ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ 687 ಫೇಸ್ಬುಕ್ ಪೇಜ್ಗಳನ್ನು ಮತ್ತು ಅಕೌಂಟ್ಗಳನ್ನು ರದ್ದುಗೊಳಿಸಿರುವುದಾಗಿ ಫೇಸ್ಬುಕ್ ಇಂಕ್ ಹೇಳಿದೆ. ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ‘ಸಂಘಟಿತ ಅನಧಿಕೃತ ವರ್ತನೆ’ಯ ಹಿನ್ನಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದೆ. ಲೋಕಸಭಾ ಚುನಾವಣೆ ಆರಂಭವಾಗುವುದಕ್ಕೂ ಮುಂಚಿತವಾಗಿ ಈ ಬೆಳವಣಿಗೆ ನಡೆದಿದೆ.
ಭಾರತದಲ್ಲಿ 300 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ ಪ್ರಮುಖ ರಾಜಕೀಯ ಪಕ್ಷವೊಂದರ ವಿರುದ್ಧ ಅತ್ಯಂತ ಅಪರೂಪದ ಕ್ರಮವನ್ನು ಜರುಗಿಸಿದೆ. ವಿಶ್ವಕ್ಕೆ ಹೋಲಿಸಿದರೆ ಫೇಸ್ಬುಕ್ಗೆ ಭಾರತದಲ್ಲೇ ಹೆಚ್ಚು ಬಳಕೆದಾರರಿದ್ದಾರೆ.
Facebook: We removed 687 Facebook Pages & accounts-the majority of which had already been detected&suspended by our automated systems-that engaged in coordinated inauthentic behavior in India &were linked to individuals associated with an IT Cell of the Indian National Congress https://t.co/lWA2BJgUfg
— ANI (@ANI) April 1, 2019
ವ್ಯಕ್ತಿಗಳು ಫೇಕ್ ಖಾತೆಗಳನ್ನು ರಚಿಸಿ ಮತ್ತು ತಮ್ಮ ಕಂಟೆಂಟ್ಗಳನ್ನು ಇತರ ಗ್ರೂಪ್ಗಳೊಂದಿಗೆ ಸೇರಿ ಹಂಚಿಕೊಳ್ಳುತ್ತಿದ್ದಾರೆ, ಈ ಮೂಲಕ ತಮ್ಮ ಸುಳ್ಳು ಸುದ್ದಿಗಳ ವಿಷಯವನ್ನು ಹೆಚ್ಚಿನ ಪ್ರಮಾಣದಲ್ಲಿ ಹರಿದಾಡುವಂತೆ ಮಾಡುತ್ತಿದ್ದಾರೆ. ಇವರ ಪೋಸ್ಟ್ಗಳು ಸ್ಥಳೀಯ ಸುದ್ದಿಗಳು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ರಾಜಕೀಯ ವಿರೋಧಿಗಳ ವಿರುದ್ಧದ ಟೀಕೆಗಳನ್ನು ಒಳಗೊಂಡಿರುತ್ತದೆ ಎಂದು ಫೇಸ್ಬುಕ್ ಹೇಳಿದೆ.
‘ಇಂತಹ ಚಟುವಟಿಕೆಯ ಹಿಂದಿರುವವರು ತಮ್ಮ ಗುರುತನ್ನು ಮುಚ್ಚಿಟ್ಟುಕೊಳ್ಳಬಯಸುತ್ತಿದ್ದಾರೆ, ಇಂತಹವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಐಟಿ ಸೆಲ್ ನೊಂದಿಗೆ ಸಂಬಂಧಿಸಿದವರು ಎಂಬುದು ನಮ್ಮ ಪರಿಶೀಲನೆಯಿಂದ ತಿಳಿದು ಬಂದಿದೆ’ ಎಂದು ಫೇಸ್ಬುಕ್ ಸೈಬರ್ ಸೆಕ್ಯೂರಿಟಿ ಮುಖ್ಯಸ್ಥ ನಥಾನಿಯಲ್ ಗ್ಲೀಚರ್ ತಿಳಿಸಿದ್ದಾರೆ.
ಇಂತಹ ವ್ಯಕ್ತಿಗಳ ವರ್ತನೆಯನ್ನು ನೋಡಿ ಖಾತೆಯನ್ನು ರಿಮೂವ್ ಮಾಡಲಾಗುತ್ತಿದೆಯೇ ಹೊರತು ಅವರು ಪೋಸ್ಟ್ ಮಾಡಿರುವ ಕಂಟೆಂಟ್ ನೋಡಿ ಅಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಪಾಕಿಸ್ಥಾನ ಮೂಲದ, ಅಲ್ಲಿನ ನಟೋರಿಯಸ್ ಗುಪ್ತಚರ ISIಗೆ ಸಂಬಂಧಿಸಿದ 227 ಪೇಜ್ ಮತ್ತು 94 ಖಾತೆಗಳನ್ನು ಡಿಲೀಟ್ ಮಾಡುತ್ತಿರುವುದಾಗಿ ಫೇಸ್ಬುಕ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.