ನವದೆಹಲಿ: ದೇಶದ ಗಡಿಯಲ್ಲಿ ಕೂತು ನಾಗರಿಕರನ್ನು ರಕ್ಷಣೆ ಮಾಡುವ, ತಮ್ಮೆಲ್ಲಾ ಜೀವನವನ್ನು ಸಮುದ್ರ, ಆಗಸ, ಭೂ ಗಡಿಯನ್ನು ಕಾಯುವುದಕ್ಕೆಂದು ಮೀಸಲಾಗಿಡುವ ವೀರ ಯೋಧರು ಮೂಲಭೂತ ಹಕ್ಕಾದ ಮತದಾನದಿಂದ ದೂರವೇ ಉಳಿದುಬಿಡುತ್ತಾರೆ. ಮತದಾನದ ಹಕ್ಕನ್ನು ಚಲಾಯಿಸಬೇಕು, ತಮ್ಮ ಧ್ವನಿಯನ್ನು ಪ್ರಜಾಪ್ರಭುತ್ವದಲ್ಲಿ ಗಟ್ಟಿಗೊಳಿಸಬೇಕು ಎಂಬ ಆಶಯ ಪ್ರತಿ ಸೈನಿಕನಿಗೂ ಇರುತ್ತದೆ. ಇದಕ್ಕಾಗಿಯೇ ಚುನಾವಣಾ ಆಯೋಗ ‘ಪೋಸ್ಟಲ್ ಬ್ಯಾಲೆಟ್ ಸಿಸ್ಟಮ್’ ಅನ್ನು ಪರಿಚಯಿಸಿದೆ. ಬಳಿಕ ಈ ಸಿಸ್ಟಮ್ ಅನ್ನು ಎಲೆಕ್ಟ್ರಾನಿಕಲಿ ಟ್ರಾನ್ಸ್ಮಿಟೆಡ್ ಪೋಸ್ಟಲ್ ಬ್ಯಾಲೆಟ್ ಸಿಸ್ಟಮ್ ಆಗಿ ಪರಿವರ್ತನೆ ಮಾಡಲಾಯಿತು.
ಪೋಸ್ಟಲ್ ಬ್ಯಾಲೆಟ್ ಪೇಪರ್ಗಳನ್ನು ಸಾಮಾನ್ಯವಾಗಿ ಅರ್ಹ ಮತದಾರರಿಗೆ ಹಂಚಿಕೆ ಮಾಡಲಾಗುತ್ತದೆ ಮತ್ತು ಅವುಗಳನ್ನು ಅಂಚೆಯ ಮೂಲಕ ಹಿಂಪಡೆಯಲಾಗುತ್ತದೆ. ಎಲೆಕ್ಟ್ರಾನಿಕಲಿ ಟ್ರಾನ್ಸ್ಮಿಟೆಡ್ ಪೋಸ್ಟಲ್ ಬ್ಯಾಲೆಟ್ ಸಿಸ್ಟಮ್ ಅಥವಾ ಇ-ಪೋಸ್ಟಲ್ ಬ್ಯಾಲೆಟ್ ಸಿಸ್ಟಮ್ನಿಂದ ಬ್ಯಾಲೆಟ್ ಪೇಪರ್ಗಳ ಹಂಚಿಕೆ ಅತ್ಯಂತ ವೇಗವಾಗಿ ಮತ್ತು ಸುಲಭವಾಗಿ ನಡೆಯುತ್ತದೆ.
ಅಸ್ಸಾಂ ರೈಫಲ್ಸ್ನಿಂದ ಹಿಡಿದು, ಬಿಎಸ್ಎಫ್, ಸಿಆರ್ಪಿಎಫ್, ಜಿಆರ್ಇಎಫ್ ಸೇರಿದಂತೆ ಎಲ್ಲಾ ವಿಧದ ಶಸ್ತ್ರಸ್ತ್ರ ಪಡೆಗಳ ಸಿಬ್ಬಂದಿಗಳು, ದೇಶದ ಹೊರಗಡೆ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಹುದ್ದೆಯಲ್ಲಿರುವವರು ಎಲೆಕ್ಟ್ರಾನಿಕ್ ಪೋಸ್ಟಲ್ ಬ್ಯಾಲೆಟ್ ಬಳಸಲು ಅರ್ಹರಾಗಿದ್ದಾರೆ.
ಚುನಾವಣೆ ಘೋಷಣೆಯಾಗುತ್ತಿದ್ದಂತೆ, ಸಂಬಂಧಿತ ಕ್ಷೇತ್ರಗಳ ರಿಟರ್ನಿಂಗ್ ಆಫೀಸರ್, ಅರ್ಹ ಮತದಾರರಿಗೆ ಬ್ಯಾಲೆಟ್ ಅನ್ನು ಎಲೆಕ್ಟ್ರಾನಿಕ್ ಆಗಿ ವಿತರಿಸುತ್ತಾರೆ. ಇದರಲ್ಲಿ ಮತದಾರರ ವಿವರ ಮೊದಲೇ ತುಂಬಿಸಲಾಗಿರುತ್ತದೆ, ಬಳಿಕ ಅಂಚೆ ಇದನ್ನು ಮತ ಎಣಿಕೆಗೂ ಮೊದಲು ರಿಟರ್ನಿಂಗ್ ಆಫೀಸರ್ಗೆ ವಾಪಾಸ್ ತಂದು ಕೊಡಲಿದೆ.
A short film🎞️ by #ElectionCommission of India on the Registration and Voting Process for #ServiceVoters, including Electronically Transmitted Postal Ballot#GeneralElection #NoVoterToBeLeftBehind pic.twitter.com/RZ5CZt5DUk
— PIB India (@PIB_India) April 4, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.