ನವದೆಹಲಿ: 2018-19ರ ಆರ್ಥಿಕ ವರ್ಷವು ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ)ಯ ವಿಷಯದಲ್ಲಿ ಸಂತೋಷದಾಯಕವಾಗಿ ಅಂತ್ಯಗೊಂಡಿದೆ. ಜಿಎಸ್ಟಿ ಆರಂಭವಾದ 21 ತಿಂಗಳಲ್ಲೇ 2019ರ ಮಾರ್ಚ್ ತಿಂಗಳಲ್ಲಿ ಅತ್ಯಧಿಕ ಮಾಸಿಕ ಜಿಎಸ್ಟಿ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಮಾರ್ಚ್ನಲ್ಲಿ ರೂ.1.06 ಟ್ರಿಲಿಯನ್ ಸಂಗ್ರಹವಾಗಿದೆ.
FY19 ರಲ್ಲಿ ನಾಲ್ಕನೇ ಬಾರಿಗೆ ಮಾಸಿಕ ಜಿಎಸ್ಟಿ ಸಂಗ್ರಹವು 1 ಲಕ್ಷ ಕೋಟಿ ರೂ. ಅನ್ನು ದಾಟಿದೆ. ಅಂದರೆ ನಿಗದಿಪಡಿಸಿದ ಗುರಿಯನ್ನೂ ಮೀರಿದ ಸಂಗ್ರಹವಾಗಿದೆ.
ಇದರೊಂದಿಗೆ, ವರ್ಷದಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್ಟಿ ಮೊತ್ತವು 11.77 ಲಕ್ಷ ಕೋಟಿ ರೂ. ಗೆ ಏರಿದೆ. ಆರಂಭಿಕ ವಾರ್ಷಿಕ ನಿರೀಕ್ಷೆಗೆ ಇನ್ನೂ 75 ಸಾವಿರ ಕೋಟಿ ರೂ. ಬಾಕಿ ಇದೆ.
ರೂ. 11.5 ಟ್ರಿಲಿಯನ್ಗಳ ನೇರ ತೆರಿಗೆ ಸಂಗ್ರಹ (12 ಟ್ರಿಲಿಯನ್ಗಳ ಬಜೆಟ್ ಗುರಿಯ ವಿರುದ್ಧ)ವು, ತೆರಿಗೆ ಕೊರತೆಯ ಬಗೆಗಿನ ಸರಕಾರದ ಚಿಂತೆಯನ್ನು ಸ್ವಲ್ಪಮಟ್ಟಿಗೆ ತಗ್ಗಿಸಿದೆ. ಇತ್ತೀಚಿನ ಅಂಕಿ ಅಂಶಗಳು ಹಣಕಾಸಿನ ಕೊರತೆಯ ಗುರಿಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸರಕಾರಕ್ಕೆ ನೆರವಾಗಲಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
“ವರ್ಷಕ್ಕೆ ಹೋಲಿಸಿದರೆ ಮಾಸಿಕ ಸರಾಸರಿ ಜಿಎಸ್ಟಿ ಆದಾಯವು 98,114 ಕೋಟಿ ರೂ. ಆಗಿದ್ದು, 2017-18 ರಲ್ಲಿ ಶೇ. 9.2 ರಷ್ಟು ಹೆಚ್ಚಾಗಿದೆ. ಇತ್ತೀಚಿನ ಅಂಕಿ-ಅಂಶಗಳಲ್ಲಿ ವಿವಿಧ ದರ ತರ್ಕಬದ್ಧತೆಯ ಕ್ರಮಗಳ ಹೊರತಾಗಿಯೂ ಆದಾಯ ಬೆಳವಣಿಗೆಯು ಹೆಚ್ಚುತ್ತಿದೆ ಎಂದು ಈ ಅಂಕಿ ಅಂಶಗಳು ತಿಳಿಸಿವೆ’ ಎಂದು ಹಣಕಾಸು ಸಚಿವಾಲಯ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
ಮಾರ್ಚ್ನ ಒಟ್ಟು ಜಿಎಸ್ಟಿ ಸಂಗ್ರಹಣೆಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 16 ರಷ್ಟು ಹೆಚ್ಚಳವಾಗಿದೆ. ಸೆಂಟ್ರಲ್ ಜಿಎಸ್ಟಿ (ಸಿಜಿಎಸ್ಟಿ) ರೂ 20,353 ಕೋಟಿ ಮತ್ತು ಸ್ಟೇಟ್ ಜಿಎಸ್ಟಿ ಮತ್ತು ಇಂಟಿಗ್ರೇಟೆಡ್ ಜಿಎಸ್ಟಿ ಕ್ರಮವಾಗಿ ರೂ 27,520 ಕೋಟಿ ಮತ್ತು 50,418 ಕೋಟಿ ರೂ. ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.