯೇಕವಾಗಿ ತೆಗೆದುಕೊಂಡಿದೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಹಿರಿಯರು ನೀಡಿದ ಕೊಡುಗೆಯನ್ನು ಪುರಸ್ಕರಿಸಿ ಗೌರವಿಸುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಿವೃತ್ತ ನೌಕರರು ಕೇವಲ ತಮ್ಮ ಪಿಂಚಣಿಯನ್ನು ನೆಚ್ಚಿಕೊಂಡು ಬದುಕನ್ನು ಸವೆಸುತ್ತಿದ್ದಾರೆ. ಅವರ ಕಷ್ಟಕಾಲದಲ್ಲಿ ಸಹಾಯವೂ ಆಗಲಿ ಎಂಬ ಕಾರಣಕ್ಕೆ ನಗದು ಪುರಸ್ಕಾರ ನೀಡಲಾಗುತ್ತಿದೆ ಎಂದು ಇಂಡಿಯನ್ ಆಯಿಲ್ ವಕ್ತಾರರು ತಿಳಿಸಿದ್ದಾರೆ.
ಇತರ ವಲಯಗಳಿಗೆ ಹೋಲಿಸಿದರೆ, ಸರ್ಕಾರಿ ವಲಯದ ತೈಲ ಕಂಪನಿಗಳು ಹೆಚ್ಚು ಲಾಭದಲ್ಲಿವೆ ಮತ್ತು ಖಜಾನೆಗೆ ಹೆಚ್ಚಿನ ಕೊಡುಗೆಗಳನ್ನು ನೀಡುವವುಗಳಾಗಿವೆ. ನೌಕರರ ಫಲಾನುಭವಿ ಕಾರ್ಯಕ್ಕೆ ಸಂಬಂಧಿಸಿದಂತೆ ಎಲ್ಲಾ ಸರ್ಕಾರಿ ತೈಲ ಕಂಪನಿಗಳು ಸಾರ್ವಜನಿಕ ಉದ್ಯಮ ಇಲಾಖೆಯ ನಿರ್ದೇಶನವನ್ನು ಅನುಸರಿಸುತ್ತವೆ. ಸೇವೆಯಲ್ಲಿರುವ ಅಥವಾ ನಿವೃತ್ತ ನೌಕರರ ಪರಿಹಾರ ವಿಷಯದಲ್ಲಿ ಯಾವುದೇ ಬದಲಾವಣೆಯನ್ನು ತರಲು ಅವರಿಗೆ ಸರ್ಕಾರದ ಅನುಮೋದನೆ ಬೇಕಿದೆ.
‘ವಯೋ ಸಂಬಂಧಿತ ಮೈಲಿಗಲ್ಲುಗಳನ್ನು ತಲುಪಲು ಸಹಾಯ ಮಾಡುವ ಸಲುವಾಗಿ ಮತ್ತು ಅವರು ನೀಡಿದ ಕೊಡುಗೆಗಳನ್ನು ಪುರಸ್ಕರಿಸುವ ಸಲುವಾಗಿ ನಗದು ಪುರಸ್ಕಾರ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಬಿಪಿಸಿಎಲ್ ಹೇಳಿದೆ.
70 ವರ್ಷ ದಾಟಿದ ನಿವೃತ್ತ ಸಿಬ್ಬಂದಿಗೆ ರೂ.70 ಸಾವಿರ ಮತ್ತು ನಿವೃತ್ತ ಕಾರ್ಮಿಕರಿಗೆ ರೂ.50 ಸಾವಿರ ನಗದನ್ನು ನೀಡಲು ನಿರ್ಧರಿಸಲಾಗಿದೆ. 80 ದಾಟಿದ ನಿವೃತ್ತ ಸಿಬ್ಬಂದಿಗೆ ರೂ.80 ಸಾವಿರ ಮತ್ತು ಕಾರ್ಮಿಕರಿಗೆ ರೂ.60 ಸಾವಿರ ಸಿಗಲಿದೆ. 85 ಆದವರಿಗೆ ರೂ.85 ಸಾವಿರ ಮತ್ತು 65 ಸಾವಿರ ಸಿಗಲಿದೆ. 90 ದಾಟಿದವರಿಗೆ ರೂ.90 ಸಾವಿರ ಮತ್ತು 70 ಸಾವಿರ ಸಿಗಲಿದೆ, 95 ದಾಟಿದವರಿಗೆ ರೂ.1ಲಕ್ಷ ಮತ್ತು 80 ಸಾವಿರ ರೂಪಾಯಿ ಸಿಗಲಿದೆ. 100 ವರ್ಷ ದಾಟಿದವರಿಗೆ 2 ಲಕ್ಷ ರೂಪಾಯಿ ಮತ್ತು 1 ಲಕ್ಷ 60 ಸಾವಿರ ರೂಪಾಯಿ ಸಿಗಲಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.