ನವದೆಹಲಿ: ಎರಡು ದಿನಗಳ ರಷ್ಯಾ ಪ್ರವಾಸದಲ್ಲಿರುವ ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿ.ಕೆ. ಗೋಖಲೆ ಅವರು ಸೋಮವಾರ, ರಷ್ಯಾದ ಉಪ ವಿದೇಶಾಂಗ ಸಚಿವ ಸೆರ್ಗೆ ರೈಬ್ಕೋವ್ ಅವರನ್ನು ಭೇಟಿಯಾದರು ಮತ್ತು ನ್ಯೂಕ್ಲಿಯರ್ ಸಪ್ಲೈಯರ್ಸ್ ಗ್ರೂಪ್ (ಎನ್ಎಸ್ ಜಿ) ಯ ಭಾರತ ಸದಸ್ಯತ್ವ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದರು.
‘ಬ್ರಿಕ್ಸ್ ಮಾದರಿಯಡಿಯಲ್ಲಿ ಸಹಕಾರದ ಬಗ್ಗೆ ಚರ್ಚೆ ನಡೆಸಲಾಯಿತು, ಎನ್ಎಸ್ ಜಿ ಸದಸ್ಯತ್ವಕ್ಕಾಗಿ ನವದೆಹಲಿಯ ಅರ್ಜಿ, ಇತರ ಪ್ರಸರಣ ಮತ್ತು ಶಸ್ತ್ರಾಸ್ತ್ರ ನಿಯಂತ್ರಣ ಸಮಸ್ಯೆಗಳು ಸೇರಿದಂತೆ ಪ್ರಮುಖ ಬಹುಪಕ್ಷೀಯ ರಫ್ತು ನಿಯಂತ್ರಣಗಳ ಪ್ರಸಕ್ತ ವಿವಾದಗಳು, ಹಾಗೆಯೇ ಅಂತರಾಷ್ಟ್ರೀಯ ವಿಷಯಗಳ ಪರಸ್ಪರ ಆಸಕ್ತಿಯ ಕುರಿತು ಚರ್ಚೆ ನಡೆಸಲಾಯಿತು” ಎಂದು ರಷ್ಯಾ ಪ್ರಕಟನೆಯಲ್ಲಿ ತಿಳಿಸಿದೆ.
ರಷ್ಯಾದ ಅಧ್ಯಕ್ಷ ಪುಟಿನ್ ಮತ್ತು ಪ್ರಧಾನಿ ಮೋದಿ ಅವರು ಈ ವರ್ಷ ಎರಡು ಬಾರಿ ಮಾತುಕತೆ ನಡೆಸಿದ್ದಾರೆ. ಜನವರಿ 1ರ ಹೊಸ ವರ್ಷದಂದು ಮತ್ತು ಎರಡನೆಯದು ಫೆ.27ರಂದು, ಈ ವೇಳೆ ಪುಲ್ವಾಮಾ ಭಯೋತ್ಪಾದಕ ದಾಳಿಯ ಬಗ್ಗೆ ಅಧ್ಯಕ್ಷ ಪುಟಿನ್ ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದರು.
ರಷ್ಯಾ ಅಧ್ಯಕ್ಷರು, ಪ್ರಧಾನಿ ಮೋದಿಯವರನ್ನು ಈ ವರ್ಷದ ಕೊನೆಯಲ್ಲಿ ಪೂರ್ವ ರಷ್ಯನ್ ನಗರ ವ್ಲಾಡಿವೋಸ್ಟಾಕ್ನಲ್ಲಿ ನಡೆಯಲಿರುವ ಈಸ್ಟರ್ನ್ ಎಕನಾಮಿಕ್ ಫೋರಮ್ಗೆ ಆಗಮಿಸುವಂತೆ ಆಹ್ವಾನಿಸಿದ್ದಾರೆ.
ಎರಡೂ ದೇಶಗಳ ನಡುವಿನ ಎರಡನೇ ಅನೌಪಚಾರಿಕ ಶೃಂಗಸಭೆಯು ಈ ವರ್ಷ ಭಾರತದಲ್ಲಿ ನಡೆಯುವ ನಿರೀಕ್ಷಿ ಇದೆ. ಕಳೆದ ವರ್ಷ ರಷ್ಯಾದಲ್ಲಿ ಮೊದಲ ಬಾರಿಗೆ ನಡೆದಿತ್ತು.
ರಷ್ಯಾ ಭಾರತದ ದೀರ್ಘಕಾಲದ ಮಿತ್ರರಾಷ್ಟ್ರವಾಗಿದ್ದು, ವಿಶ್ವಸಂಸ್ಥೆಯಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝಾರ್ನನ್ನು ಕಪ್ಪು ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಅದು ಭಾರತವನ್ನು ಬೆಂಬಲಿಸಿದೆ. ರಷ್ಯಾವು ರಕ್ಷಣಾ ವಲಯದಲ್ಲಿ ಭಾರತದ ಪ್ರಮುಖ ಪೂರೈಕಾದಾರ ರಾಷ್ಟ್ರವಾಗಿದೆ. ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಕಳೆದ ವರ್ಷ ಎಸ್-400 ಒಪ್ಪಂದವನ್ನು ಎರಡೂ ದೇಶಗಳು ಅಂತಿಮಗೊಳಿಸಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.