ನವದೆಹಲಿ: ಮಾರ್ಚ್ ತಿಂಗಳಿನಲ್ಲಿ ಭಾರತ ಮಾಡಿರುವ ರಫ್ತಿನ ಪ್ರಮಾಣ $32.38 ಬಿಲಿಯನ್ ತಲುಪಿರುವ ನಿರೀಕ್ಷೆ ಇದೆ ಎಂದು ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಬುಧವಾರ ಹೇಳಿದ್ದಾರೆ. ಕೇವಲ ಒಂದು ತಿಂಗಳಲ್ಲಿ ಇಷ್ಟೊಂದು ಪ್ರಮಾಣದ ರಫ್ತು ಆಗಿರುವುದು ಇದೇ ಮೊದಲು.
ಎಪ್ರಿಲ್ 15ರಂದು ವಾಣಿಜ್ಯ ಸಚಿವಾಲಯವು ಮಾರ್ಚ್ ತಿಂಗಳ ಟ್ರೇಡ್ ಡಾಟಾವನ್ನು ಪ್ರಕಟಗೊಳಿಸಲಿದೆ.
‘2018-19ರಲ್ಲಿ ಭಾರತದ ಒಟ್ಟು ರಫ್ತು $331 ಬಿಲಿಯನ್ ಗಡಿಯನ್ನು ತಲುಪಲಿದೆ, ಇದರಿಂದಾಗಿ 2019ರ ಹಣಕಾಸು ವರ್ಷ ಅತ್ಯುತ್ತಮ ಹಣಕಾಸು ವರ್ಷವಾಗಿದೆ. ಭಾರತ ದಾಖಲೆಯ ರಫ್ತನ್ನು ಕಂಡಿದೆ’ ಎಂದು ಪ್ರಭು ಹೇಳಿದ್ದಾರೆ. ಕೆಲ ವರ್ಷಗಳಿಂದ ಭಾರತದ ರಫ್ತಿನಲ್ಲಿ ಕಡಿಮೆಯಾಗುತ್ತಿದ್ದರೂ, ಈ ವರ್ಷ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ ಎಂದಿದ್ದಾರೆ.
ಇದೇ ಮೊದಲ ಬಾರಿಗೆ ಭಾರತದ ಫಾರ್ಮಸ್ಯುಟಿಕಲ್ ರಫ್ತು 19 ಮಿಲಿಯನ್ ಡಾಲರ್ ಗಡಿಯನ್ನು ದಾಟಿದೆ ಎಂದಿರುವ ಅವರು, ತಮ್ಮ ಸಚಿವಾಲಯದ ನಿರಂತರ ಪ್ರಯತ್ನಗಳಿಂದಾಗಿ ಕಳೆದ ಒಂದು ವರ್ಷಗಳಿಂದ ಹೊರಹೋಗುವ ಶಿಪ್ಮೆಂಟ್ನಲ್ಲಿ ಮಹತ್ವದ ಪ್ರಗತಿ ಕಾಣುತ್ತಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.