ನವದೆಹಲಿ: ಸ್ಯಾಮ್ ಮಾನೆಕ್ಷಾ ಎಂದೇ ಖ್ಯಾತರಾಗಿರುವ, ಫೀಲ್ಡ್ ಮಾರ್ಷಲ್ ಸ್ಯಾಮ್ ಹೊರ್ಮುಸ್ಜಿ ಫ್ರೇಮ್ಜೀ ಮಾಣಿಕ್ ಷಾ ಭಾರತದ ಅತೀಶ್ರೇಷ್ಠ ಮಿಲಿಟರಿ ಕಮಾಂಡರ್ಗಳಲ್ಲಿ ಒಬ್ಬರು. ಇಂದು ಅವರ 105ನೇ ಜನ್ಮದಿನವನ್ನು ಆಚರಣೆ ಮಾಡಲಾಗುತ್ತಿದೆ.
1914ರ ಎಪ್ರಿಲ್ 3ರಂದು ಜನಿಸಿದ ಮಾನಿಕ್ ಷಾ ಅವರು, ನೈನಿತಾಲ್ನಲ್ಲಿ ಶಿಕ್ಷಣ ಪೂರೈಸಿ ಮಿಲಿಟರಿ ಅಕಾಡೆಮಿ ಸೇರಿದರು. 1934ರಲ್ಲಿ ಭಾರತೀಯ ಸೇನೆಯ 2ನೇ ಲೆಫ್ಟಿನೆಂಟ್ ಆಗಿ ನೇಮಕಗೊಂಡರು. ನಂತರ ಸೇನೆಯ ಹಲವು ಮಹತ್ವದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದರು. ಫೀಲ್ಡ್ ಮಾರ್ಷಲ್ ರ್ಯಾಂಕ್ಗೆ ಏರಲ್ಪಟ್ಟರು.
1971ರ ಭಾರತ-ಪಾಕಿಸ್ಥಾನ ಯುದ್ಧದ ಸಂದರ್ಭದಲ್ಲಿ ಅವರು ಸೇನಾ ಮುಖ್ಯಸ್ಥರಾಗಿದ್ದರು. ತಮ್ಮ ನಾಲ್ಕು ದಶಕದ ಮಿಲಿಟರಿ ವೃತ್ತಿಯಲ್ಲಿ ಅವರು ನಾಲ್ಕು ಯುದ್ಧದಲ್ಲಿ ಭಾಗವಹಿಸಿದ್ದಾರೆ.
1932ರಲ್ಲಿ ಇಂಡಿಯನ್ ಮಿಲಿಟರಿ ಅಕಾಡಮಿಗೆ ನಿಯೋಜನೆಗೊಂಡ ಮೊದಲಿಗರಲ್ಲಿ ಇವರೂ ಸೇರಿದ್ದಾರೆ, ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ವೃತ್ತಿ ಆರಂಭಿಸಿದ ಅವರು, ಎರಡನೇ ವಿಶ್ವಯುದ್ಧದಲ್ಲಿ ಭಾಗಿಯಾಗಿ ಶೌರ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
1969ರಲ್ಲಿ ಭಾರತೀಯ ಸೇನೆಯ 8ನೇ ಮುಖ್ಯಸ್ಥರಾಗಿ ಇವರು ನೇಮಕಗೊಂಡರು, 1973ರವರೆಗೂ ಹುದ್ದೆಯಲ್ಲಿದ್ದರು. ನಿವೃತ್ತಿಯ ಬಳಿಕ 1973ರಲ್ಲಿ, ಅವರಿಗೆ ರ್ಯಾಂಕ್ ಆಫ್ ಫೀಲ್ಡ್ ಮಾರ್ಷಲ್ ನೀಡಲಾಯಿತು. ಈ ಮೂಲಕ ಈ ರ್ಯಾಂಕ್ ಪಡೆದ ಮೊದಲ ಸೇನಾಧಿಕಾರಿ ಎನಿಸಿಕೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.