ನವದೆಹಲಿ: ಸರಕು ಸಾಗಾಟದಲ್ಲಿ ಸೌತ್ ಸೆಂಟ್ರಲ್ ರೈಲ್ವೇಯು ಮಹತ್ವದ ಸಾಧನೆಯನ್ನು ಮಾಡಿದೆ. 2018-19ರ ಹಣಕಾಸು ವರ್ಷದಲ್ಲಿ ಅದು ಒಟ್ಟು 122.51 ಟನ್ ಸರಕು ಸಾಗಾಟ ಮಾಡಿದೆ. 2017-18ರ ಸಾಲಿನಲ್ಲಿ ಇದು 116.80 ಮಿಲಿಯನ್ ಟನ್ ಇತ್ತು. ಈ ವರ್ಷ ಈ ರೈಲ್ವೇ ವಲಯದ ಸಾಗಾಟ 19.47 ಮಿಲಿಯನ್ ಟನ್ಗಳನ್ನು ಈಗಾಗಲೇ ಮೀರಿದೆ.
ಸರಕು ಸಾಗಾಣೆಯಲ್ಲಿ ರೂ.10,584.94 ಕೋಟಿ ಆದಾಯ ಗಳಿಸುವ ಮೂಲಕ ಸೌತ್ ಸೆಂಟ್ರಲ್ ರೈಲ್ವೇಯು ಹೊಸ ದಾಖಲೆಯನ್ನು ಬರೆದಿದೆ. ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಅದು 10 ಸಾವಿರ ಕೋಟಿ ರೂಪಾಯಿ ಗೆರೆಯನ್ನು ದಾಟಿ ಆದಾಯ ಗಳಿಸಿದೆ.
ವಿವಿಧ ಕೈಗಾರಿಕೆ ಮತ್ತು ಸ್ಟೀಲ್ ಪ್ಲಾಂಟ್ಗಳ ಸರಕುಗಳನ್ನು ರೈಲ್ವೇ ಸಾಗಾಟ ಮಾಡುತ್ತದೆ.
ಈ ರೈಲ್ವೇ ವಲಯವು, 67.56 ಮಿಲಿಯನ್ ಟನ್ ಕಲ್ಲಿದ್ದಲು, 28.23 ಮಿಲಿಯನ್ ಟನ್ ಸಿಮೆಂಟ್, 5.46 ಮಿಲಿಯನ್ ಟನ್ ಕಬ್ಬಿಣಗಳನ್ನು ಸಾಗಾಟ ಮಾಡಿದೆ. 4.42 ಮಿಲಿಯನ್ ಟನ್ ತೂಕದ ಆಹಾರ ಸಾಮಾಗ್ರಿಗಳನ್ನು, 6 ಮೆಟ್ರಿಕ್ ಟನ್ ತೂಕದ ರಸಗೊಬ್ಬರ, 2.89 ಮೆಟ್ರಿಕ್ ಟನ್ ಸ್ಟೀಲ್ ಪ್ಲಾಂಟ್ ಪರಿಕರಗಳನ್ನು, 0.78 ಮೆಟ್ರಿಕ್ ಟನ್ ಪೆಟ್ರೋಲಿಯಂ ಉತ್ಪನ್ನಗಳು ಮತ್ತು 5.91 ಮೆಟ್ರಿಕ್ ಟನ್ ಇತರ ವಸ್ತುಗಳನ್ನು ಸಾಗಾಟ ಮಾಡಿದೆ.
ತೆಲಂಗಾಣದ ಸಿಂಗರೆನಿ ಕೊಲ್ಲೀರಿಸ್ ಲಿಮಿಟೆಡ್ , ಆಂಧ್ರ ಪ್ರದೇಶದ ಕೃಷ್ಣಪಟನಂ ಪೋರ್ಟ್ ಕಂಪನಿ ಲಿಮಿಟೆಡ್ ಸೌತ್ ಸೆಂಟ್ರಲ್ ರೈಲ್ವೇಯ ಪ್ರಮುಖ ಗ್ರಾಹಕರಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.