ನವದೆಹಲಿ: ಭಾರತೀಯ ರೈಲ್ವೇಯು 2018-19 ರ ಹಣಕಾಸು ವರ್ಷದಲ್ಲಿ 6,713 ಕೋಚ್ಗಳನ್ನು ಮತ್ತು ಲೊಕೊಮೋಟಿವ್ಗಳನ್ನು ಉತ್ಪಾದಿಸುವ ಮೂಲಕ ದಾಖಲೆ ಮಾಡಿದೆ. ಈಗಾಗಲೇ ರೈಲ್ವೇಯ ಚೆನ್ನೈನಲ್ಲಿನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತೀದೊಡ್ಡ ಕೋಚ್ ಉತ್ಪಾದಕನಾಗಿ ಹೊರಹೊಮ್ಮಿದೆ. ಇದೀಗ ರೈಲ್ವೇ ಮತ್ತೊಂದು ಮಹತ್ವದ ಸಾಧನೆಯನ್ನು ಮಾಡಿದೆ. ಇದರ ಇತರ ಉತ್ಪಾದನಾ ಘಟಕಗಳ ಉತ್ಪಾದನೆಯಲ್ಲೂ ಮಹತ್ವದ ಏರಿಕೆ ಕಂಡಿದೆ.
ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯು 3262 ಕೋಚುಗಳನ್ನು ಉತ್ಪಾದನೆ ಮಾಡಿದೆ, ಇದು ಅಂದಾಜು ಟಾರ್ಗೆಟ್ 3200 ಕ್ಕಿಂತಲೂ ಅಧಿಕವಾಗಿದೆ. ರೈಲ್ವೇ ಮತ್ತೊಂದು ಉತ್ಪಾದನಾ ಘಟಕ ಚತ್ತರಂಜನ್ ಲೊಕೊಮೊಟಿವ್ ವರ್ಕ್ಸ್, ಕೋಲ್ಕತ್ತಾದ ದನ್ಕುನಿ ಸಮೀಪದ ತನ್ನ ಉತ್ಪಾದನಾ ಘಟಕದಲ್ಲಿ 402 ಲೊಕೊಮೊಟಿವ್ಗಳನ್ನು 2018-19ರ ಹಣಕಾಸು ವರ್ಷದಲ್ಲಿ ಉತ್ಪಾದನೆ ಮಾಡಿದೆ. ಕಳೆದ ಹಣಕಾಸು ವರ್ಷದಲ್ಲಿ ಇದು 350 ಲೊಕೊಮೊಟಿವ್ ಉತ್ಪಾದನೆ ಮಾಡಿತ್ತು.
ರಾಯ್ ಬರೇಲಿಯಲ್ಲಿ ಮಾಡರ್ನ್ ಕೋಚ್ ಫ್ಯಾಕ್ಟರಿಯಲ್ಲಿ ಈ ವರ್ಷ 1425 ಕೋಚುಗಳನ್ನು ಉತ್ಪಾದನೆ ಮಾಡಲಾಗಿದೆ. ಕಳೆದ ವರ್ಷ ಇಲ್ಲಿ 711 ಕೋಚ್ಗಳನ್ನು ಉತ್ಪಾದನೆ ಮಾಡಲಾಗಿತ್ತು.
ಕಪೂರ್ತಾಲದ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ಈ ವರ್ಷ 1,350 LHB and MEMU ಕೋಚ್ಗಳನ್ನು ಉತ್ಪಾದನೆ ಮಾಡಿದೆ. ವಾರಣಾಸಿಯ ಡಿಸೇಲ್ ಲೊಕೊಮೊಟಿವ್ ವರ್ಕ್ಸ್ 274 ಇಂಜಿನ್ಗಳನ್ನು ಉತ್ಪಾದನೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.