ನವದೆಹಲಿ: ಸಿಎಸ್ ಡಿಎಸ್-ಲೋಕನೀತಿ-ದಿ ಹಿಂದೂ-ತಿರಂಗ ಟಿವಿ-ದೈನಿಕ್ ಭಾಸ್ಕರ್ ಚುನಾವಣಾ ಪೂರ್ವ ಸಮೀಕ್ಷೆ, 2019 ರಲ್ಲಿ ಶೇ.43ರಷ್ಟು ಪ್ರತಿಕ್ರಿಯೆದಾರರು ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸಿದ್ದಾರೆ. ಇದು 2014ರ ಲೋಕನೀತಿ ಸಮೀಕ್ಷೆಗಿಂತಲೂ ಉತ್ತಮವಾದ ಪ್ರಮಾಣವಾಗಿದೆ ಎಂದು ಹೇಳಲಾಗಿದೆ.
ಈ ಸಂಖ್ಯೆಯು 2018 ರ ಮೇ ನಲ್ಲಿ ಲೋಕನೀತಿ ನಡೆಸಿದ ಸಮೀಕ್ಷೆಗಿಂತ ಶೇ. 9 ರಷ್ಟು ಹೆಚ್ಚಾಗಿದೆ. ಆ ಸಮೀಕ್ಷೆಯಲ್ಲಿ ಶೇ. 34 ರಷ್ಟು ಮಂದಿ ಮೋದಿಯನ್ನು ಬೆಂಬಲಿಸಿದ್ದರು. ಕಳೆದ ಒಂದು ವರ್ಷಗಳಲ್ಲಿ ಮೋದಿ ಜನಪ್ರಿಯತೆ ಹೆಚ್ಚಾಗಿದೆ ಎಂಬುದನ್ನು ಇದು ತೋರಿಸುತ್ತದೆ.
ಎನ್ಡಿಎ ಸರ್ಕಾರ ತೆಗೆದುಕೊಂಡ 3 ಮಹತ್ವದ ನಿರ್ಧಾರಗಳು ಮೋದಿಯವರ ಜನಪ್ರಿಯತೆ ಹೆಚ್ಚಾಗಲು ಕಾರಣ ಎನ್ನಲಾಗಿದೆ. 1. ಬಾಲಾಕೋಟ್ ವೈಮಾನಿಕ ದಾಳಿ, 2. ಸಾಮಾನ್ಯ ವರ್ಗಕ್ಕೆ ಶೇ. 10 ರಷ್ಟು ಮೀಸಲಾತಿ, 3. ಪಿಎಂ ಕಿಸಾನ್ ಯೋಜನಾ.
ಪುಲ್ವಾಮ ದಾಳಿಯ ಬಳಿಕ ನಡೆದ ವೈಮಾನಿಕ ದಾಳಿಯ ಬಗ್ಗೆ ಅರಿವುಳ್ಳವರು ಹೆಚ್ಚಿನ ಪ್ರಮಾಣದಲ್ಲಿ ಮೋದಿಯವರನ್ನು ಬೆಂಬಲಿಸಿದ್ದಾರೆ. ಮೋದಿಯನ್ನು ಬೆಂಬಲಿಸಿದ ಶೇ.42ರಷ್ಟು ಮಂದಿಯಲ್ಲಿ ಶೇ.32ರಷ್ಟು ಮಂದಿ ವೈಮಾನಿಕ ದಾಳಿಯ ಬಗ್ಗೆ ಅರಿವು ಇರುವವರು, ಶೇ. 10ರಷ್ಟು ಮಂದಿಗೆ ಶೇ.10ರಷ್ಟು ಮೀಸಲಾತಿಯ ಅರಿವಿದೆ, ಶೇ.10ರಷ್ಟು ಮಂದಿಗೆ ಪಿಎಂ ಕಿಸಾನ್ ಯೋಜನೆಯ ಬಗ್ಗೆ ಅರಿವಿದೆ.
ಇನ್ನು ಪ್ರತಿಪಕ್ಷಗಳ ರಫೇಲ್ ಆರೋಪ ಪರಿಣಾಮಕಾರಿಯಾಗಿಲ್ಲ. ಶೇ.50 ರಷ್ಟು ಪ್ರತಿಕ್ರಿಯೆದಾರರಿಗೆ ಅದರ ಅರಿವೇ ಇಲ್ಲ, ಅರಿವಿದ್ದವರಿಗೆ ಸರ್ಕಾರ ಇದರಲ್ಲಿ ಯಾವುದೇ ತಪ್ಪೆಸಗಲಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ, ರಾಹುಲ್ ಗಾಂಧಿಯವರಿಗಿಂತ ಮೋದಿಯವರ ಜನಪ್ರಿಯತೆ ದುಪ್ಪಟ್ಟು ಇದೆ ಎಂಬುದು ಈ ಸಮೀಕ್ಷೆಯಿಂದ ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.