ನವದೆಹಲಿ : ಶೀಘ್ರದಲ್ಲೇ ಭಾರತೀಯ ನೌಕಾಪಡೆಗೆ 24 ಮಲ್ಟಿ ರೋಲ್ ಎಂಎಚ್-60 ‘ರೋಮಿಯೋ’ ಸೀಹಾಕ್ ಹೆಲಿಕಾಫ್ಟರ್ಗಳ ಸೇರ್ಪಡೆಯಾಗಲಿದೆ. USD 2.4 ಬಿಲಿಯನ್ ಮೊತ್ತಕ್ಕೆ ಈ ಹೆಲಿಕಾಫ್ಟರ್ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕಾ ಸಮ್ಮತಿ ಸೂಚಿಸಿದೆ.
ಜಲಾಂತರ್ಗಾಮಿ ನೌಕೆಗಳನ್ನು ದಿಟ್ಟವಾಗಿ ಎದುರಿಸುವ ಸಾಮರ್ಥ್ಯವುಳ್ಳ ಈ ಹೆಲಿಕಾಫ್ಟರ್ಗಳಿಗೆ ಭಾರತ ದಶಕಗಳಿಂದ ಬೇಡಿಕೆಯನ್ನು ಇಟ್ಟಿತ್ತು. ತುರ್ತಾಗಿ ಪೂರೈಕೆ ಮಾಡುವಂತೆ ಅಮೆರಿಕಾಗೆ ಮನವಿಯನ್ನೂ ಮಾಡಿಕೊಂಡಿತ್ತು. ಕೊನೆಗೂ ಮಂಗಳವಾರ ಅಮೆರಿಕಾ ಸಂಸತ್ತು ಈ ಒಪ್ಪಂದಕ್ಕೆ ಸಮ್ಮತಿಯನ್ನು ಸೂಚಿಸಿದೆ. 16.5 ಸಾವಿರ ಕೋಟಿ ರೂಪಾಯಿಗೆ 24 ಸೀಹಾಕ್ ಹೆಲಿಕಾಫ್ಟರ್ಗಳನ್ನು ಭಾರತಕ್ಕೆ ಅದು ನೀಡಲಿದೆ.
ಕಡಲ ಭದ್ರತೆಯನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸುವಲ್ಲಿ ಸೀಹಾಕ್ ಹೆಲಿಕಾಫ್ಟರ್ಗಳು ಅತ್ಯಂತ ಸಮರ್ಥವಾದವುಗಳು ಎಂದು ಪರಿಗಣಿಸಲಾಗಿದೆ. ಈ ಹೆಲಿಕಾಫ್ಟರ್ಗಳನ್ನು ಯುದ್ಧನೌಕೆಗಳು, ವಿಮಾನ ವಾಹಕಗಳು, ವಿಧ್ವಂಸಕ ನೌಕೆ ಮತ್ತು ಕ್ರೂಸರ್ಗಳಲ್ಲಿ ಬಳಸಬಹುದಾಗಿದೆ.
ಯುದ್ಧ, ಸರ್ವೇಕ್ಷಣೆ, ಶೋಧ, ರಕ್ಷಣಾ ಕಾರ್ಯಾ, ಸರಕು ಸಾಗಾಟ ಮುಂತಾದ ಹತ್ತು ಹಲವು ಕಾರ್ಯಗಳನ್ನು ಈ ಹೆಲಿಕಾಫ್ಟರ್ಗಳು ಮಾಡುತ್ತವೆ. ಹಿಂದೂ ಮಹಾಸಾಗರದಲ್ಲಿ ಭಾರತಕ್ಕೆ ಬೆದರಿಕೆಯೊಡ್ಡುತ್ತಿರುವ ಚೀನಾವನ್ನು ಸಮರ್ಥವಾಗಿ ಎದುರಿಸಲು ಈ ಹೆಲಿಕಾಫ್ಟರ್ಗಳು ಅತ್ಯಂತ ಉಪಯುಕ್ತ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ಇತ್ತೀಚಿಗೆ ನಡೆದ ಜಿ-20 ಸಮಿತ್ನ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಸೀಹಾಕ್ ಹೆಲಿಕಾಫ್ಟರ್ ಖರೀದಿಯ ಬಗ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆಯನ್ನು ನಡೆಸಿದ್ದರು. ಒಂದು ಬಾರಿ ಈ ಹೆಲಿಕಾಫ್ಟರ್ಗಳು ಭಾರತೀಯ ನೌಕಾ ಸೇನೆಯನ್ನು ಸೇರ್ಪಡೆಗೊಂಡರೆ ನೌಕಾಸೇನೆ ಅಸೀಮ ಬಲ ದೊರೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.